ETV Bharat / bharat

ಈರುಳ್ಳಿ ಕಣ್ಣೀರು ತರಿಸುತ್ತಿದೆ.. ಯಾಕೆ ಹೀಗೆ?

author img

By

Published : Dec 3, 2019, 5:52 PM IST

ಅಂತಾರಾಷ್ಟ್ರೀಯ ಈರುಳ್ಳಿ ಉತ್ಪಾದಕರ ಮಾರುಕಟ್ಟೆಯಲ್ಲಿ ಚೀನಾದ ನಂತರ ಭಾರತ 2ನೇ ಸ್ಥಾನದಲ್ಲಿದೆ. ಅನಿರೀಕ್ಷಿತ ಮಳೆಯಿಂದಾಗಿ ಇಳುವರಿ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಮೂರು ವಾರಗಳಲ್ಲಿ ಈರುಳ್ಳಿಯನ್ನು ಆಮದು ಮಾಡಿಕೊಳ್ಳುವುದಾಗಿ ಕೇಂದ್ರ ಸಚಿವ ರಾಮವಿಲಾಸ್‌ ಪಾಸ್ವಾನ್‌ ಹೇಳಿದ್ದಾರೆ. ಇದರಿಂದಾಗಿ ಲಭ್ಯತೆ ಸುಧಾರಿಸುವ ಜೊತೆಗೆ ದೇಶಿ ಸರಬರಾಜು ಹೆಚ್ಚಳವಾಗಬಹುದು ಎಂಬುದು ಈ ಕ್ರಮದ ಉದ್ದೇಶ.

Teary Onions: Government in jitters
ಕಣ್ಣೀರು ತರಿಸುವ ಈರುಳ್ಳಿ

ಭಾರತದಲ್ಲಿ ದೀಪಾವಳಿ ಮುಗಿದು ಬಹುತೇಕ ಒಂದು ತಿಂಗಳೇ ಆಗಿದ್ದರೂ ಈ ದಿನಗಳಲ್ಲಿ ದೇಶಾದ್ಯಂತ ಎಲ್ಲಾ ಅಡುಗೆ ಮನೆಗಳಲ್ಲಿ ʼಈರುಳ್ಳಿ ಬಾಂಬ್‌ಗಳುʼ ಈಗಲೂ ಸಿಡಿಯುತ್ತಲೇ ಇವೆ. ಈರುಳ್ಳಿ ಬೆಲೆ, ಅದೂ ಸಗಟು ಮಾರುಕಟ್ಟೆಯಲ್ಲಿ, ಕೆಜಿಗೆ ರೂ. 100/- ದಾಟಿದ್ದು ಹೇಗೆಂದು ಇಡೀ ದೇಶವೇ ಅಚ್ಚರಿಗೆ ಒಳಗಾಗಿದೆ!! ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಸಂಗಾನೆರ್‌ನಂತಹ ಸ್ಥಳಗಳ ಮಾರುಕಟ್ಟೆಗಳಲ್ಲಿ ಈರುಳ್ಳಿಯನ್ನು ಕೆಜಿಗೆ ರೂ. 110 ರಂತೆ ಮಾರಾಟ ಮಾಡಲಾಗುತ್ತಿದೆ. ಕೊಯಮತ್ತೂರಿನಂತಹ ನಗರಗಳು ಹಾಗೂ ದಕ್ಷಿಣ ಭಾರತದ ಭಾಗಗಳಲ್ಲಿ, ದೊಡ್ಡ ಗಾತ್ರದ ಈರುಳ್ಳಿ ರೂ. 100 ಮಾರಾಟವಾಗುತ್ತಿದ್ದರೆ, ಸಣ್ಣ ಗಾತ್ರದ ಗಡ್ಡೆಗಳು ಕೆಜಿಗೆ ರೂ. 130 ರವರೆಗೆ ಮಾರಾಟವಾಗುತ್ತಿವೆ.

ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಈರುಳ್ಳಿಯ ಬೆಲೆ 80 ರೂಪಾಯಿ ತಲುಪಿದೆ ಎಂದು ಖುದ್ದು ರಾಷ್ಟ್ರೀಯ ಕೃಷಿ ಮಂಡಳಿಯೇ ಘೋಷಿಸಿದೆ. ಈ ಮುಂಚಿನ ಎಲ್ಲಾ ಬೆಲೆ ದಾಖಲೆಗಳನ್ನು ಮೀರಿ ಬೆಲೆ ಆಕಾಶಕ್ಕೆ ಚಿಮ್ಮಿದೆ. ಹೈದರಾಬಾದ್‌, ನಾಗಪುರ, ಭೋಪಾಲ್‌ನಂತಹ ನಗರಗಳಲ್ಲಿ ಈರುಳ್ಳಿ ಬೆಲೆ ಅಸಂಖ್ಯಾತ ಗ್ರಾಹಕರ ಜೇಬುಗಳಿಗೆ ಬೆಂಕಿ ಇಟ್ಟಿದೆ. ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಗುಜರಾತ್‌, ರಾಜಸ್ತಾನ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಅಕಾಲಿಕ ಜೋರು ಮಳೆ ಸುರಿದಿರುವುದರಿಂದ ಇಳುವರಿ ಬಾಧಿತವಾಗಿದೆ.

ಅಂತಾರಾಷ್ಟ್ರೀಯ ಈರುಳ್ಳಿ ಉತ್ಪಾದಕರ ಮಾರುಕಟ್ಟೆಯಲ್ಲಿ ಚೀನಾದ ನಂತರ ಭಾರತ 2ನೇ ಸ್ಥಾನದಲ್ಲಿದೆ. ಅನಿರೀಕ್ಷಿತ ಮಳೆಯಿಂದಾಗಿ ಇಳುವರಿ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಮೂರು ವಾರಗಳಲ್ಲಿ ಈರುಳ್ಳಿಯನ್ನು ಆಮದು ಮಾಡಿಕೊಳ್ಳುವುದಾಗಿ ಕೇಂದ್ರ ಸಚಿವ ರಾಮವಿಲಾಸ್‌ ಪಾಸ್ವಾನ್‌ ಹೇಳಿದ್ದಾರೆ. ಇದರಿಂದಾಗಿ ಲಭ್ಯತೆ ಸುಧಾರಿಸುವ ಜೊತೆಗೆ ದೇಶಿ ಸರಬರಾಜು ಸುಧಾರಿಸಬಹುದು ಎಂಬುದು ಈ ಕ್ರಮದ ಉದ್ದೇಶ. ಈರುಳ್ಳಿಯ ಆಮದು ಹಾಗೂ ಸರಬರಾಜು ಮಾಡುವ ಜವಾಬ್ದಾರಿಯನ್ನು ವಾಣಿಜ್ಯ ಸಂಘಟನೆಯಾದ ಎಂಎಂಟಿಸಿಗೆ ನೀಡಲಾಗಿದ್ದು, ಡಿಸೆಂಬರ್‌ 15, 2019ರೊಳಗೆ ಆಮದು ಪೂರ್ತಿಯಾಗಲಿದೆ. ನಂತರ ನ್ಯಾಫೆಡ್‌ (ಭಾರತದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ) ಮೂಲಕ ಅದು ಎಲ್ಲಾ ರಾಜ್ಯಗಳಿಗೆ ವಿತರಣೆಯಾಗಲಿದೆ. ಸಹಾಯಧನದ ಮೂಲಕ ಖರೀದಿಸಿದ ಈರುಳ್ಳಿಯ ಬೆಲೆಯನ್ನು ಕಡಿಮೆ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ರಾಜ್ಯಗಳು ಒತ್ತಾಯಿಸುತ್ತಿದ್ದು, ಈ ಬೆಳವಣಿಗೆಗಳನ್ನು ಗಮನಿಸಿದರೆ, ಗ್ರಾಹಕರಿಗೆ ಏನಾದರೂ ಲಾಭ ಸಿಗಬಹುದೇ ಎಂಬ ಅಂಶ ಈಗಲೂ ಅಸ್ಪಷ್ಟವಾಗಿಯೇ ಇದೆ.

ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿಢೀರನೇ ಏರುವ ಮೂಲಕ ಗ್ರಾಹಕರು ಕಣ್ಣೀರು ಸುರಿಸುವಂತಾಗುವುದು ಆಗಾಗ ಪುನರಾವರ್ತನೆಯಾಗುತ್ತಲೇ ಇರುವಂತಹ ವಿದ್ಯಮಾನ. ಈರುಳ್ಳಿ ಬೆಲೆ ಕೆಜಿಗೆ ರೂ. 60 ದಾಟದಂತೆ ಸೂಕ್ತ ಕ್ರಮಗಳನ್ನು ಕ್ಷಿಪ್ರವಾಗಿ ತೆಗೆದುಕೊಳ್ಳುವುದು ತನಗೆ ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರವೇ ಎರಡು ವರ್ಷಗಳ ಹಿಂದೆ ಬಹಿರಂಗವಾಗಿ ಒಪ್ಪಿಕೊಂಡಿತ್ತು.

ಈ ವರ್ಷ, ಪ್ರತಿಯೊಂದು ರಾಜ್ಯಕ್ಕೂ ಸೆಪ್ಟೆಂಬರ್‌ ಒಳಗಾಗಿ, ಬೇಕಾದ ಪ್ರಮಾಣವನ್ನು ಪೂರೈಸುವುದಾಗಿ ಕೇಂದ್ರ ಸರಕಾರ ಭರವಸೆ ಕೊಟ್ಟಿತ್ತು. ಹೀಗಿದ್ದರೂ, ಭರವಸೆ ನೀಡಿದ ರೀತಿ, ಬೇಡಿಕೆಯ ಬಹು ಭಾಗವನ್ನು ಪೂರೈಸುವುದು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಎರಡೇ ತಿಂಗಳಲ್ಲಿ ಈರುಳ್ಳಿ ಬೆಲೆ ಯಾವ ಪ್ರಮಾಣದಲ್ಲಿ ಏರಿಕೆಯಾಯಿತೆಂದರೆ, ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದನ್ನು ನಂಬುವುದೇ ಕಷ್ಟವಾಗಿದೆ.

ಅದರಲ್ಲಿಯೂ ಸರಕಾರ ಈ ಸಲ ರಫ್ತು ಸಹಾಯಧನವನ್ನು ಹಿಂಪಡೆದಿದ್ದು ಪರಿಸ್ಥಿತಿ ಅಪಾಯಕಾರಿಯಾಗುವ ಹಂತದಲ್ಲಿ. ಚಿಲ್ಲರೆ ಮಾರಾಟಗಾರರಿಗೆ 100 ಕ್ವಿಂಟಲ್‌ವರೆಗೆ ಹಾಗೂ ಸಗಟು ಮಾರಾಟಗಾರರಿಗೆ 500 ಕ್ವಿಂಟಲ್‌ವರೆಗೆ ಮಾತ್ರ ಸಂಗ್ರಹಿಸುವ ಅವಕಾಶ ನೀಡಲಾಯಿತು. ಈಜಿಪ್ತ್‌ನಂತಹ ದೇಶಗಳಿಂದ ತುರ್ತು ಆಮದು ಮಾಡಿಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ವಿವಿಧ ರಾಜ್ಯಗಳು, ತಮ್ಮದೇ ಆದ ರಿಯಾಯಿತಿ ದರಗಳಲ್ಲಿ ಈರುಳ್ಳಿಯನ್ನು ಮಾರಲು ಪ್ರಾರಂಭಿಸಿದವು.

ಹೀಗಿದ್ದರೂ, ಈ ನೆರವಿನ ಕ್ರಮಗಳು ಖರೀದಿದಾರರಿಗೆ ಹೆಚ್ಚಿನ ಪ್ರಯೋಜನ ತರಲಿಲ್ಲ. ಈ ರೀತಿಯ ಚಟುವಟಿಕೆಗಳು ಮತ್ತಷ್ಟು ಗೋಜಲುಗಳಲ್ಲಿ ಸಿಲುಕಿಸುತ್ತವಷ್ಟೇ. ಬೆಲೆಗಳು ಯಾವಾಗ ಇಳಿಯುವವೋ ಎಂದು ಗ್ರಾಹಕರು ಹಾಗೂ ತಾವು ಮಾಡಿರುವ ವೆಚ್ಚವಾದರೂ ವಾಪಾಸ್‌ ಬರುತ್ತದೋ ಇಲ್ಲವೋ ಎಂದು ರೈತರು ಚಿಂತಿತರಾಗಿದ್ದಾರೆ. ಏಕೆಂದರೆ, ಗುಜರಾತ್‌, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಪಂಜಾಬ್‌ ರಾಜ್ಯಗಳಲ್ಲಿ, ಬಳಕೆ ಪ್ರಮಾಣ ಏನೇ ಇದ್ದರೂ, ಬಟಾಣೆ, ಟೊಮ್ಯಾಟೊ ಮತ್ತು ಆಲೂಗಡ್ಡೆ ಉತ್ಪನ್ನಗಳ ಬೆಲೆಗಳು ಹೊಯ್ದಾಟದಲ್ಲೇ ಇವೆ.

ನಿಶ್ಚಿತ ಬೆಳೆಯೊಂದರ ಬೆಳೆಗಾರರು ಮತ್ತು ಗ್ರಾಹಕರು ಪರದಾಡುವುದು ಬಹುತೇಕ ಪ್ರತಿ ವರ್ಷ ಕಂಡು ಬರುವ ವಾಸ್ತವವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವಾಗಲೂ, ಅದನ್ನು ತಹಬಂದಿಗೆ ತರಲು ಸರಕಾರಗಳು ಮನಸ್ಸು ಮಾಡುವುದೂ ಬಹಳ ಅಪರೂಪ ಎನಿಸಿದೆ. ಹದಿನಾಲ್ಕು ನೂರು ಕೋಟಿ ಹೆಕ್ಟೇರ್‌ಗೂ ಹೆಚ್ಚು ಕೃಷಿ ಭೂಮಿ ಇರುವ ದೇಶ ನಮ್ಮದು. ಚೀನಾ ದೇಶ ತನ್ನ ಭೂಪ್ರದೇಶದ ಶೇ. 95ರಷ್ಟರ ಆಹಾರ ಬೇಡಿಕೆಯನ್ನು ಈಡೇರಿಸಲು ಸಾಧ್ಯವಿರುವಾಗ, ದ್ವಿದಳ ಧಾನ್ಯಗಳು, ಖಾದ್ಯ ತೈಲ ಮತ್ತು ಈರುಳ್ಳಿಯನ್ನು ಭಾರತ ಏಕೆ ಆಮದು ಮಾಡಿಕೊಳ್ಳುತ್ತಿದೆ? ಮಿಶ್ರ ಬೆಳೆ ಪದ್ಧತಿಯನ್ನು ಅನುಸರಿಸುವ ಮೂಲಕ ದಶಕಗಳಿಂದಲೂ ಕಾಡುತ್ತಿರುವ ಈ ಸಮಸ್ಯೆಯಿಂದ ಭಾರತ ಸುಲಭವಾಗಿ ಮುಕ್ತವಾಗಬಹುದು.

ಯಾವ ಬೆಳೆಗಳಿಗೆ ರಿಯಾಯಿತಿ ಇದೆ ಎಂಬ ನಿರ್ದಿಷ್ಟ ಮಾಹಿತಿಯನ್ನು ದೇಶಾದ್ಯಂತ ಪಂಚಾಯತ್​ ಮಟ್ಟದಲ್ಲಿ ಸಂಗ್ರಹಿಸಿ ಅವನ್ನು ದಾಖಲಿಸಬೇಕಿದೆ. ಯಾವ ತಳಿಗಳನ್ನು ಬೆಳೆಯಬೇಕು ಹಾಗೂ ಆ ತಳಿಯ ಮೇಲೆ ಸ್ಥಳೀಯ ವಾತಾವರಣದ ಪ್ರಭಾವ ತಗ್ಗಿಸಲು ಎಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಸರಕಾರಿ ಇಲಾಖೆಗಳು ಹಾಗೂ ಕೃಷಿ ಸಂಶೋಧನಾ ಸಂಸ್ಥೆಗಳು ರೈತ ಸಮುದಾಯಕ್ಕೆ ಸಲಹೆ ಸೂಚನೆಗಳನ್ನು ನೀಡಬೇಕು. ಆ ಮೂಲಕ ಗರಿಷ್ಠ ಇಳುವರಿಯ ಗುರಿ ತಲುಪಲು ನೆರವಾಗಬೇಕು.

ಸಮಗ್ರ ಬೆಲೆ ನಿಷ್ಕರ್ಷೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ, ರೈತರು ಯಾವ ಹಂತದಲ್ಲಿಯೂ ತೊಂದರೆಗೆ ಸಿಲುಕದ ರೀತಿ ಸರಕಾರ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿಶ್ಚಿತ ಬೆಳೆಯೊಂದಕ್ಕೆ ಸೂಕ್ತವಾಗಿರದ ಪರಿಸ್ಥಿತಿ ಬಂದಾಗ, ವಿದೇಶಿ ಆಮದಿನ ಮೂಲಕ ಅದನ್ನು ನಿಭಾಯಿಸುವ ಉದ್ದೇಶದಿಂದ, ಸಾಕಷ್ಟು ಮುಂಚೆಯೇ ಈ ಕುರಿತು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

ಇಳುವರಿ ಸಮೃದ್ಧವಾಗಿ ಬಂದ ಸಂದರ್ಭದಲ್ಲಿ ಅವನ್ನು ರಫ್ತು ಮಾಡುವ ಸಾಧ್ಯತೆಗಳ ಕುರಿತು ಮೊದಲೇ ಪೂರ್ತಿಯಾಗಿ ಮೌಲ್ಯಮಾಪನ ಮಾಡಿಕೊಂಡಿರಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳ ಕೃಷಿ ಸಚಿವಾಲಯಗಳ ಮೂಲಕ ಇಂತಹ ದೀರ್ಘಕಾಲೀನ ಯೋಜನೆಗಳು ಹಾಗೂ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಕಡ್ಡಾಯವಾಗಿ ಜಾರಿಗೊಳ್ಳಲೇಬೇಕಾದ ಮೂಲಭೂತ ಅಂಶಗಳಾಗಬೇಕು.

ಆದರೆ, ಜಿಲ್ಲಾ ಮಟ್ಟಗಳಲ್ಲಿ ಬೆಳೆ ಯೋಜನೆ, ಸಾಗಾಟ ಮತ್ತು ದಾಸ್ತಾನು ಸೌಲಭ್ಯಗಳನ್ನು ಒದಗಿಸುವುದರಲ್ಲಿ ಸರಕಾರಗಳು ತೋರುತ್ತಿರುವ ಸೋಮಾರಿತನದಿಂದಾಗಿ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರ ವಿಸ್ತರಿಸುತ್ತಲೇ ಇದೆ. ಇದರಿಂದಾಗಿ ವಿದೇಶಿ ಆಮದಿನ ಮೇಲೆ ಅವಲಂಬನೆಯಾಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಸರಕಾರಿ ಸಂಸ್ಥೆಗಳು ಮುಂದೆ ಬಂದು, ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಳ್ಳುವ ಮೂಲಕ ದೇಶದಲ್ಲಿ ಇಳುವರಿ ಸುಧಾರಿಸುವ ಏಕೈಕ ಉದ್ದೇಶದ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕಿದೆ. ಇಂತಹ ಸನ್ನಿವೇಶ ರೂಪುಗೊಂಡಾಗ ಮಾತ್ರ, ಈರುಳ್ಳಿ ಬಳಕೆದಾರರ ಕಣ್ಣು ತುಂಬಿರುವ ದುಃಖದ ಕಾರ್ಮೋಡಗಳನ್ನು ನಿವಾರಿಸುವ ನಿರೀಕ್ಷೆಯನ್ನು ನಾವು ಮಾಡಬಹುದು!!

Intro:Body:

national

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.