ETV Bharat / bharat

ಆನ್​ಲೈನ್​ ಜೊತೆ ಆಫ್​ಲೈನ್​ ಪಾಠ: ಶಿಕ್ಷಣದ ಲಾಭ ಪಡೆಯುತ್ತಿದ್ದಾರೆ ಲಕ್ಷಾಂತರ ಮಕ್ಕಳು!

ಇಡೀ ಜಗತ್ತೇ ಕೊರೊನಾ ವೈರಸ್​ಗೆ ಹೆದರಿದೆ. ದೇಶದಲ್ಲಿ ಈಗ ಮಕ್ಕಳ ಅಭ್ಯಾಸದ ಬಗ್ಗೆಯೇ ದೊಡ್ಡ ಚಿಂತೆಯಾಗುತ್ತಿದೆ. ಎಲ್ಲ ಶಾಲಾ - ಕಾಲೇಜ್​ ಬಂದ್ ಆಗಿವೆ. ಕೊರೊನಾ ಕಾಲದಲ್ಲಿ ಮಕ್ಕಳು ಸಹ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಪ್ರಭಾವಿತರಾಗುತ್ತಿಲ್ಲ. ಹೀಗಾಗಿ ಪ್ರತಿ ಶಿಕ್ಷಣದ ವಿಭಾಗವು ಆನ್​ಲೈನ್​ ಮೂಲಕ ತೆರೆಯಲಾಗುತ್ತಿದೆ.

Offline classes, Offline classes in chhattisgarh, chhattisgarh Offline classes news, ಆಫ್​ಲೈನ್​ ಕ್ಲಾಸ್​, ಛತ್ತೀಸ್​ಗಢ್​ನಲ್ಲಿ ಆಫ್​ಲೈನ್​ ಕ್ಲಾಸ್​, ಛತ್ತೀಸ್​ಗಢ್​ನಲ್ಲಿ ಆಫ್​ಲೈನ್​ ಕ್ಲಾಸ್ ಸುದ್ದಿ,
ಆನ್​ಲೈನ್​ ಜೊತೆ ಆಫ್​ಲೈನ್​ ಪಾಠ
author img

By

Published : Jun 4, 2020, 1:28 PM IST

ನಾರಾಯಣಪುರ: ಇನ್ನು ಛತ್ತೀಸ್​ಗಢ್​ನಲ್ಲಿ ‘ಪಡಾಯಿ ತುಮಾರಾ ದ್ವಾರ್​’ (ಅಭ್ಯಾಸವೇ ನಿನ್ನ ಬಾಗಿಲು) ಎಂಬ ಆನ್​ಲೈನ್​ ಪೊರ್ಟಲ್​ ಶುರುಮಾಡಿದ್ದಾರೆ. ಈ ಮೂಲಕ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ.

ಆನ್​ಲೈನ್​ ಜೊತೆ ಆಫ್​ಲೈನ್​ ಪಾಠ

ಇನ್ನು ಛತ್ತೀಸ್​ಗಢ್​ದಲ್ಲಿ ನಕ್ಸಲ್​ ಪ್ರಭಾವಿತ ಏರಿಯಾಗಳು ಸಹ ಇವೆ. ಅಲ್ಲಿ ಸರಿಯಾಗಿ ನೆಟ್​ವರ್ಕ್​ ಸಹ ಸಿಗುವುದಿಲ್ಲ. ಅಂತಹ ಗ್ರಾಮದಲ್ಲಿ ಶಿಕ್ಷಣ ಯಾವರೀತಿ ಇರುತ್ತೆ ಗೊತ್ತಾ?.

ಹೌದು, ನಕ್ಸಲ್​ ಪೀಡಿತ ಗ್ರಾಮಗಳಲ್ಲಿ ಸರಿಯಾಗಿ ನೆಟ್​ವರ್ಕ್​ ಸಿಗುವುದಿಲ್ಲ. ಆನ್​ಲೈನ್​ ಅಭ್ಯಾಸಕ್ಕೆ ತೊಂದರೆಯಾಗುವುದು. ಹೀಗಾಗಿ ಇಲ್ಲಿನ ಕೆಲ ಶಿಕ್ಷಕರು ಕೆಲವೊಂದು ಉಪಾಯ ಕಂಡು ಕೊಂಡಿದ್ದಾರೆ.

ಶಿಕ್ಷಕರು ಆಫ್​ಲೈನ್​ ವರ್ಚುಲ್​ ಕ್ಲಾಸ್​ ಶುರು ಮಾಡಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಇದರಿಂದ ಮಕ್ಕಳ ಸಹ ಖುಷಿಯಾಗಿ ಅಭ್ಯಾಸ ಮಾಡುತ್ತಿದ್ದಾರೆ.

ನಾರಾಯಣಪುರ ಗ್ರಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪೋರ್ಟಲ್​ನಲ್ಲಿ ರಿಜಿಸ್ಟರ್​ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಕುಳಿತು ಶಿಕ್ಷಕರು ಪಾಠ ಹೇಳುತ್ತಿದ್ದಾರೆ. ಇದರ ಲಾಭವನ್ನು ಮಕ್ಕಳು ಪಡೆಯುತ್ತಿದ್ದಾರೆ.

ಇನ್ನು ಆಫ್​ಲೈನ್​ ಕ್ಲಾಸ್​ನಿಂದ ಒಂದನೇ ತರಗತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಇನ್ನು ಶಿಕ್ಷಕರು ಮಕ್ಕಳಿಗೆ ಅಭ್ಯಾಸದ ಜೊತೆ ಕೊರೊನಾದಿಂದ ಹೇಗೆ ಜಾಗೃತಗೊಳ್ಳಬೇಕು, ಸ್ಯಾನಿಟೈಸರ್​​​​ ಉಪಯೋಗ, ಸಾಮಾಜಿಕ ಅಂತರದ ಬಗ್ಗೆಯೂ ಸಹ ತಿಳಿಸಿಕೊಡುತ್ತಿದ್ದಾರೆ. ಇನ್ನು ಮಕ್ಕಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಿದ್ದಾರೆ. ಇದಲ್ಲದೇ ಸ್ವಚ್ಛತೆ ಬಗ್ಗೆಯೂ ಅರಿವು ಮೂಡಿಸುತ್ತಿದ್ದಾರೆ.

ಬೆಳಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಶಿಕ್ಷಕರು ಪಾಠ ಹೇಳಿಕೊಡುತ್ತಿದ್ದಾರೆ. ಈ ಎರಡು ಗಂಟೆಯಲ್ಲಿ ಗಣಿತ, ಇಂಗ್ಲಿಷ್​, ವಿಜ್ಞಾನ ಮತ್ತು ಹಿಂದಿ ಪಾಠದ ಬಗ್ಗೆ ಶಿಕ್ಷಕರು ಮಕ್ಕಳಿಗೆ ತಿಳಿಸಿಕೊಡುತ್ತಿದ್ದಾರೆ.

ಇನ್ನು ಸಿಎಂ ಭೂಪೇಶ್​ ಬಘೇಲ್​ ಅವರು ಏಪ್ರಿಲ್​ 7ರಂದು ‘ಪಡಾಯಿ ತುಮಾರಾ ದ್ವಾರ್​’ ಎಂಬ ಯೋಜನೆ​ ಶುರು ಮಾಡಿದ್ದರು. ಈ ಯೋಜನೆಯ ಉದ್ದೇಶ ಮನೆಯಲ್ಲೇ ಕುಳಿತು ಮಕ್ಕಳಿಗೆ ಪಾಠ ನೀಡುವುದಾಗಿದೆ. ಛತ್ತೀಸ್​ಗಢದ ಶಾಸಾನ ಶಾಲಾ ಶಿಕ್ಷಾ ವಿಭಾಗವೂ ಎನ್​ಐಸಿ ಸಹಾಯದಿಂದ ಆನ್​ಲೈನ್​ ಶಿಕ್ಷಣ ಪೋರ್ಟಲ್​ ‘ಪಡಾಯಿ ತುಮಾರಾ ದ್ವಾರ್​’ ಶುರು ಮಾಡಿದರು.

ಈ ಪೋರ್ಟಲ್​ನಲ್ಲಿ ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಕೆಲ ಪಠ್ಯಗಳನ್ನು ಒದಗಿಸಲಾಗಿದೆ. ಇಲ್ಲಿಯವರೆಗೆ ಈ ಪೋರ್ಟಲ್​ನಲ್ಲಿ ಲಕ್ಷಾಂತರ ಮಕ್ಕಳು ರಿಜಿಸ್ಟರ್​ ಆಗಿ ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಪೋರ್ಟಲ್​ನಲ್ಲಿ ಗುರುಗಳದ್ದೇ ಪ್ರಮುಖ ಪಾತ್ರವಾಗಿದೆ. ಆನ್​ಲೈನ್​ ಮತ್ತು ಆಫ್​ಲೈನ್​ನಿಂದ ಲಕ್ಷಾಂತರ ಮಕ್ಕಳು ಅಭ್ಯಾಸ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.