ETV Bharat / bharat

ಇಂದು ಶಿಕ್ಷಕರ ದಿನಾಚರಣೆ: ಇದರ ಹಿನ್ನೆಲೆ ಏನು? - Interesting Facts about Dr. Sarvepalli Radhakrishnan

ಸಪ್ಟೆಂಬರ್ 5 ಅನ್ನು ದೇಶಾದ್ಯಂತ ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾರೆ. ಇದೇ ದಿನ ಮಹಾನ್ ಶಿಕ್ಷಕ ಸರ್ವಪಲ್ಲಿ ರಾಧಾಕೃಷ್ಣ ಅವರ ಹುಟ್ಟುಹಬ್ಬ ಕೂಡ. ಶಿಕ್ಷಕರಾಗಿ ದೇಶದ ರಾಷ್ಟ್ರಪತಿಗಳಾಗಿ ರಾಧಾಕೃಷ್ಣ ಅವರು ದುಡಿದಿದ್ದಾರೆ. ಮಹಾನ್ ವಿದ್ವಾಂಸ ಮತ್ತು ವಾಗ್ಮಿಯಾಗಿದ್ದ ಇವರು ಭಾರತದ ಅಭ್ಯುದಯಕ್ಕೆ ಮಹತ್ತರವಾಗಿ ಯೋಚಿಸಿದವರಾಗಿದ್ದಾರೆ. ತಮ್ಮ ಹುಟ್ಟುಹಬ್ಬವನ್ನು ಮಾತ್ರ ಆಚರಿಸಿಕೊಳ್ಳಬಾರದು ಎಂಬ ಉದ್ದೇಶಕ್ಕಾಗಿ ಭವಿಷ್ಯವನ್ನು ರೂಪಿಸುವ ಗುರುಗಳ ದಿನವನ್ನಾಗಿ ಸಪ್ಟೆಂಬರ್ 5 ಅನ್ನು ರಾಧಾಕೃಷ್ಣ ಅವರು ಘೋಷಿಸಿದ್ದಾರೆ.

ಇಂದು ಶಿಕ್ಷಕರ ದಿನಾಚರಣೆ
ಇಂದು ಶಿಕ್ಷಕರ ದಿನಾಚರಣೆ
author img

By

Published : Sep 5, 2020, 6:15 AM IST

ಇಂದು ಶಿಕ್ಷಕರ ದಿನಾಚರಣೆಯ ಸಂಭ್ರಮ. ವಿದ್ಯೆ ಕಲಿಸಿದ ಗುರುವನ್ನು ನೆನೆಯುವ ಸುದಿನ. ಗ್ರೇಟ್ ಇಂಡಿಯನ್ ಫಿಲಾಸಫರ್, ವಿದ್ವಾಂಸ ಮತ್ತು ರಾಜಕಾರಣಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ 132ನೇ ಜನ್ಮದಿನ. ರಾಧಾಕೃಷ್ಣನ್ ಅವರು ಸೆಪ್ಟೆಂಬರ್ 5, 1888 ರಂದು ಭಾರತದ ಮದ್ರಾಸ್ ಪ್ರಾಂತ್ಯದ ತಿರುತ್ತಣಿಯಲ್ಲಿ ಜನಿಸಿದರು. ಅವರ ತತ್ತ್ವಚಿಂತನೆಗಳು ಮತ್ತು ಉಪದೇಶವು ವಿಶ್ವಾದ್ಯಂತ ಭಾರಿ ಪ್ರಭಾವ ಬೀರಿವೆ. ಇವರ ಜನ್ಮದಿನಾಚರಣೆಯನ್ನು ಸೆಪ್ಟೆಂಬರ್ 5ರಂದು ಭಾರತದಲ್ಲಿ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ.

ಸರ್ವಪಲ್ಲಿ ರಾಧಾಕೃಷ್ಣನ್ ಅವರ ತಂದೆಯ ಹೆಸರು ಸರ್ವಪಲ್ಲಿ ವೀರಸ್ವಾಮಿ ಅವರು ಅಧೀನ ಆದಾಯ ಅಧಿಕಾರಿಯಾಗಿದ್ದರು. ತಾಯಿಯ ಹೆಸರು ಸರ್ವಪಲ್ಲಿ ಸೀತಾ. ರಾಧಾಕೃಷ್ಣನ್ ತಮ್ಮ 16ನೇ ವಯಸ್ಸಿನಲ್ಲಿ ತಮ್ಮ ದೂರದ ಸೋದರಸಂಬಂಧಿ ಶಿವಕಾಮು ಅವರನ್ನು ವಿವಾಹವಾದರು. ಈ ದಂಪತಿಗೆ ಆರು ಮಕ್ಕಳು, ಅದರಲ್ಲಿ ಐದು ಹೆಣ್ಣುಮಕ್ಕಳು, ಓರ್ವ ಪುತ್ರ. ರಾಧಾಕೃಷ್ಣನ್ ತಮಿಳುನಾಡಿನ ತಿರುತ್ತಣಿಯಲ್ಲಿ ಜನಿಸಿದರು. ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ತದನಂತರ ಮೈಸೂರು ವಿಶ್ವವಿದ್ಯಾಲಯ ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ್ದಾರೆ.

ಶಿಕ್ಷಕರ ದಿನಾಚರಣೆಯ ಇತಿಹಾಸ:

ಮೊದಲು ಶಿಕ್ಷಕರ ದಿನವನ್ನು 1962ರಲ್ಲಿ ಆಚರಿಸಲಾಯಿತು. ಅದು ರಾಷ್ಟ್ರಪತಿ ರಾಧಾಕೃಷ್ಣನ್ ಅವರು ಅಧಿಕಾರ ವಹಿಸಿಕೊಂಡ ವರ್ಷ. ರಾಧಾಕೃಷ್ಣನ್ ಅವರು ಭಾರತದ ಮೊದಲ ಉಪರಾಷ್ಟ್ರಪತಿಯಾಗಿದ್ದು, ನಂತರ ರಾಜೇಂದ್ರ ಪ್ರಸಾದ್ ಅವರ ಬಳಿಕ ದೇಶದ ಎರಡನೇ ರಾಷ್ಟ್ರಪತಿಯಾದರು. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಭಾರತದ ಎರಡನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದ ವರ್ಷ ಇದು. ಅವರ ವಿದ್ಯಾರ್ಥಿಗಳು ಅವರ ಜನ್ಮದಿನವನ್ನು 'ರಾಧಾಕೃಷ್ಣನ್ ದಿನ' ಎಂದು ಆಚರಿಸಲು ಸೂಚಿಸಿದರು. ಸರ್ವಪಲ್ಲಿ ರಾಧಾಕೃಷ್ಣನ್ ಈ ಕ್ರಮವನ್ನು ನಿರಾಕರಿಸಿದರು ಮತ್ತು "ನನ್ನ ಜನ್ಮದಿನವನ್ನು ಆಚರಿಸುವ ಬದಲು ಸೆಪ್ಟೆಂಬರ್ 5 ಅನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿದರೆ ಅದು ನನಗೆ ಹೆಮ್ಮೆ ಎನಿಸುತ್ತದೆ ಎಂದರು. ಹಾಗಾಗಿ ಅಂದಿನಿಂದ ಭಾರತದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಪದ್ದತಿ ಬೆಳೆದು ಬಂದಿತು.

ಇಂದು ಶಿಕ್ಷಕರ ದಿನಾಚರಣೆ
ಇಂದು ಶಿಕ್ಷಕರ ದಿನಾಚರಣೆ

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಬಗ್ಗೆ ಕುತೂಹಲಕಾರಿ ಸಂಗತಿಗಳು:

ಜನನ ಸೆಪ್ಟೆಂಬರ್ 5, 1888, ಭಾರತದ ತಿರುತ್ತಾಣಿಯಲ್ಲಿ ಜನಿಸಿದರು. ಅವರು ಎಂ.ಎ, ಡಿ.ಲಿಟ್ ಸೇರಿದಂತೆ ಅನೇಕ ಪದವಿಗಳನ್ನು ಪಡೆದಿದ್ದಾರೆ. 1917ರಲ್ಲಿ ಅವರ ಮೊದಲ ಪುಸ್ತಕ, ದಿ ಫಿಲಾಸಫಿ ಆಫ್ ರವೀಂದ್ರನಾಥ ಟ್ಯಾಗೋರ್​ ಪುಸ್ತಕಕ್ಕೆ ಪ್ರೆಸಿಡೆನ್ಸಿ ಐಬಾಲ್​ ಆನ್​ ಇಂಡಿಯಾನ್​ ಫಿಲಾಸಫಿಯನ್ನು ಪಡೆದರು. ಅವರು ಚೆನ್ನೈನ ಪ್ರೆಸಿಡೆನ್ಸಿ ಕಾಲೇಜು ಮತ್ತು ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ಪಡೆದಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದಲ್ಲಿ 1918 ರಿಂದ 21ರವರೆಗೆ ಸೇವೆ ಸಲ್ಲಿಸಿದ್ದು, ಕೊಲ್ಕತ್ತಾದಲ್ಲಿ 1921–31; 1937–41 ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ 1931–36ರ ವರೆಗೆ ಸೇವೆ ಸಲ್ಲಿಸಿದ್ದಾರೆ.

ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ (1936–52) ಪೂರ್ವ ಧರ್ಮಗಳು ಮತ್ತು ನೀತಿಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಭಾರತದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು. ಯುನೆಸ್ಕೋದಲ್ಲಿ (1946-52)ರವರೆಗೆ ಭಾರತವನ್ನು ಪ್ರತಿನಿಧಿಸಿದ್ದರು ಮತ್ತು 1949-1952ರವರೆಗೆ ಯುಎಸ್ಎಸ್​ನ ಭಾರತೀಯ ರಾಯಭಾರಿಯಾಗಿದ್ದರು. 1953 ರಿಂದ 1962 ರವರೆಗೆ ಅವರು ದೆಹಲಿ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. 1948 ರವರೆಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಸೇವೆ ಸಲ್ಲಿಸಿದರು.

ರಾಧಾಕೃಷ್ಣನ್ ಅವರು ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿಗೆ 16 ಬಾರಿ ಆಯ್ಕೆಯಾಗಿದ್ದು, ಶಾಂತಿ ನೊಬೆಲ್ ಪ್ರಶಸ್ತಿಗೆ 11 ಬಾರಿ ನಾಮನಿರ್ದೇಶನಗೊಂಡಿದ್ದಾರೆ. 1962 ರಿಂದ 1967 ರವರೆಗೆ ಭಾರತದ ರಾಷ್ಟ್ರಪತಿಯಾಗಿದ್ದರು. ಅವರು 1968ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್​ನನ್ನು ಪಡೆದುಕೊಂಡರು. ಏಪ್ರಿಲ್ 17, 1975 ರಂದು ಮದ್ರಾಸ್​ನಲ್ಲಿ (ಚೆನ್ನೈ)86 ನೇ ವಯಸ್ಸಿಗೆ ನಿಧನರಾದರು.

ಶಿಕ್ಷಕರ ಮೇಲಿನ ಸ್ಪೂರ್ತಿದಾಯಕ ಸಂದೇಶಗಳು:

"ಒಂದು ದೇಶವು ಭ್ರಷ್ಟಾಚಾರ ಮುಕ್ತವಾಗಿ ಮತ್ತು ಸುಂದರವಾದ ರಾಷ್ಟ್ರವಾಗಬೇಕಾದರೆ ಮೂರು ಪ್ರಮುಖ ಸಾಮಾಜಿಕ ಸದಸ್ಯರು ವ್ಯತ್ಯಾಸವನ್ನುಂಟು ಮಾಡಬಲ್ಲರು ಎಂದು ನಾನು ಬಲವಾಗಿ ನಂಬುತ್ತೇವೆ. ಅವರು ತಂದೆ, ತಾಯಿ ಮತ್ತು ಶಿಕ್ಷಕರು." - ಡಾ ಎಪಿಜೆ ಅಬ್ದುಲ್ ಕಲಾಂ.

ಸಾಧಾರಣ ಶಿಕ್ಷಕ ಹೇಳುತ್ತಾನೆ. ಒಳ್ಳೆಯ ಶಿಕ್ಷಕ ವಿವರಿಸುತ್ತಾನೆ. ಉತ್ತಮ ಶಿಕ್ಷಕ ಪ್ರದರ್ಶನಗಳ ಮೂಲಕ ಬೋಧಿಸುತ್ತಾನೆ. ಮಹಾನ್ ಶಿಕ್ಷಕ ಸ್ಫೂರ್ತಿದಾಯಕವಾಗಿರುತ್ತಾನೆ"- ವಿಲಿಯಂ ಆರ್ಥರ್ ವಾರ್ಡ್

"ಸೃಜನಶೀಲತೆ, ಜ್ಞಾನ, ಸಂತೋಷವನ್ನು ಹುಟ್ಟುಹಾಕುವುದೇ ನಿಜವಾದ ಶಿಕ್ಷಕನ ಕಲೆ." - ಆಲ್ಬರ್ಟ್ ಐನ್‌ಸ್ಟೈನ್

"ಶಿಷ್ಯನಿಗೆ ನಿಜವಾದ ಪಠ್ಯ ಪುಸ್ತಕವೇ, ಆತನ ಶಿಕ್ಷಕ ಎಂದು ನಾನು ಭಾವಿಸುತ್ತೇನೆ." - ಮಹಾತ್ಮ ಗಾಂಧಿ

“ತಂತ್ರಜ್ಞಾನವು ಕೇವಲ ಒಂದು ಸಾಧನವಾಗಿದೆ. ಮಕ್ಕಳು ಕೆಲಸ ಮಾಡಲು ಮತ್ತು ಅವರನ್ನು ಪ್ರೇರೇಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ. ”- ಬಿಲ್ ಗೇಟ್ಸ್

" ಜಗತ್ತನ್ನು ಬದಲಾಯಿಸಲು ಶಿಕ್ಷಣ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ." - ನೆಲ್ಸನ್ ಮಂಡೇಲಾ

ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸಂದೇಶಗಳು:

ಜ್ಞಾನವು ನಮಗೆ ಶಕ್ತಿಯನ್ನು ನೀಡುತ್ತದೆ, ಪ್ರೀತಿ ನಮಗೆ ಪೂರ್ಣತೆಯನ್ನು ನೀಡುತ್ತದೆ.

ಪುಸ್ತಕಗಳು ನಮ್ಮ ಸಂಸ್ಕೃತಿಯ ನಡುವೆ ಸೇತುವೆಯನ್ನು ನಿರ್ಮಿಸುವ ಸಾಧನವಾಗಿದೆ.

ಸಂತೋಷ ಮತ್ತು ಸಂತೋಷದ ಜೀವನವು ಜ್ಞಾನ ಮತ್ತು ವಿಜ್ಞಾನದ ಆಧಾರದ ಮೇಲೆ ಮಾತ್ರ ಸಾಧ್ಯ.

ದ್ವೇಷಕ್ಕಿಂತ ಪ್ರೀತಿ ಬಲವಾಗಿದೆ ಎಂಬ ಸತ್ಯವು ಅವರಿಗೆ ಸ್ಫೂರ್ತಿ ನೀಡದಿದ್ದರೆ ನಮ್ಮ ಎಲ್ಲಾ ವಿಶ್ವ ಶಿಕ್ಷಣ ಸಂಸ್ಥೆಗಳು ನಿಷ್ಪರಿಣಾಮಕಾರಿಯಾಗಿರುತ್ತವೆ.

ನಮಗೆ ತಿಳಿದಿದೆ ಎಂದು ನಾವು ಭಾವಿಸಿದಾಗ ನಾವು ಕಲಿಯುವುದನ್ನು ನಿಲ್ಲಿಸುತ್ತೇವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.