ಭದ್ರಾದ್ರಿ ಕೊಥಗುಡೆಮ್ (ತೆಲಂಗಾಣ): ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಶಿಕ್ಷಕನನ್ನು ಬಂಧಿಸಿದ ಘಟನೆ ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ನಲ್ಲಿ ನಡೆದಿದೆ.
ದೂರವಾಣಿ ಮೂಲಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಭದ್ರಾದ್ರಿ ಕೊಥಗುಡೆಮ್ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸುನೀಲ್ ದತ್, ಲಕ್ಷ್ಮೀದೇವ್ಪಲ್ಲಿ ಮಂಡಲದ ಚಿಂತಾವರೆ ಗ್ರಾಮದಲ್ಲಿನ ಶಾಲೆಯೊಂದರ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕ ದೋಡಾ ಸುನೀಲ್ ಕುಮಾರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಟ್ಯೂಷನ್ಗೆ ಬರುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಬಂಧನ
ಬಾಲಕಿಯರ ಪೋಷಕರೊಬ್ಬರು ಈ ಬಗ್ಗೆ ದೂರು ನೀಡಿದ್ದರು. ತನಿಖೆ ವೇಳೆ ನಾಲ್ಕು ಹುಡುಗಿಯರಿಗೆ ಕಿರುಕುಳ ನೀಡಿದ್ದಾರೆ ಎಂದು ನಮಗೆ ತಿಳಿದು ಬಂದಿದೆ. ಬಾಲಕಿಯರೆಲ್ಲರೂ 6-10 ವರ್ಷ ವಯಸ್ಸಿನವರಾಗಿದ್ದು, ಅವರ ಮತ್ತು ಅವರ ಪೋಷಕರ ದೂರಿನಂತೆ ನಿನ್ನೆ ಸಂಜೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಆಗಸ್ಟ್ ಹಾಗೂ ನವೆಂಬರ್ ನಡುವೆ ಕಿರುಕುಳ ನೀಡಿದ್ದಾರೆ ಎಂದು ತನಿಖೆ ವೇಳೆ ಬಯಲಾಲಾಗಿದೆ.
ಈ ಬಗ್ಗೆ ಲಕ್ಷ್ಮೀದೇವ್ಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.