ಮುಂಬೈ: ರೆಡ್ಲೈಟ್ ಏರಿಯಾಗೆ ತನ್ನನ್ನು ಕರೆದುಕೊಂಡು ಹೋಗಲಿಲ್ಲ ಎಂಬ ಕಾರಣಕ್ಕಾಗಿ ಕ್ಯಾಬ್ ಡ್ರೈವರ್ ಮೇಲೆ ಪೊಲೀಸ್ ಪೇದೆಯೊಬ್ಬ ಅತ್ಯಾಚಾರ ನಡೆಸಿರುವ ವಿಲಕ್ಷಣ ಘಟನೆ ಮುಂಬೈನಲ್ಲಿ ನಡೆದಿದೆ.
ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೋರ್ವ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ನಲ್ಲಿ ನಿಂತಿದ್ದ ಕ್ಯಾಬ್ ಡ್ರೈವರ್ ಬಳಿ ತನಗೆ ರೆಡ್ಲೈಟ್ ಏರಿಯಾಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾನೆ. ಆದರೆ ಆ ಪ್ರದೇಶಕ್ಕೆ ಕರೆದುಕೊಂಡು ಹೋಗಲು ಕ್ಯಾಬ್ ಡ್ರೈವರ್ ಹಿಂದೇಟು ಹಾಕಿದ್ದಾನೆ.
ಇದರಿಂದ ಕೋಪಗೊಂಡ ಪೇದೆ ಕ್ಯಾಬ್ ಡ್ರೈವರ್ ಜತೆ ಅನುಚಿತವಾಗಿ ವರ್ತಿಸಿದ್ದು, ಅಲ್ಲೇ ಆತನ ಮೇಲೆ ಅನೈಸರ್ಗಿಕವಾಗಿ ಅತ್ಯಾಚಾರ ಸಹ ನಡೆಸಿದ್ದಾನೆ. ತದನಂತರ ಆತನ ಕ್ಯಾಬ್ನಲ್ಲಿದ್ದ ಹಣ, ಕ್ಯಾಬ್ ಕೀ ಹಾಗೂ ಕೆಲವೊಂದು ಸಾಮಗ್ರಿ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಕ್ಯಾಬ್ ಡ್ರೈವರ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಯನ್ನ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಘಟನೆಯಿಂದ ಡ್ರೈವರ್ ಆಘಾತಕ್ಕೊಳಗಾಗಿದ್ದು, ಇದೀಗ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.