ನವದೆಹಲಿ: ವಾರ್ಷಿಕವಾಗಿ 2.5 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಹಣವು ಉದ್ಯೋಗಿಯ ಭವಿಷ್ಯ ನಿಧಿ (ಇಪಿಎಫ್) ಖಾತೆಗೆ ಪಾವತಿಯಾದರೆ, ಅಂತಹ ಖಾತೆಗಳ ಮೇಲಿನ ಬಡ್ಡಿಗೆ ಯಾವುದೇ ತೆರಿಗೆ ವಿನಾಯಿತಿ ಇಲ್ಲವೆಂದು ಬಜೆಟ್ನಲ್ಲಿ ಹೇಳಲಾಗಿದ್ದು, ಇದು ಈ ಸೌಲಭ್ಯದ ದುರುಪಯೋಗವಾಗದಂತೆ ನೋಡಿಕೊಳ್ಳುವ ಗುರಿ ಹೊಂದಿದೆ.
ಕೊಡುಗೆದಾರರಲ್ಲಿನ ಅಸಮಾನತೆಯನ್ನು ತೆಗೆದುಹಾಕುವ ಉದ್ದೇಶ ಹೊಂದಿರುವ ಈ ನಿರ್ಧಾರವು, ಹೆಚ್ಚಿನ ಆದಾಯ ಹೊಂದಿರುವ ಉದ್ಯೋಗಿಗಳಿಗೆ ತೆರಿಗೆ ವಿನಾಯಿತಿಯನ್ನು ತರ್ಕಬದ್ದವಾಗಿ ನಿರ್ಬಂಧಿಸುವ ಗುರಿ ಹೊಂದಿದೆ. 2.5 ಲಕ್ಷಕ್ಕಿಂತ ಕಡಿಮೆ ಪಾವತಿಯಾಗುವ ಖಾತೆಗಳ ಮೇಲೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಹೀಗಾಗಿ ಇದು ಸಾಮಾನ್ಯ ಚಂದಾದಾರರ ಮೇಲೆ ಪರಿಣಾಮ ಬೀರುವುದಿಲ್ಲ.
'ವಾರ್ಷಿಕವಾಗಿ 2.5 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಹಣವು ಉದ್ಯೋಗಿಯ ಭವಿಷ್ಯ ನಿಧಿ (ಪಿ.ಎಫ್) ಖಾತೆಗೆ ಪಾವತಿಯಾದರೆ, ಅಂತಹ ಖಾತೆಗಳ ಮೇಲಿನ ಬಡ್ಡಿಗೆ ಯಾವುದೇ ತೆರಿಗೆ ವಿನಾಯಿತಿ ಇರುವುದಿಲ್ಲ. ಇದು ಮುಂದಿನ ವರ್ಷದಿಂದ ಅನ್ವಯವಾಗಲಿದೆ' ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.