ಚೆನ್ನೈ: ಕೋವಿಡ್ ಬಿಕ್ಕಟ್ಟಿನ ಮಧ್ಯೆ ತಮಿಳುನಾಡು ಎಂಜಿನಿಯರಿಂಗ್ ಪ್ರವೇಶ (ಟಿಎನ್‌ಇಎ-ಯುಜಿ) - 2020ರ ಸಾಮಾನ್ಯ ಸಮಾಲೋಚನೆ ಇಂದು ಮುಕ್ತಾಯಗೊಂಡಿದೆ. ಜತೆಗೆ ಎಂಜಿನಿಯರಿಂಗ್‌ಗೆ ಪ್ರವೇಶ ಪಡೆಯುವವರ ಸಂಖ್ಯೆಯಲ್ಲಿ ರಾಜ್ಯ ತೀವ್ರ ಕುಸಿತ ಕಂಡಿದೆ.
ಒಟ್ಟು ಖಾಲಿ ಇರುವ 1,57,689 ರಲ್ಲಿ 1,12,406 ವಿದ್ಯಾರ್ಥಿಗಳು ಮಾತ್ರ ಕೌನ್ಸೆಲಿಂಗ್‌ಗೆ ಅರ್ಹರಾಗಿದ್ದಾರೆ. ಇಲ್ಲಿಯವರೆಗೆ ಕೇವಲ 69,749 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಇನ್ನೂ 91,805 ಸೀಟುಗಳು ಖಾಲಿಯಿವೆ.
ರಾಜ್ಯದ 20 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದೇ ಒಂದು ದಾಖಲಾತಿಯೂ ಆಗಿಲ್ಲ. 322 ಕಾಲೇಜುಗಳಲ್ಲಿ ಶೇ.50ರಷ್ಟು ಸ್ಥಾನಗಳೂ ಭರ್ತಿಯಾಗಿಲ್ಲ ಎಂದು ತಿಳಿದು ಬಂದಿದೆ.