ಚೆನ್ನೈ (ತಮಿಳುನಾಡು): ರಾಷ್ಟ್ರಕ್ಕಾಗಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಯ ಜೀವವನ್ನು ಕಾಪಾಡುವಂತೆ ಯಮಧರ್ಮನಿಗೆ ಪೋಲೀಸ್ ಸಿಬ್ಬಂದಿ ಬರೆದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
"ನಾವು ಯಾವ ತೊಂದರೆಯಲ್ಲಿದ್ದರೂ, ನಮ್ಮ ದೇಶದ ಜನರನ್ನು ರಕ್ಷಿಸುವುದು ನಮ್ಮ ಅಂತಿಮ ಗುರಿಯಾಗಿದೆ. ನಾವು ಹಲವು ಜವಾಬ್ದಾರಿಗಳನ್ನು ಹೊಂದಿದ್ದೇವೆ. ಆದ್ದರಿಂದ ಎಲ್ಲ ಪೊಲೀಸರ ಜೀವಿತಾವಧಿ ವಿಸ್ತರಿಸಲು ನಾವು ವಿನಂತಿಸುತ್ತೇವೆ. ಇದರಿಂದ ಪೊಲೀಸ್ ಸಿಬ್ಬಂದಿಯಾಗಿ ಉತ್ತಮ ಕೆಲಸವನ್ನು ದೀರ್ಘಕಾಲದವರೆಗೆ ನಾವು ಮಾಡಬಹುದು." ಎಂದು ಮಧುರೈ ಜಿಲ್ಲೆಯ ಪೋಲೀಸ್ ತನ್ನ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

"ಈ ಪತ್ರವನ್ನು ಸ್ವೀಕರಿಸಿದ ನಂತರ, ನೀವು ಸ್ವಲ್ಪ ಕರುಣೆಯನ್ನು ತೋರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ" ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ಗಮನಾರ್ಹ.