ETV Bharat / bharat

ಇಂದು ಮಹಾರಾಷ್ಟ್ರದಲ್ಲಿ 5,257, ತಮಿಳುನಾಡಿನಲ್ಲಿ 3,949 ಕೊರೊನಾ​ ಕೇಸ್​​​ ಪತ್ತೆ... ದಾಖಲೆ ಪ್ರಮಾಣದ ಸಾವು! - ಕೋವಿಡ್​-19

ಮಹಾಮಾರಿ ಕೊರೊನಾ ಅಬ್ಬರ ದೇಶಾದ್ಯಂತ ಜೋರಾಗಿದ್ದು, ಕೆಲವೊಂದು ರಾಜ್ಯಗಳಲ್ಲಿ ಕೋವಿಡ್​ ನಾಗಾಲೋಟ ಮುಂದುವರೆದಿದೆ.

COVID
COVID
author img

By

Published : Jun 29, 2020, 8:14 PM IST

ಹೈದರಾಬಾದ್​: ದೇಶದಾದ್ಯಂತ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಹಾರಾಷ್ಟ್ರ, ತಮಿಳುನಾಡು ಹಾಗೂ ದೆಹಲಿಯಲ್ಲಿ ಇದರ ಹರಡುವಿಕೆ ಪ್ರಮಾಣ ಇದೀಗ ಮತ್ತಷ್ಟು ವೇಗ ಪಡೆದುಕೊಂಡಿದೆ.

ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ ದಾಖಲೆಯ 5,257 ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, 181 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,69,883 ಆಗಿದ್ದು, 73,298 ಆ್ಯಕ್ಟೀವ್ ಕೇಸ್​ಗಳಿವೆ.

ತಮಿಳುನಾಡಿನಲ್ಲಿ ದಾಖಲೆಯ ಪ್ರಕರಣಗಳು ಕಾಣಿಸಿಕೊಂಡಿದ್ದು, ಇಂದು ಬರೋಬ್ಬರಿ 3,949 ಪ್ರಕರಣಗಳು ಪತ್ತೆಯಾಗಿವೆ. 62 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ 86,224 ಪ್ರಕರಣಗಳಿದ್ದು, 47,749 ಮಂದಿ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ. ಜತೆಗೆ 1141 ಜನರು ಸಾವನ್ನಪ್ಪಿದ್ದಾರೆ. ಆಂಧ್ರದಲ್ಲೂ 783 ಕೋವಿಡ್​​ ಕೇಸ್​ ಇಂದು ಒಂದೇ ದಿನ ಪತ್ತೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.