ETV Bharat / bharat

ಮುಖ್ಯಮಂತ್ರಿ ಗಾದಿಗೆ ಹಗ್ಗ ಜಗ್ಗಾಟ: 10 ದಿನ ಕಳೆದರೂ ರಚನೆಯಾಗದ ಮಹಾ ಸರ್ಕಾರ!

author img

By

Published : Nov 3, 2019, 5:23 PM IST

ಬಿಜೆಪಿ ಮತ್ತು ಶಿವಸೇನೆ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಫೈಟ್​ ನಡೆಯುತ್ತಿದ್ದು, ಚುನಾವಣಾ ಫಲಿತಾಂಶ ಹೊರಬಂದು 10 ದಿನ ಕಳೆದರೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗಿಲ್ಲ.

10 ದಿನ ಕಳೆದರೂ ರಚನೆಯಾಗದ ಮಹಾ ಸರ್ಕಾರ

ಮುಂಬೈ: ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಹೊರಬಿದ್ದು ಇಂದಿಗೆ 10 ದಿನ ಕಳೆದರೂ ಇಲ್ಲಿಯವರೆಗೆ ಸರ್ಕಾರ ರಚನೆಯಾಗಿಲ್ಲ. ಚುನಾವಣಾಪೂರ್ವ ಮೈತ್ರಿ ಮಾಡಿಕೊಳ್ಳುವ ಸೂಚನೆ ನೀಡಿದ್ದ ಶಿವಸೇನೆ ಮತ್ತು ಬಿಜೆಪಿ ಇನ್ನೂ ಒಮ್ಮತದ ನಿರ್ಧಾರಕ್ಕೆ ಬಂದಿಲ್ಲ.

ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಶಿವಸೇನೆ ಮತ್ತು ಬಿಜೆಪಿ ನಡುವೆ ಭಿನ್ನಾಬಿಪ್ರಾಯಗಳಿದ್ದು, ಇಲ್ಲಿಯವರೆಗೂ ಉಭಯ ನಾಯಕರು ಕುಳಿತು ಚರ್ಚೆ ನಡೆಸಿಲ್ಲ. ಹೀಗಾಗಿ ಸರ್ಕಾರ ರಚನೆ ವಿಚಾರ ಕಗ್ಗಂಟಾಗಿಯೇ ಉಳಿದಿದೆ.

ಶಿವಸೇನೆ ಪಕ್ಷದ ವಕ್ತಾರ ಸಂಜಯ್ ರಾವತ್ ಮಾತನಾಡಿ, ಶಿವಸೇನೆ ಮತ್ತು ಬಿಜೆಪಿ ನಡುವೆ ಇಲ್ಲಿಯವರೆಗೆ ಸರ್ಕಾರ ರಚನೆ ಮಾಡುವ ಮಾತುಕತೆ ನಡೆದಿಲ್ಲ. ಒಂದು ವೇಳೆ ಈ ಬಗ್ಗೆ ಚರ್ಚೆ ನಡೆದರೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತ್ರ ಎಂದು ಹೇಳಿದ್ದಾರೆ.

5 ವರ್ಷದ ಸರ್ಕಾರದ ಅವಧಿಯಲ್ಲಿ ಶಿವಸೇನೆ ಮತ್ತು ಬಿಜೆಪಿ ತಲಾ ಎರಡೂವರೆ ವರ್ಷ ಮುಖ್ಯಮಂತ್ರಿ ಸ್ಥಾನ ಹಂಚಿಕೊಳ್ಳುವ ಬಗ್ಗೆ ಶಿವಸೇನೆ ಇಂಗಿತ ವ್ಯಕ್ತಪಡಿಸಿದೆ. ಆದ್ರೆ, ಬಿಜೆಪಿ ಈ ಬಗ್ಗೆ ನಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಹೇಳಲಾಗುತ್ತಿದೆ.

ಇತ್ತ ಎನ್​ಸಿಪಿ ಕೂಡಾ ಕಾದು ನೋಡುವ ತಂತ್ರದ ಮೊರೆ ಹೋಗಿದೆ. ಪಕ್ಷದ ಮುಖ್ಯಸ್ಥ ಶರದ್ ಪವಾರ್, ನಾವು ವಿರೋಧ ಪಕ್ಷದಲ್ಲಿ ಕೂರುತ್ತೇವೆ ಎಂದು ಹೇಳಿದ್ದರೂ, ಎನ್​ಸಿಪಿಯ ಇತರೆ ನಾಯಕರು ಶಿವಸೇನೆ ಜೊತೆ ಮೈತ್ರಿ ಮಾಡಿಕೊಳ್ಳುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಎನ್​ಸಿಪಿ ವಕ್ತಾರ ನವಾಬ್ ಮಲಿಕ್, ಮಹಾರಾಷ್ಟ್ರ ಜನರ ಒಳಿತಿಗಾಗಿ ಬಿಜೆಪಿ ಹೊರತಾಗಿ ಶಿವಸೇನೆ ಪಕ್ಷ ಸರ್ಕಾರ ರಚನೆ ಮಾಡಲು ಸಿದ್ದವಿದ್ದರೆ ಖಂಡಿತವಾಗಿಯೂ ನಾವು ಸಕಾರಾತ್ಮಕವಾಗಿ ಸ್ಪಂದಿಸುವೆವು ಎಂದು ಹೇಳಿದ್ದಾರೆ.

  • भाजपला वगळून छत्रपती शिवाजी महाराजांच्या मनातील रयतेचे राज्य निर्माण करण्याची शिवसेनेची तयारी असेल तर राष्ट्रवादी नक्कीच सकारात्मक भूमिका घेईल. सत्ता स्थापनेसाठी जनतेच्या हितासाठी योग्य निर्णय घेतल्यास सरकार निर्माण करण्याचे पर्याय उपलब्ध होऊ शकतात.https://t.co/JvlJVut3Ii

    — Nawab Malik (@nawabmalikncp) November 2, 2019 " class="align-text-top noRightClick twitterSection" data=" ">

ಶಿವಸೇನೆ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ, ಸರ್ಕಾರ ರಚನೆ ಮಾಡುವ ಬಗ್ಗೆ ಮುಂದಿನ ದಿನಗಳಲ್ಲಿ ನಿಮಗೆ ತಿಳಿಯಲಿದೆ ಎಂದು ಹೇಳುವ ಮೂಲಕ ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ.

  • Uddhav Thackeray, Shiv Sena on being asked about government formation in Maharashtra: You will get to know about it in the coming days. pic.twitter.com/yPIHYt7zFc

    — ANI (@ANI) November 3, 2019 " class="align-text-top noRightClick twitterSection" data=" ">

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರತಿಕ್ರಿಯಿಸಿ, ಸರ್ಕಾರ ರಚನೆ ಬಿಕ್ಕಟ್ಟು ಶೀಘ್ರದಲ್ಲೇ ಕೊನೆಗೊಳ್ಳುತ್ತದೆ. ಅಂತಿಮವಾಗಿ ಎಲ್ಲರೂ ರಾಜ್ಯದ ಜನರ ಹಿತಕ್ಕಾಗಿ ಕೆಲಸ ಮಾಡಬೇಕಾಗುತ್ತದೆ. ಶೀಘ್ರದಲ್ಲೇ ಸರ್ಕಾರ ರಚನೆಯಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

  • Devendra Fadnavis, BJP in Akola: I think the impasse in formation of government will end soon, at the end everyone has to work for the benefit of the people of state. I hope government is formed soon. pic.twitter.com/Y6nPq3egnF

ಮಹಾರಾಷ್ಟ್ರ ವಿಧಾನಸಭೆಯ ಒಟ್ಟು ಬಲಾಬಲ 288 ಸ್ಥಾನಗಳು.ಯಾವುದೇ ಪಕ್ಷ ಅಥವಾ ಮೈತ್ರಿಗೆ ಸರ್ಕಾರ ರಚನೆ ಮಾಡಲು 145 ಸಂಖ್ಯಾಬಲ ಬೇಕಾಗಿದೆ. ಬಿಜೆಪಿ 105 ಸ್ಥಾನಗಳನ್ನು ಹೊದಿದ್ದು, ಶಿವಸೇನೆ 56, ಎನ್​ಸಿಪಿ 54 ಮತ್ತು ಕಾಂಗ್ರೆಸ್ 44 ಸಂಖ್ಯಾಬಲ ಹೊಂದಿವೆ.

ಒಂದ್ವೇಳೆ ಬಿಜೆಪಿ ಮತ್ತು ಶಿವಸೇನೆ ಸರ್ಕಾರ ರಚಿಸಲು ಮುಂದಾಗದಿದ್ದರೆ, ಶಿವಸೇನೆ+ಎನ್​ಸಿಪಿ+ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.