ಇಸ್ಲಾಮಾಬಾದ್: 2012ರಲ್ಲಿ 14 ವರ್ಷದ ಬಾಲಕಿ ಮಲಾಲ ಯೂಸುಫ್ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದ ತಾಲಿಬಾನ್ ತೆಹರಿಕ್ ಇ-ತಾಲಿಬಾನ್ ಉಗ್ರ ಸಂಘಟನೆಯ ಭಯೋತ್ಪಾದಕ ಇದೀಗ ಜೈಲಿನಿಂದ ಪರಾರಿಯಾಗಿದ್ದಾನೆ. ಇದರ ಬಗ್ಗೆ ಉಗ್ರ ವಿಡಿಯೋ ತುಣುಕೊಂದನ್ನು ಹರಬಿಟ್ಟಿದ್ದಾನೆ.
ಪೇಶಾವರ್ ಆರ್ಮಿ ಶಾಲೆ ಮೇಲೆ ದಾಳಿ ನಡೆಸಿ ಅಲ್ಲಿನ 132 ವಿದ್ಯಾರ್ಥಿಗಳ ಸಾವಿಗೆ ಕಾರಣವಾಗಿದ್ದ ಈ ಉಗ್ರ ಇದೀಗ ತಾನೇ ತಪ್ಪಿಸಿಕೊಂಡಿದ್ದಾಗಿ ವಿಡಿಯೋ ತುಣುಕು ಹರಿಬಿಟ್ಟಿದ್ದಾನೆ. ದೇವರ ದಯೆಯಿಂದ ನಾನು ಜನವರಿ 11, 2020ರಂದು ಜೈಲಿನಿಂದ ತಪ್ಪಿಸಿಕೊಂಡಿದ್ದಾಗಿ ಹೇಳಿಕೊಂಡಿರುವ ಆತ ತಾನು ವಾಸವಾಗಿರುವ ಸ್ಥಳದ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ.
2012ರಲ್ಲಿ ಶಾಲಾ ಬಸ್ನಲ್ಲಿ ಮನೆಗೆ ಹಿಂದಿರುಗುತ್ತಿರುವಾಗ ,ತಾಲಿಬಾನ್ ಬಂದೂಕುಧಾರಿಗಳು ಅವಳನ್ನು ಕೊಲ್ಲುವ ಪ್ರಯತ್ನದಲ್ಲಿ ತಲೆ ಮತ್ತು ಕುತ್ತಿಗೆಗೆ ಗುಂಡು ಹಾರಿಸಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಲಾಲಗೆ ಯುನೈಟೆಡ್ ಕಿಂಗ್ಡಮ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅದಾದ ಬಳಿಕ ಚೇತರಿಸಿಕೊಂಡಿದ್ದ ಮಲಾಲ 2014ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದರು.