ನವದೆಹಲಿ: ಕೋವಿಡ್ -19 ಲಸಿಕೆ ಬಗ್ಗೆ ಸಂಶಯಾಸ್ಪದ ಚಟುವಟಿಕೆಗಳಲ್ಲಿ ಯಾರೇ ಭಾಗಿಯಾದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಿದ್ದಾರೆ.
ಎಲ್ಲಾ ರಾಜ್ಯಗಳ ಮತ್ತು ಯುಟಿಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ನಡೆದ ವಿಡಿಯೋ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸುಗಮ ಮತ್ತು ಘರ್ಷಣೆ ಮುಕ್ತ ವ್ಯಾಕ್ಸಿನೇಷನ್ ಪ್ರಕ್ರಿಯೆಗೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡರು.
ಹೆಚ್ಚಿನ ಓದಿಗಾಗಿ: ನಕಲಿ 'CoWIN' ಅಪ್ಲಿಕೇಶನ್‌ಗಳ ಬಗ್ಗೆ ಕೇಂದ್ರ ಸರ್ಕಾರದ ಎಚ್ಚರಿಕೆ
ನಕಲಿ ಲಸಿಕೆಗಳಿಂದ ಜನರಿಗೆ ಆಮಿಷವೊಡ್ಡಲು ಅಪರಾಧಿಗಳು ವಿವಿಧ ತಂತ್ರಗಳನ್ನು ಬಳಸುತ್ತಿದ್ದಾರೆ ಎಂಬ ವರದಿಗಳ ಬಗ್ಗೆ ಗಮನ ಸೆಳೆದರು. ಇನ್ನು ಲಸಿಕೆಗೆ ಸಂಬಂಧಿಸಿದ ಸಂಶಯಾಸ್ಪದ ಲಿಂಕ್‌ಗಳ ವಿರುದ್ಧ ಕ್ರಮ ಜರುಗಿಸಲು ಗೃಹ ಸಚಿವಾಲಯವು ನಿರ್ವಹಿಸುತ್ತಿರುವ ಸೈಬರ್ ದೋಸ್ತ್ ಸಂದೇಶಗಳನ್ನು ಪ್ರಸಾರ ಮಾಡುತ್ತಲೇ ಇದೆ.
ಹಾಗೆಯೇ, ಕೋವಿಡ್ -19 ಲಸಿಕೆಗಳನ್ನು ಮಾರಾಟ ಮಾಡುವುದು, ಉಚಿತ ವೈದ್ಯಕೀಯ ಸರಬರಾಜು ಅಥವಾ ಕೊರೊನಾಗೆ ಅವೈಜ್ಞಾನಿಕ, ಪರಿಶೀಲಿಸದ ಚಿಕಿತ್ಸೆಯನ್ನು ನೀಡುವಂತಹ ಸಂಶಯಾಸ್ಪದ ಮಾಹಿತಿ ನೀಡುವ ಲಿಂಕ್‌ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಿ ಎಂದು ಸೈಬರ್ ದೋಸ್ತ್ ತನ್ನ ಇತ್ತೀಚಿನ ಸಂದೇಶದಲ್ಲಿ ತಿಳಿಸಿದೆ.