ETV Bharat / bharat

ಬಿರುಗಾಳಿಗೆ ಬಿರುಕು ಬಿಟ್ಟ ತಾಜ್​ಮಹಲ್... ​ಚಂಡಮಾರುತದಿಂದ ಪ್ರೇಮಸೌಧ ಭಾಗಶಃ ಹಾನಿ - tajmahal damage news

ಕಳೆದ ಕೆಲವು ದಿನಗಳಿಂದ ಬೀಸುತ್ತಿರುವ ಚಂಡಮಾರುತ, ಭಾರೀ ಮಳೆ ಹಾಗೂ ಬಿರುಗಾಳಿಯ ಪರಿಣಾಮ ಆಗ್ರಾದ ಪ್ರೇಮಸೌಧ ತಾಜ್​​ಮಹಲ್​​ಗೆ ಹಾನಿಯುಂಟಾಗಿದೆ.

_tajmahal_damege_due_to_rain_strom
ತಾಜ್​​ಮಹಲ್​​ಗೆ ಭಾಗಶಃ ಹಾನಿ
author img

By

Published : May 31, 2020, 7:21 PM IST

ಆಗ್ರಾ(ಉತ್ತರ ಪ್ರದೇಶ): ಉತ್ತರ ಭಾರತದಲ್ಲಿ ಸಂಭವಿಸಿದ ​ಚಂಡಮಾರುತದ ಪರಿಣಾಮ ಉಂಟಾದ ಭಾರಿ ಬಿರುಗಾಳಿ, ಮಳೆ ಮತ್ತು ಸಿಡಿಲಿನಿಂದಾಗಿ ವಿಶ್ವ ವಿಖ್ಯಾತ ತಾಜ್​ಮಹಲ್​ ಹಾನಿಗೊಳಗಾಗಿದೆ.

ತಾಜ್​​ಮಹಲ್​​ಗೆ ಭಾಗಶಃ ಹಾನಿ

ತಾಜ್​​ಮಹಲ್​​ನ ವಿವಿಧ ಭಾಗಗಳು ಬಿರುಕು ಬಿಟ್ಟಿದ್ದು, ಆರ್ಕಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್ಐ) ಮಹಾನಿರ್ದೇಶಕರು ಮತ್ತು ಪರಿಶೀಲನಾ ಪುರಾತತ್ವ ಶಾಸ್ತ್ರಜ್ಞ ವಸಂತ್ ಕುಮಾರ್ ಸ್ವರ್ಣಕರ್ ಸೇರಿದಂತೆ ಇತರೆ ಅಧಿಕಾರಿಗಳು ತಾಜ್ ಮಹಲ್ ಗೆ ತೆರಳಿ ಹಾನಿ ಕುರಿತು ಪರಿಶೀಲನೆ ನಡೆಸಿದ್ದಾರೆ.

_tajmahal_damege_due_to_rain_strom
ತಾಜ್​​ಮಹಲ್​​ಗೆ ಭಾಗಶಃ ಹಾನಿ

ತಾಜ್‌ಮಹಲ್‌ನ ಮುಖ್ಯ ವೇದಿಕೆಯಲ್ಲಿ ಅಳವಡಿಸಲಾಗಿದ್ದ ಯಮುನಾ ತೀರದ ಅಮೃತಶಿಲೆ ಬಳಸಿ ನಿರ್ಮಿಸಿದ್ದ ರೇಲಿಂಗ್​​ಗಳು ಮುರಿದು ಬಿದ್ದಿವೆ. ಇದರ ಕೆಳಗೆ ನಿರ್ಮಿಸಿದ್ದ ಕೆಂಪು ಕಲ್ಲಿನ ಜಾಲರಿ ಸಹ ಮುರಿದಿದೆ. ಒಟ್ಟು ಸುಮಾರು 30 ಲಕ್ಷ ರೂ. ಮೌಲ್ಯದಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಈ ಹಿಂದೆ ಕೂಡ ಉಂಟಾದ ಚಂಡಮಾರುತಗಳಿಂದಾಗಿ ಹಲವು ಬಾರಿ ತಾಜ್​ಮಹಲ್​ ಹಾನಿಗೊಳಗಾಗಿದೆ. ತಾಜ್​​ಮಹಲ್​​​ ಜೊತೆಗೆ ಆಗ್ರಾ ಕೋಟೆ, ಮೆಹ್ತಾಬ್ ಬಾಗ್, ಸಿಕಂದರ್​ ಮತ್ತು ಫತೇಪುರ್ ಸಿಕ್ರಿಗಳಲ್ಲಿ ಕೂಡ ಹಾನಿ ಸಂಭವಿಸಿದ್ದು, ಇವುಗಳ ದುರಸ್ತಿಗೆ ಸುಮಾರು 1 ತಿಂಗಳು ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

_tajmahal_damege_due_to_rain_strom
ಬಿರುಗಾಳಿ, ಚಂಡಮಾರುತದಿಂದಾಗಿ ತಾಜ್​​ಮಹಲ್​​ಗೆ ಭಾಗಶಃ ಹಾನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.