ETV Bharat / bharat

ಕೊರೊನಾ ಮಾರ್ಗಸೂಚಿಯೊಂದಿಗೆ ಮತ್ತೆ ತೆರೆದ 'ತಾಜ್​ ಮಹಲ್' - Agra taj mahal

ಕೋವಿಡ್​-19 ಸಾಂಕ್ರಾಮಿಕ ರೋಗದಿಂದಾಗಿ ಸುಮಾರು ಆರು ತಿಂಗಳ ಕಾಲ ಸ್ಥಗಿತಗೊಂಡಿದ್ದ ತಾಜ್ ಮಹಲ್ ಅನ್ನು ಕಟ್ಟುನಿಟ್ಟಾದ ಮಾರ್ಗಸೂಚಿ ಮಧ್ಯೆ ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ. ಒಂದು ಸ್ಲಾಟ್‌ನಲ್ಲಿ ಸುಮಾರು 2,500 ಸಂದರ್ಶಕರಿಗೆ ಅವಕಾಶವಿದೆ.

ಮತ್ತೆ ತೆರೆದ 'ತಾಜ್​ ಮಹಲ್'
ಮತ್ತೆ ತೆರೆದ 'ತಾಜ್​ ಮಹಲ್'
author img

By

Published : Sep 21, 2020, 6:32 PM IST

ಆಗ್ರಾ: ಆಗ್ರಾದಲ್ಲಿ 450ಕ್ಕೂ ಹೆಚ್ಚು ಪರವಾನಗಿ ಹೊಂದಿದ ಛಾಯಾಗ್ರಾಹಕರು ಇದೀಗ ನಿಟ್ಟುಸಿರು ಬಿಡುವಂತಾಗಿದೆ. ಕಾರಣ ಅನ್​ಲಾಕ್​ 4.0 ಅಡಿಯಲ್ಲಿ ತಾಜ್​ ಮಹಲ್​ ತೆರೆಯಲು ನಿರ್ಧಾರ ಮಾಡಲಾಗಿದ್ದು, ಚೀನಾ, ತೈವಾನ್​ನ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಭವ್ಯವಾದ ತಾಜ್ ವೀಕ್ಷಿಸಲು ಬಂದ ಪ್ರವಾಸಿಗರನ್ನು ಅವಲಂಬಿಸಿರುವ ಒಟ್ಟು ಛಾಯಾಗ್ರಾಹಕರು ಎಲ್ಲಾ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು ಅನುಸರಿಸುತ್ತಾರೆ. ಅವರಲ್ಲಿ ಎರಡು ಪಾಳಿಗಳಲ್ಲಿ ಕೆಲಸ ಮಾಡುವ ಛಾಯಾಗ್ರಾಹಕರಿದ್ದು, ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮತ್ತು ಇನ್ನೊಂದು ಮಧ್ಯಾಹ್ನ 12: 30 ರಿಂದ ಸೂರ್ಯಾಸ್ತದವರೆಗೆ ಕೆಲಸ ಮಾಡುತ್ತಾರೆ. ಇನ್ನು ಒಂದು ಸ್ಲಾಟ್‌ನಲ್ಲಿ ಸುಮಾರು 2,500 ಸಂದರ್ಶಕರಿಗೆ ಅವಕಾಶವಿದೆ ಎಂದು ತಿಳಿದುಬಂದಿದೆ.

ತಾಜ್​ಮಹಲ್​ಗೆ ದಿನಕ್ಕೆ ಸುಮಾರು 5,000ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ ಲಾಕ್​ಡೌನ್​ ಬಳಿಕ ಅವೆಲ್ಲವೂ ಬಂದ್​ ಆಗಿದ್ದು, ಛಾಯಾಗ್ರಾಹಕರು ಬದುಕು ಸಂಕಷ್ಟದಲ್ಲಿತ್ತು. ಇನ್ನು ಸುದ್ದಿಗಾರರೊಂದಿಗೆ ಮಾತನಾಡಿದ ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್‌ಐ) ಅಧಿಕಾರಿಯೊಬ್ಬರು, ಸೋಮವಾರದಂದು ಮೊದಲ ಪಾಳಿಯಲ್ಲಿ 500 ಕ್ಕೂ ಹೆಚ್ಚು ಪ್ರವಾಸಿಗರು ತಾಜ್‌ಗೆ ಭೇಟಿ ನೀಡಿದ್ದಾರೆ ಎಂದರು.

ಪುರಾತತ್ವ ಶಾಸ್ತ್ರದ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಸರ್ವೊತ್ತಮ್ ಸಿಂಗ್ ಮಾತನಾಡಿ, "ಕೊರೊನಾ ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ಜನರು ತತ್ತರಿಸಿದ್ದಾರೆ. ಕೆಲವರು ಬೇರೆ ಕೆಲಸ ಮಾಡಲು ಹೊರಟರೂ ಸಹ ನಮ್ಮಂತಹ ಛಾಯಾಗ್ರಾಹಕರಿಗೆ ಅಸಾಧ್ಯ. ಏಕೆಂದರೆ ನಮಗೆ ಬೇರೆ ಕೆಲಸಗಳು ಗೊತ್ತಿಲ್ಲ" ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.