ETV Bharat / bharat

ಇಂದಿನಿಂದ ತಾಜ್​ ಮಹಲ್​​ ವೀಕ್ಷಣೆಗೆ ಮುಕ್ತ: ಪ್ರವಾಸಿಗರಿಗೆ ಈ ನಿಯಮಗಳು ಕಡ್ಡಾಯ

ಪ್ರೇಮಸೌಧ ತಾಜ್​ ಮಹಲ್ ಇಂದಿನಿಂದ ಪ್ರವಾಸಿಗರಿಗೆ ಮುಕ್ತವಾಗಿದ್ದು, ಇದನ್ನು ಕಣ್ತುಂಬಿಕೊಳ್ಳಲು ಕೆಲವು ನಿಯಮಗಳ ಪಾಲನೆ ಕಡ್ಡಾಯವಾಗಿದೆ.

taj mahal
ತಾಜ್​ ಮಹಲ್​
author img

By

Published : Sep 21, 2020, 8:29 AM IST

ಆಗ್ರಾ (ಉತ್ತರ ಪ್ರದೇಶ): ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ತಾಜ್​​ ಮಹಲ್​​ ಇಂದಿನಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದೆ. ಪ್ರೇಮಸೌಧ ಎಂದೇ ಕರೆಯಲ್ಪಡುವ ತಾಜ್​ ಮಹಲ್​ ಸೌಂದರ್ಯವನ್ನು ಇಂದಿನಿಂದ ಪ್ರವಾಸಿಗರು ತಮ್ಮ ಕಣ್ಣುಗಳಲ್ಲಿ ತುಂಬಿಕೊಳ್ಳಬಹುದು. ಆದರೆ ತಾಜ್​​ ಮಹಲ್​ ​ ಪ್ರವೇಶಕ್ಕೆ ಕೆಲವು ನಿಯಮಗಳು ಕಡ್ಡಾಯ. ಪ್ರವಾಸಿಗರು ಮಾಸ್ಕ್​​ ಧರಿಸಬೇಕು. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

ಕೊರೊನಾ ವೈರಸ್​​ ಸೋಂಕಿನ ಕಾರಣದಿಂದಾಗಿ ಭಾರತೀಯ ಪುರಾತತ್ವ ಇಲಾಖೆ ಮಾರ್ಚ್​​ 17ರಿಂದ ತಾಜ್​ಮಹಲ್​​ ಬಂದ್​ ಮಾಡಿತ್ತು. ಈಗ ತಾಜ್​ಮಹಲ್​ ಕಣ್ತುಂಬಿಕೊಳ್ಳುವ ಭಾಗ್ಯ ಇಂದಿನಿಂದ ಪ್ರವಾಸಿಗರಿಗೆ ಸಿಗಲಿದೆ. 188 ದಿನಗಳ ನಂತರ ಪ್ರೇಮಸೌಧವನ್ನು ಮತ್ತೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.

ತಾಜ್​ ಮಹಲ್​​ಗೆ ಭೇಟಿ ನೀಡುವ ಪ್ರವಾಸಿಗರಿಗೆ ಸೋಂಕು ಹರಡದಂತೆ ಹೊಸ ವ್ಯವಸ್ಥೆ ಮಾಡಲಾಗಿದೆ. ನೂತನ ವ್ಯವಸ್ಥೆಯ ಪ್ರಕಾರ ದಿನವೊಂದಕ್ಕೆ 5 ಸಾವಿರ ಪ್ರವಾಸಿಗರಿಗಷ್ಟೇ ತಾಜ್​ ಮಹಲ್​​ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ಈ ಕಾರಣಕ್ಕಾಗಿ ಎರಡು ಶಿಫ್ಟ್​ಗಳನ್ನು ಮಾಡಲಾಗಿದೆ. ಮೊದಲ ಶಿಫ್ಟ್​ನಲ್ಲಿ ಎರಡೂವರೆ ಸಾವಿರ ಪ್ರವಾಸಿಗರಿಗೆ ಅನುಮತಿ ನೀಡಲಾಗುವುದು. ಎರಡನೇ ಪಾಳಿಯಲ್ಲಿ ಉಳಿದ ಎರಡೂವರೆ ಸಾವಿರ ಪ್ರವಾಸಿಗರಿಗೆ ಒಳಗೆ ಬಿಡಲಾಗುವುದು.

ಪ್ರವಾಸಿಗರಿಗೆ ತೊಂದರೆಯಾಗದಂತೆ ಆಗ್ರಾ ಪೊಲೀಸರು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಯಾವುದೇ ಕಾರಣಕ್ಕೂ ಗ್ರೂಪ್​ ಫೋಟೋ ತೆಗೆಯಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸ್​ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಟಿಕೆಟ್​ ಕೌಂಟರ್​ ಬಂದ್​ ಮಾಡಲಾಗಿದ್ದು, ಪ್ರವಾಸಿಗರು ಆನ್​ಲೈನ್​​ನಲ್ಲೇ ಟಿಕೆಟ್​ ಪಡೆಯಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.