ETV Bharat / bharat

ತಬ್ಲಿಘಿ ಜಮಾತ್​ ಮುಖ್ಯಸ್ಥ ಮೌಲಾನಾ ಸಾದ್​ಗೆ ಕೊರೊನಾ ನೆಗಟಿವ್​ - ದೆಹಲಿಯ ನಿಜಾಮುದ್ದೀನ್​ನ ಮರ್ಕಜ್

ತಲೆಮರೆಸಿಕೊಂಡು ಹೋಮ್​ ಕ್ವಾರಂಟೈನ್​ನಲ್ಲಿರುವ ತಬ್ಲಿಘಿ ಜಮಾತ್​ ಮುಖ್ಯಸ್ಥ ಮೌಲಾನಾ ಸಾದ್​ಗೆ ಕೋವಿಡ್​-19 ಪರೀಕ್ಷೆ ನಡೆಸಿದ್ದು, ವರದಿ ನೆಗಟಿವ್ ಬಂದಿರುವುದಾಗಿ ಸಾದ್ ಪರ ವಕೀಲರೊಬ್ಬರು​ ತಿಳಿಸಿದ್ದಾರೆ.

Tablighi Jamaat chief Maulana Saad
ತಬ್ಲಿಘಿ ಜಮಾತ್​ ಮುಖ್ಯಸ್ಥ ಮೌಲಾನಾ ಸಾದ್
author img

By

Published : Apr 27, 2020, 1:39 PM IST

ನವದೆಹಲಿ: ತಬ್ಲಿಘಿ ಜಮಾತ್​ ಮುಖ್ಯಸ್ಥ, ದೆಹಲಿ ಮರ್ಕಜ್‌ ಕಾರ್ಯಕ್ರಮದ ಆರೋಪಿ ಮೌಲಾನಾ ಸಾದ್ ಕಂಧಲ್ವಿಗೆ ಕೊರೊನಾ ವರದಿ ನೆಗಟಿವ್​ ಬಂದಿರುವುದಾಗಿ ಸಾದ್ ಪರ ವಕೀಲರೊಬ್ಬರು ಮಾಹಿತಿ ನೀಡಿದ್ದಾರೆ.

ತಲೆಮರೆಸಿಕೊಂಡು ಹೋಮ್​ ಕ್ವಾರಂಟೈನ್​ನಲ್ಲಿರುವ ಆರೋಪಿ ಸಾದ್​ಗೆ ಕೋವಿಡ್​-19 ಪರೀಕ್ಷೆ ನಡೆಸಿದ್ದು, ವರದಿ ನೆಗಟಿವ್​ ಎಂದು ಬಂದಿದೆ. ಪರೀಕ್ಷಾ ವರದಿಯನ್ನು ದೆಹಲಿ ಪೊಲೀಸ್​ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗುವುದು ಎಂದು ವಕೀಲರು ತಿಳಿಸಿದ್ದಾರೆ.

ಭಾರತದಲ್ಲಿ ತ್ವರಿತವಾಗಿ ಕೊರೊನಾ ಸೋಂಕು ಹರಡಲು ದೆಹಲಿಯ ನಿಜಾಮುದ್ದೀನ್​ನ ಮರ್ಕಜ್​ನಲ್ಲಿ ಮಾರ್ಚ್​ನಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜಿಸಿದ್ದ ತಬ್ಲಿಘಿ ಜಮಾತ್ ಕೂಟ ಕಾರಣವಾಗಿದೆ. ಈ ಹಿನ್ನೆಲೆ ಕೂಟವನ್ನು ಆಯೋಜಿಸಿದ್ದ ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಕಂಧಲ್ವಿ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ನಾಪತ್ತೆಯಾಗಿರುವ ಸಾದ್​ಗಾಗಿ ಅಪರಾಧ ವಿಭಾಗ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹುಡುಕುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.