ಅಮರಾವತಿ (ಆಂಧ್ರ ಪ್ರದೇಶ): ಆನ್‌ಲೈನ್ ಮೂಲಕ ಆಹಾರ ವಿತರಣೆ ಮಾಡುವ ಸ್ವಿಗ್ಗಿ ಆಂಧ್ರ ಪ್ರದೇಶ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಮನೆ ಬಾಗಿಲಿಗೆ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ತಲುಪಿಸಲಿದೆ.
-
2/2: Soon we will be delivering fresh Fruits and Vegetables at your doorstep in partnership with Department of Agriculture Marketing Andhra Pradesh so that you can stay home and stay safe.
— Swiggy (@swiggy_in) April 20, 2020 " class="align-text-top noRightClick twitterSection" data="
">2/2: Soon we will be delivering fresh Fruits and Vegetables at your doorstep in partnership with Department of Agriculture Marketing Andhra Pradesh so that you can stay home and stay safe.
— Swiggy (@swiggy_in) April 20, 20202/2: Soon we will be delivering fresh Fruits and Vegetables at your doorstep in partnership with Department of Agriculture Marketing Andhra Pradesh so that you can stay home and stay safe.
— Swiggy (@swiggy_in) April 20, 2020
ಲಾಕ್ಡೌನ್ನಂತ ಕಠಿಣ ಪರಿಸ್ಥಿತಿಯಲ್ಲಿ ರಾಜ್ಯದ ಜನರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಆಂಧ್ರ ಸರ್ಕಾರಕ್ಕೆ ಸ್ವಿಗ್ಗಿ ಕಂಪನಿ ಧನ್ಯವಾದ ಅರ್ಪಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸ್ವಿಗ್ಗಿ, ಕಠಿಣ ಸಮಯದಲ್ಲಿ ಆಂಧ್ರ ಪ್ರದೇಶ ಗ್ರಾಹಕರಿಗೆ ಸೇವೆ ಸಲ್ಲಿಸಲು ನಮಗೆ ಅವಕಾಶವನ್ನು ಒದಗಿಸಿದ್ದಕ್ಕಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್, ಕೋವಿಡ್-19 ವಿಶೇಷ ಅಧಿಕಾರಿಗಳಿಗೆ ಧನ್ಯವಾದಗಳು. ಆಂಧ್ರದ ಇ-ಪಾಸ್ ವ್ಯವಸ್ಥೆಯು ಬಳಕೆದಾರರ ಸ್ನೇಹಿಯಾಗಿದೆ' ಎಂದಿದೆ.
ಶೀಘ್ರದಲ್ಲೇ ನಾವು ಆಂಧ್ರ ಪ್ರದೇಶದ ಕೃಷಿ ಮಾರುಕಟ್ಟೆ ಇಲಾಖೆಯ ಸಹಭಾಗಿತ್ವದಲ್ಲಿ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲಿದ್ದೇವೆ. ಹೀಗಾಗಿ ನೀವು ಮನೆಯಲ್ಲೇ ಇದ್ದು, ಸುರಕ್ಷಿತವಾಗಿರಿ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದೆ.