ETV Bharat / bharat

22ನೇ ವಯಸ್ಸಿಗೆ ಜೂನಿಯರ್ ಸಿವಿಲ್ ಜಡ್ಜ್ ಹುದ್ದೆ ಪಡೆದ ಸ್ವಾತಿ ಭವಾನಿ - ಕಿರಿಯ ಸಿವಿಲ್ ನ್ಯಾಯಾಧೀಶರ ಉನ್ನತ ಹುದ್ದೆ

ತೆಲಂಗಾಣ ಹೈಕೋರ್ಟ್ ಇತ್ತೀಚೆಗೆ ನಡೆಸಿದ ನ್ಯಾಯಾಂಗ ಸೇವೆಗಳ ಪರೀಕ್ಷೆಯಲ್ಲಿ ಸ್ವಾತಿ ಭವಾನಿ ಪೊಟ್ಲಾ ಎನ್ನುವವರು ಕಿರಿಯ ಸಿವಿಲ್ ನ್ಯಾಯಾಧೀಶರ ಉನ್ನತ ಹುದ್ದೆ ಪರೀಕ್ಷೆಯಲ್ಲಿ ಎರಡನೇ ರ್‍ಯಾಂಕ್ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸ್ವಾತಿ ಭವಾನಿ
ಸ್ವಾತಿ ಭವಾನಿ
author img

By

Published : Feb 1, 2020, 9:33 AM IST

ತೆಲಂಗಾಣ: ತೆಲಂಗಾಣ ಹೈಕೋರ್ಟ್ ಇತ್ತೀಚೆಗೆ ನಡೆಸಿದ ನ್ಯಾಯಾಂಗ ಸೇವೆಗಳ ಪರೀಕ್ಷೆಯಲ್ಲಿ ಸ್ವಾತಿ ಭವಾನಿ ಪೊಟ್ಲಾ ಎನ್ನುವವರು ಕಿರಿಯ ಸಿವಿಲ್ ನ್ಯಾಯಾಧೀಶರ ಉನ್ನತ ಹುದ್ದೆ ಪರೀಕ್ಷೆಯಲ್ಲಿ ಎರಡನೇ ರ್‍ಯಾಂಕ್ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜೂನಿಯರ್ ಸಿವಿಲ್ ಜಡ್ಜ್ ಹುದ್ದೆ ಪಡೆದ ಸ್ವಾತಿ ಭವಾನಿ

ಹೈದರಾಬಾದ್ ಮೂಲದ ಸ್ವಾತಿ ಭವಾನಿ ತಮ್ಮ 22ನೇ ವಯಸ್ಸಿನಲ್ಲಿಯೇ ಕಿರಿಯ ಸಿವಿಲ್ ನ್ಯಾಯಾಧೀಶರ ಉನ್ನತ ಹುದ್ದೆಗೆ ಆಯ್ಕೆಯಾಗುವ ಮೂಲಕ ದಾಖಲೆಯನ್ನೇ ನಿರ್ಮಿಸಿದ್ದಾರೆ.

ಸ್ವಾತಿ ಮತ್ತು ಆಕೆಯ ಕುಟುಂಬ ಮೂಲತಃ ಮೆಹಬೂಬಾಬಾದ್‌ ಬಳಿಯ ದೋರ್ನಕಲ್​ನವರಾಗಿದ್ದು, ಉದ್ಯೋಗ ಮತ್ತು ಶಿಕ್ಷಣದ ಸಲುವಾಗಿ ಹೈದರಾಬಾದ್​ನ ಆರ್.ಕೆ.ಪುರಂನಲ್ಲಿ ಬಂದು ನೆಲೆಸಿದ್ದಾರೆ. ಅವರ ತಾಯಿ ರೈಲ್ವೆ ಉದ್ಯೋಗಿಯಾಗಿದ್ದು ಮತ್ತು ತಂದೆ ಉದ್ಯಮಿಯಾಗಿದ್ದಾರೆ. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಇವರು ಕಾನೂನು ಪದವಿಯನ್ನು ಪೂರ್ಣಗೊಳಿಸಿರುವುದಲ್ಲದೆ, ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಾಧೀಶರೊಂದಿಗೆ ಇಂಟರ್ನ್‌ಶಿಪ್ ಸಹ ಪೂರ್ಣಗೊಳಿಸಿದ್ದಾರೆ.

ತಮ್ಮ ಸಾಧನೆಯ ಕುರಿತಂತೆ ಪ್ರತಿಕ್ರಿಯೆ ನೀಡಿದ ಸ್ವಾತಿ, ಹಿರಿಯ ನ್ಯಾಯಾಧೀಶರಿಂದ ಪ್ರೇರಿತರಾಗಿ ನಾನು ಕಾನೂನು ವಿಷಯಗಳ ಕುರಿತು ಹೆಚ್ಚು ತಿಳಿದುಕೊಂಡೆ. ದೃಢಸಂಕಲ್ಪ, ಆತ್ಮವಿಶ್ವಾಸ, ಸಮಯ ಪ್ರಜ್ಞೆ, ಸರಿಯಾದ ಯೋಜನೆ ಮತ್ತು ಪ್ರಯತ್ನಗಳಿಂದ ಗುರಿ ತಲುಪಲು ಸಾಧ್ಯವಾಯಿತು ಎಂದು ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.