ETV Bharat / bharat

ಸುಶಾಂತ್ ಸಿಂಗ್​ರ ವಿಸ್ಸೆರಾದ ಸಂರಕ್ಷಣೆಯಲ್ಲಿ ಬೇಜವಾಬ್ದಾರಿ... ಏಮ್ಸ್​ ಮೂಲಗಳಿಂದ ಮಾಹಿತಿ - ಕರುಳಿನಲ್ಲಿದ್ದ ಆಹಾರದ ಮಾದರಿ

ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್​​ (ಏಮ್ಸ್) ನಲ್ಲಿ ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ಇಲಾಖೆಯಿಂದ ಪಡೆದ ವಿಸ್ಸೆರಾವು "ಕಡಿಮೆ ಪ್ರಮಾಣದಲ್ಲಿದೆ ಮತ್ತು ಅದನ್ನು ಸರಿಯಾಗಿ ಸಂರಕ್ಷಿಸದ ಕಾರಣ ಕ್ಷೀಣಿಸಿದೆ" ಎಂದು ಏಮ್ಸ್​ನ ಮೂಲಗಳು ತಿಳಿಸಿವೆ.

ಸುಶಾಂತ್ ಸಿಂಗ್
ಸುಶಾಂತ್ ಸಿಂಗ್
author img

By

Published : Sep 20, 2020, 1:03 AM IST

ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಕಾರಣವನ್ನು ಕಂಡುಹಿಡಿಯುವಲ್ಲಿ ಪ್ರಮುಖವಾದ ವಿಸ್ಸೆರಾ (ಕರುಳಿನಲ್ಲಿದ್ದ ಆಹಾರದ ಮಾದರಿ)ಯನ್ನು ಸರಿಯಾಗಿ ಸಂರಕ್ಷಿಸದ ಕಾರಣ ಅದು ಕ್ಷೀಣಿಸಿದೆ ಎಂದು ಏಮ್ಸ್​ನ ಮೂಲಗಳು ಬಹಿರಂಗಪಡಿಸಿವೆ.

ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್​​ (ಏಮ್ಸ್) ನಲ್ಲಿ ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ಇಲಾಖೆಯಿಂದ ಪಡೆದ ವಿಸ್ಸೆರಾವು "ಕಡಿಮೆ ಪ್ರಮಾಣದಲ್ಲಿದೆ ಮತ್ತು ಅದನ್ನು ಸರಿಯಾಗಿ ಸಂರಕ್ಷಿಸದ ಕಾರಣ ಕ್ಷೀಣಿಸಿದೆ" ಎಂದು ಏಮ್ಸ್​ನ ಮೂಲಗಳು ತಿಳಿಸಿವೆ. ಶುಕ್ರವಾರ ಸಂಜೆಯವರೆಗೂ, ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಕಾರಣವನ್ನು ಕಂಡುಹಿಡಿಯುವಲ್ಲಿ ಪ್ರಮುಖವಾದ ವಿಸ್ಸೆರಾವನ್ನು ನವದೆಹಲಿಯ ಏಮ್ಸ್ ವಿಧಿ ವಿಜ್ಞಾನ ವಿಭಾಗದಲ್ಲಿ ಪರೀಕ್ಷಿಸಲಾಗಿದೆ. ಈ ವೇಳೆ "ಒಳಾಂಗಗಳ ಕ್ಷೀಣತೆಯಿಂದಾಗಿ ರಾಸಾಯನಿಕ ಮತ್ತು ವಿಷ ವೈಜ್ಞಾನಿಕ ವಿಶ್ಲೇಷಣೆಯಲ್ಲಿ ಸಾವಿಗೆ ನಿಖರ ಕಾರಣ ಕಂಡುಹಿಡಿಯುವುದು ಕಷ್ಟಕರವಾಗಿದೆ ಎಂದು ಮೂಲಗಳು ತಿಳಿಸಿವೆ.

ಶಂಕಿತ ವಿಷ ಅಥವಾ ಮಾದಕವಸ್ತು ಸೇವನೆಯಿಂದ ಸುಶಾಂತ್ ಸಾವನ್ನಪ್ಪಿದ್ದಾರೆಯೇ ಎಂದು ದೃಢೀಕರಿಸಲು ಸಿಬಿಐಗೆ ಒಳಾಂಗಗಳ ವಿಶ್ಲೇಷಣೆ ಅತ್ಯಂತ ನಿರ್ಣಾಯಕ ಪರೀಕ್ಷೆಯಾಗಿದೆ. ಜೂನ್ 15 ರಂದು ಶವ ಪರೀಕ್ಷೆ ನಡೆಸಿದ ನಂತರ, ಮುಂಬೈನ ಕೂಪರ್ ಆಸ್ಪತ್ರೆಯ ಐವರು ವೈದ್ಯರನ್ನು ಒಳಗೊಂಡ ವೈದ್ಯಕೀಯ ಮಂಡಳಿ "ನೇಣು ಹಾಕಿಕೊಂಡು ಸುಶಾಂತ್ ಸಾವನಪ್ಪಿರುವುದಾಗಿ ಉಲ್ಲೇಖಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.