ETV Bharat / bharat

ಸುಶಾಂತ್​ ಸಿಂಗ್​ ಸಾವು ಪ್ರಕರಣ: ಮಾದಕ ವಸ್ತು ಕಳ್ಳ ಸಾಗಣೆಯ ಆರೋಪಿ ಎನ್​ಸಿಬಿಯಿಂದ ಅರೆಸ್ಟ್​

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ನಿಗೂಢ ಸಾವಿನ ಪ್ರಕರಣದಲ್ಲಿ ಡ್ರಗ್ಸ್​ ಮಾಫಿಯಾದ ಗಾಳಿ ಬೀಸತೊಡಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಇಡಿ ಹಾಗೂ ಸಿಸಿಬಿ ತಂಡ ಪೂರಕವಾದ ಮಾಹಿತಿಗಳನ್ನು ಕಲೆ ಹಾಕಿದ್ದು, ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ ಜೈದ್​​ ಎಂಬಾತನನ್ನು ಇಂದು ಎನ್​ಸಿಬಿ ತಂಡ ಬಂಧಿಸಿದೆ.

NCB
ಸಾಂದರ್ಭಿಕ ಚಿತ್ರ
author img

By

Published : Sep 2, 2020, 3:40 PM IST

ಮುಂಬೈ(ಮಹಾರಾಷ್ಟ್ರ): ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ ಓರ್ವ ವ್ಯಕ್ತಿಯನ್ನು ಎನ್‌ಸಿಬಿ ತಂಡ ಇಂದು ಬಂಧಿಸಿದೆ.

ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಮಾದಕ ವಸ್ತುಗಳ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವ ಎನ್​ಸಿಬಿ, ಇದೀಗ ಜೈದ್​ ಎಂಬಾತನನ್ನು ಬಂಧಿಸಿ ತನಿಖೆ ಮುಂದುವರಿಸಿದೆ. ಜೈದ್​ ಎಂಬಾತ ಮುಂಬೈ ನಗರದಲ್ಲಿ ಗಾಂಜಾ ಸೇರಿದಂತೆ ವಿವಿಧ ರೀತಿಯ ಡ್ರಗ್ಸ್​​ ಮಾರಾಟ ದಂಧೆಯಲ್ಲಿ ತೊಡಗಿದ್ದ ಎಂದು ಎನ್​ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಎನ್​​ಸಿಬಿ ಅಧಿಕಾರಿಗಳ ಪ್ರಕಾರ ಜೈದ್​​ ಎಂಬಾತ ಉತ್ತಮ ಗುಣಮಟ್ಟದ ಗಾಂಜಾದ ಮೊಗ್ಗುಗಳನ್ನು ಪ್ರತಿ ಗ್ರಾಂಗೆ 5,000 ದರದಲ್ಲಿ ಮಾರಾಟ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈ ನಗರದಲ್ಲಿ ಮಾದಕವಸ್ತು ಕಳ್ಳಸಾಗಣೆ ಆರೋಪದಡಿ ಎನ್​ಸಿಬಿ ತಂಡ ಕಳೆದ ವಾರ ಇಬ್ಬರು ಆರೋಪಿಗಳನ್ನು ಬಂಧಿಸಿತ್ತು ಹಾಗೂ ಬಂಧನಕ್ಕೊಳಗಾದ ವ್ಯಕ್ತಿಗಳ ವಿಚಾರಣೆ ನಡೆಸಿದಾಗ ಜೈದ್​ ಎಂಬ ವ್ಯಕ್ತಿಯ ಹೆಸರು ಕೇಳಿ ಬಂದಿತ್ತು. ಇದೀಗ ಈತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಮುಂಬೈ ನಗರಕ್ಕೆ ಮಾದಕ ವಸ್ತುಗಳ ಸರಬರಾಜಿನ ಹಿಂದೆ ಹಲವಾರು ಕಾಣದ ಕೈಗಳು ತೊಡಗಿಕೊಂಡಿದ್ದು, ಈ ಜಾಲ ಮಹಾರಾಷ್ಟ್ರ, ದೆಹಲಿ ಮತ್ತು ಗೋವಾದಲ್ಲಿಯೂ ಬೇರೂರಿದೆ ಎಂದು ಎನ್​​ಸಿಬಿ ಸಂಶಯ ವ್ಯಕ್ತಪಡಿಸಿದೆ.

ಸುಶಾಂತ್​ ಸಿಂಗ್​ ರಜಪೂತ್​​ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ), ಪ್ರಕರಣಕ್ಕೆ ಸಂಬಂಧಪಟ್ಟ ರಿಯಾ ಮತ್ತು ಗೌರವ್ ಆರ್ಯಗೆ ಸೇರಿರುವ ಎರಡು ಮೊಬೈಲ್ ಫೋನ್‌ಗಳಲ್ಲಿ ಡ್ರಗ್ಸ್​​ ಚಾಟ್​​ಗಳ ವರದಿಯನ್ನು ಪಡೆದುಕೊಂಡಿದೆ. ಮಾದಕ ದ್ರವ್ಯ ಮತ್ತು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.

ಅಧಿಕಾರಿಗಳ ಪ್ರಕಾರ, ಈ ಮೊಬೈಲ್ ಫೋನ್ ಚಾಟ್‌ಗಳು ಮತ್ತು ಸಂದೇಶಗಳು ಮಾದಕ ವಸ್ತುಗಳ ಸಂಗ್ರಹಣೆ ಮತ್ತು ಬಳಕೆ ಹಾಗೂ ಮಾರಾಟದ ಜಾಲದ ಬಗ್ಗೆ ಮಾಹಿತಿ ನೀಡಿವೆ ಎಂದು ತಿಳಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವ ಇಡಿ, ಎನ್‌ಸಿಬಿ ಮತ್ತು ಸಿಬಿಐನೊಂದಿಗೆ ಈ ವಿಚಾರಗಳನ್ನು ಹಂಚಿಕೊಂಡಿದೆ.

ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ, ಇಂದ್ರಜಿತ್ ಚಕ್ರವರ್ತಿ, ಸಂಧ್ಯಾ ಚಕ್ರವರ್ತಿ, ಶೋಯಿಕ್ ಚಕ್ರವರ್ತಿ, ಸ್ಯಾಮ್ಯುಯೆಲ್ ಮಿರಾಂಡಾ, ಶ್ರುತಿ ಮೋದಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.