ಸೂರತ್: ಲಾಕ್‌ಡೌನ್ ಸಮಯದಲ್ಲಿ ಜನರು ಮನೆ ಬಿಟ್ಟು ಹೊರಬಾರದಂತೆ ತಡೆಯುವ ನಿಟ್ಟಿನಲ್ಲಿ ಪೊಲೀಸರು ಬಲವನ್ನು ಬಳಸಿದ್ದಕ್ಕಾಗಿ ದೇಶಾದ್ಯಂತ ಟೀಕೆಗೆ ಗುರಿಯಾಗುತ್ತಿದ್ದರೆ, ಇತ್ತ ಸೂರತ್‌ನ ಜಹಾಂಗೀರ್‌ಪುರದ ಪೊಲೀಸರು ಜನರು ಸುರಕ್ಷಿತವಾಗಿರಲು ಗಡಿಯಾರದ ರೀತಿ ಸುತ್ತುವರೆದು ವಿನೂತನ ಪ್ರಯೋಗದೊಂದಿಗೆ ಜನರಿಗೆ ಸಂದೇಶವನ್ನು ಮೂಡಿಸುತ್ತಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಜನರು ಹೊರಗೆ ಬರದಂತೆ ತಡೆಯುವ ನಿಟ್ಟಿನಲ್ಲಿ ಮೃದು ಮಾರ್ಗವನ್ನು ಅಳವಡಿಸಿಕೊಂಡಿರುವ ಜಹಾಂಗೀರ್‌ಪುರ ಪೊಲೀಸರು ತಮ್ಮ ಲಾಠಿಗಳನ್ನು ದೂರವಿಟ್ಟಿದ್ದಾರೆ.
ಸಾರ್ವಜನಿಕ ಸ್ಥಳವನ್ನು ಬಳಸಿಕೊಂಡಿರುವ ಪೊಲೀಸರು, ಲಾಕ್‌ಡೌನ್‌ಗೆ ಸಮಯದಲ್ಲಿ ಪಾಲಿಸಬೇಕಾದ ಅಗತ್ಯ ಪ್ರಕಟಣೆಗಳೊಂದಿಗೆ ದೇಶಭಕ್ತಿ ಗೀತೆಗಳನ್ನು ನುಡಿಸುವ ಮೂಲಕ ಜನರನ್ನು ಸಂಪರ್ಕಿಸುತ್ತಿದ್ದಾರೆ.
ಲಾಕ್‌ಡೌನ್ ವಿಸ್ತರಣೆ ಜೊತೆಗೆ ಭಾರತವು ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಮುಗ್ಗರಿಸುತ್ತಿದ್ದಂತೆಯೇ ಪೊಲೀಸರು ನಗರದಲ್ಲಿ ಶಾಂತಿಯುತವಾಗಿ ವರ್ತಿಸುತ್ತಿದ್ದಾರೆ.
ಪೊಲೀಸರ ಈ ರೀತಿಯ ಉತ್ತಮ ವರ್ತನೆಯನ್ನು ಕಂಡ ಜನರು ತಮ್ಮ ಮೊಬೈಲ್ ಫೋನ್‌ಗಳಿಂದ ಬೆಳಕನ್ನು ಹೊತ್ತಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.