ನವದೆಹಲಿ: ಸಾಮಾಜಿಕ ಜಾಲತಾಣಕ್ಕೆ ಕಡ್ಡಾಯ ಆಧಾರ್ ಜೋಡಣೆಯ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.
ಅರ್ಜಿದಾರರಾದ ಅಶ್ವಿನಿ ಉಪಾಧ್ಯಾಯ ಅವರಿಗೆ, ಈ ಬಗ್ಗೆ ಮೊದಲು ಹೈಕೋರ್ಟ್ಗೆ ಮನವಿ ಸಲ್ಲಿಸುವಂತೆ ಸುಪ್ರೀಂ ಸೂಚಿಸಿದೆ.
ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಮನವಿಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿರುವ ಹಲವು ಫೇಕ್ ಅಕೌಂಟ್ಗಳನ್ನು ತೆಗೆದುಹಾಕಿ, ಸುಳ್ಳು ಸುದ್ದಿ ಹಾಗೂ ಪಾವತಿ ಸುದ್ದಿಗಳನ್ನು ನಿಯಂತ್ರಿಸಲು ಆಧಾರ್ ಜೋಡಣೆ ಅಗತ್ಯವೆಂದು ಹೇಳಿದ್ದರು. ಅಲ್ಲದೆ ಹಲವು ರಾಜಕೀಯ ನಾಯಕರುಗಳು ಚುನಾವಣಾ ಸಂದರ್ಭದಲ್ಲಿ ತಮ್ಮ ಅಥವಾ ಪಕ್ಷದ ಪ್ರಚಾರಕ್ಕಾಗಿ ಹೆಚ್ಚಾಗಿ ಫೇಕ್ ಅಕೌಂಟ್ಗಳನ್ನು ಬಳಸುತ್ತಿದ್ದಾರೆ. ಅದು ಮತದಾನಕ್ಕಿಂತ 48 ಗಂಟೆ ಮುಂಚಿತವಾಗಿಯೂ ಬಳಕೆಯಲ್ಲಿರುತ್ತದೆ ಎಂದು ಕೋರ್ಟ್ ಗಮನಕ್ಕೆ ತಂದರು.
ಟ್ವಿಟ್ಟರ್ನಲ್ಲಿ ಸುಮಾರು 35 ಲಕ್ಷ ನಕಲಿ ಬಳಕೆದಾರರಿದ್ದು, 3.5 ಕೋಟಿ ಫೇಕ್ ಫೇಸ್ಬುಕ್ ಖಾತೆಗಳಿವೆ. ಇವುಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಈ ಮೂಲಕ ಜನಸಾಮಾನ್ಯರನ್ನು ದಾರಿತಪ್ಪಿಸಲಾಗುತ್ತಿದೆ ಎಂದು ಮನವಿಯಲ್ಲಿ ಅಶ್ವಿನಿ ಉಪಾಧ್ಯಾಯ ಉಲ್ಲೇಖಿಸಿದ್ದರು.