ETV Bharat / bharat

ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ: 14 ಸದಸ್ಯರ ಟ್ರಸ್ಟ್​ ರಚಿಸಿದ ಸುನ್ನಿ ವಕ್ಫ್​ ಬೋರ್ಡ್​​

ಸುಪ್ರೀಂಕೋರ್ಟ್​ ನೀಡಿದ್ದ ಐದು ಎಕರೆ ಜಾಗದಲ್ಲಿ ಟ್ರಸ್ಟ್​ ನಿರ್ಮಾಣ ಮಾಡಲು 14 ಸದಸ್ಯರ ತಂಡವನ್ನು ಸುನ್ನಿ ವಕ್ಫ್​ ಬೋರ್ಡ್​ ರಚಿಸಿದೆ.

sunni wakf board
ಸುನ್ನಿ ವಕ್ಫ್​ ಬೋರ್ಡ್
author img

By

Published : Jul 6, 2020, 3:28 PM IST

ಅಯೋಧ್ಯಾ(ಉತ್ತರಪ್ರದೇಶ): ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಉತ್ತರ ಪ್ರದೇಶ ಸುನ್ನಿ ವಕ್ಫ್​ ಬೋರ್ಡ್​ ಮುಂದಾಗಿದ್ದು, ಇದಕ್ಕಾಗಿ 14 ಮಂದಿಯನ್ನು ಒಳಗೊಂಡ ಟ್ರಸ್ಟ್​ ರಚನೆ ಮಾಡಿದೆ.

ಸುಪ್ರೀಂಕೋರ್ಟ್​ ರಾಮಮಂದಿರ ವಿವಾದವನ್ನು ಬಗೆಹರಿಸಿ ವಕ್ಫ್​ ಬೋರ್ಡ್​ಗೆ ಮಸೀದಿ ನಿರ್ಮಾಣಕ್ಕೆ ಐದು ಎಕರೆ ಜಾಗವನ್ನು ನೀಡಿತ್ತು. ಈ ಪ್ರದೇಶದಲ್ಲಿ ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್​ಬೋರ್ಡ್​ ಮುಂದಾಗಿದ್ದು, 14 ಮಂದಿ ಸದಸ್ಯರಿರುವ ಟ್ರಸ್ಟ್ ರಚನೆ ಮಾಡಿದೆ.

ಮಸೀದಿಯ ಜೊತೆಗೆ ವಿಶ್ವವಿದ್ಯಾಲಯ ಹಾಗೂ ಚಾರಿಟಬಲ್​ ಟ್ರಸ್ಟ್ ಕೂಡಾ ನಿರ್ಮಾಣ ಮಾಡಲು ಸುನ್ನಿ ವಕ್ಫ್​ ಬೋರ್ಡ್​ ಮುಂದಾಗಿದೆ.

ಈ ಹಿಂದೆ ವಕ್ಫ್​ ಬೋರ್ಡ್​ನ ಅಧ್ಯಕ್ಷ ಜುಫರ್ ಫಾರೂಕಿ ಸಭೆ ಕರೆದು ಟ್ರಸ್ಟ್​ ರಚಿಸುವುದಾಗಿ ಹೇಳಿದ್ದರು. ಜೊತೆಗೆ ಮಸೀದಿಯನ್ನು ಇಂಡೋ - ಇಸ್ಲಾಮಿಕ್​ ಸಂಶೋಧನಾ ಕೇಂದ್ರ, ಗ್ರಂಥಾಲಯ, ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಸ್ಪಷ್ಟನೆ ನೀಡಿದ್ದರು.

ಈಗ 14 ಮಂದಿಯ ಸಮಿತಿಯೊಂದು ರಚನೆಯಾಗಿದ್ದು, ಮಸೀದಿ ನಿರ್ಮಾಣದ ಮೇಲುಸ್ತುವಾರಿಯನ್ನು ಈ ಟ್ರಸ್ಟ್​ ವಹಿಸಿಕೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.