ETV Bharat / bharat

ಸ್ವಾರ್ಥಿ ನೇಪಾಳ ಸರ್ಕಾರ ನಿಜ ಸ್ನೇಹದ ಅರಿವಿಲ್ಲದೆ ಕುರುಡಾಗಿದೆ: ಎಐಎಸ್ಎಸ್ಸಿ ಸಂಸ್ಥಾಪಕ ಅಧ್ಯಕ್ಷ ಚಿಸ್ಟಿ - ಅಖಿಲ ಭಾರತ ಸೂಫಿ ಸಜ್ಜನಾಶಿನ್ ಕೌನ್ಸಿಲ್

ನೆರೆಯ ರಾಷ್ಟ್ರಗಳ ಈ ದುರದೃಷ್ಟಕರ ಮತ್ತು ಪ್ರಚೋದನಕಾರಿ ಕ್ರಮಗಳು ಸರಿಯಲ್ಲ. ಸ್ವಾರ್ಥಿ ನೇಪಾಳ ಸರ್ಕಾರ ನಿಜವಾದ ಸ್ನೇಹದ ಅರಿವಿಲ್ಲದೆ ಕುರುಡಾಗಿದೆ ಎಂದು ಎಐಎಸ್ಎಸ್ಸಿ ಸಂಸ್ಥಾಪಕ ಅಧ್ಯಕ್ಷ ಸೈಯದ್ ನಾಸೆರುದ್ದೀನ್ ಚಿಸ್ಟಿ ಹೇಳಿದರು.

ಅಖಿಲ ಭಾರತ ಸೂಫಿ ಸಜ್ಜನಾಶಿನ್ ಕೌನ್ಸಿಲ್
ಅಖಿಲ ಭಾರತ ಸೂಫಿ ಸಜ್ಜನಾಶಿನ್ ಕೌನ್ಸಿಲ್
author img

By

Published : Jun 14, 2020, 5:35 PM IST

ಜೈಪುರ: ಪೂರ್ವ ಲಡಾಖ್‌ನಲ್ಲಿನ ಚೀನಾ ಪಡೆಗಳ ಪ್ರಚೋದನಕಾರಿ ಕ್ರಮವನ್ನು ಅಖಿಲ ಭಾರತ ಸೂಫಿ ಸಜ್ಜನಾಶಿನ್ ಕೌನ್ಸಿಲ್ (ಎಐಎಸ್‌ಎಸ್‌ಸಿ) ಬಲವಾಗಿ ಖಂಡಿಸಿದೆ. ನೇಪಾಳ ತನ್ನ ರಾಜಕೀಯ ನಕ್ಷೆಯನ್ನು ಪುನಃ ರಚಿಸುವ ಮಸೂದೆಯನ್ನು ಅಂಗೀಕರಿಸುರುವುದಕ್ಕೆ ಅಸಮಾಧಾನ ಹೊರಹಾಕಿದೆ.

ಕೋವಿಡ್​-19 ಅನ್ನು ಎದುರಿಸಲು ಇಡೀ ಜಗತ್ತು ಕಾರ್ಯನಿರತವಾಗಿದೆ. ನಿರ್ದಿಷ್ಟವಾಗಿ ಭಾರತವು ವೈರಸ್ ಹರಡುವುದನ್ನು ತಡೆಯಲು ಮತ್ತು ಕೆಲ ವೈದ್ಯಕೀಯ ಸಂಪನ್ಮೂಲಗಳನ್ನು ಒದಗಿಸಿ, ಜಗತ್ತಿಗೆ ಸಹಾಯ ಮಾಡುವಲ್ಲಿ ನಿರತವಾಗಿದೆ. ಇಂತಹ ಸಮಯದಲ್ಲಿ ನೆರೆಯ ರಾಷ್ಟ್ರಗಳ ಈ ದುರದೃಷ್ಟಕರ ಮತ್ತು ಪ್ರಚೋದನಕಾರಿ ಕ್ರಮಗಳು ಸರಿಯಲ್ಲ. ಸ್ವಾರ್ಥಿ ನೇಪಾಳ ಸರ್ಕಾರ ನಿಜವಾದ ಸ್ನೇಹದ ಅರಿವಿಲ್ಲದೆ ಕುರುಡಾಗಿದೆ ಎಂದು ಎಐಎಸ್ಎಸ್ಸಿ ಸಂಸ್ಥಾಪಕ ಅಧ್ಯಕ್ಷ ಸೈಯದ್ ನಾಸೆರುದ್ದೀನ್ ಚಿಸ್ಟಿ ಹೇಳಿದರು.

ನೇಪಾಳ ಸರ್ಕಾರದ ಈ ಪ್ರಚೋದನಕಾರಿ ಕ್ರಿಯೆ ದ್ವಿಪಕ್ಷೀಯ ಸಂಬಂಧಗಳ ತತ್ವಗಳಿಗೆ ಮತ್ತು ಸಾರ್ಕ್‌ನ ಮಾರ್ಗದರ್ಶಿ ಸೂತ್ರಗಳಿಗೆ ವಿರುದ್ಧವಾಗಿದೆ ಎಂದರು.

ಓದಿ:ಗಡಿಯಲ್ಲಿ ನೇಪಾಳ ಪೊಲೀಸರ ಉಪಟಳ: ಚಿತ್ರಹಿಂಸೆ ನೀಡಿ ಭಾರತೀಯ ಪ್ರಜೆ ಬಿಡುಗಡೆ?

ಶನಿವಾರ, ನೇಪಾಳ ಸಂಸತ್ತಿನ ಕೆಳಮನೆ ದೇಶದ ಹೊಸ ರಾಜಕೀಯ ನಕ್ಷೆಯನ್ನು ನವೀಕರಿಸಲು ಸಂವಿಧಾನವನ್ನು ತಿದ್ದುಪಡಿ ಮಾಡಲು ಸರ್ವಾನುಮತದಿಂದ ಮತ ಚಲಾಯಿಸಿತು. ಭಾರತದ ಗಡಿಯಲ್ಲಿರುವ ಲಿಪುಲೆಖ್, ಕಲಾಪಣಿ ಮತ್ತು ಲಿಂಪಿಯಾಧುರಾದ ಆಯಕಟ್ಟಿನ ಪ್ರಮುಖ ಕ್ಷೇತ್ರಗಳ ಮೇಲೆ ಹಕ್ಕು ಸ್ಥಾಪಿಸಿತು.

ಲಡಾಖ್‌ನಲ್ಲಿ, ಭಾರತೀಯ ಮತ್ತು ಚೀನಾದ ಸೈನ್ಯಗಳು ಪಾಂಗೊಂಗ್ ತ್ಸೊ, ಗಾಲ್ವಾನ್ ವ್ಯಾಲಿ, ಡೆಮ್‌ಚಾಕ್ ಮತ್ತು ದೌಲತ್ ಬೇಗ್ ಓಲ್ಡಿಗಳಲ್ಲಿ ಭಿನ್ನಾಭಿಪ್ರಾಯದಲ್ಲಿ ತೊಡಗಿವೆ. ಪಂಗೊಂಗ್ ತ್ಸೊ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಗಣನೀಯ ಸಂಖ್ಯೆಯ ಚೀನೀ ಸೈನ್ಯದ ಸಿಬ್ಬಂದಿಗಳು ವಾಸ್ತವಿಕ ಗಡಿಯ ಭಾರತದ ಭಾಗಕ್ಕೆ ಅತಿಕ್ರಮಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.