ಚೆನ್ನೈ: ವಿವಿಧ ಹಗರಣಗಳಲ್ಲಿ ಆರ್‌ಬಿಐ ಅಧಿಕಾರಿಗಳ ಪಾತ್ರದ ಬಗ್ಗೆ ನ್ಯಾಯಾಲಯ ಮೇಲ್ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿ ಬಿಜೆಪಿ ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳಲು ಕಾರಣವಾಗುವ ವಿವಿಧ ಪಾಲುದಾರರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಆರ್‌ಬಿಐ ವಿಫಲವಾಗಿದೆ ಎಂದು ಸ್ವಾಮಿ ಆರೋಪಿಸಿದ್ದಾರೆ.
ಓದಿ: ದೇವರ ನಾಡಲ್ಲಿ ಜೆ.ಪಿ.ನಡ್ಡಾ... ಅನಂತಪದ್ಮನಾಭ ದೇಗುಲಕ್ಕೆ ಭೇಟಿ!
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯನ್ನು ಉಲ್ಲೇಖಿಸಿದ ಸ್ವಾಮಿ, ಕಿಂಗ್ ಫಿಶರ್, ನೀರವ್ ಮೋದಿ ಪ್ರಕರಣ, ಐಎಲ್ ಮತ್ತು ಎಫ್‌ಎಸ್ ಮುಂತಾದ ಹಲವು ಹಗರಣಗಳಲ್ಲಿ ಆರ್‌ಬಿಐ ಅಧಿಕಾರಿಗಳ ಹೆಸರು ಕೇಳಿ ಬಂದರೂ ಇರುವರೆಗೆ ಯಾರೊಬ್ಬರನ್ನೂ ವಿಚಾರಣೆಗೆ ಒಳಪಡಿಸಿಲ್ಲ ಎಂದು ದೂರಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ವಿವಿಧ ಬ್ಯಾಂಕ್ಗಳ ಹಗರಣಗಳು ವರದಿಯಾಗಿವೆ. ಅದರಲ್ಲಿ ಬ್ಯಾಂಕ್ ಅಧಿಕಾರಿಗಳ ಪಾತ್ರವನ್ನೂ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ ಯಾವೊಬ್ಬ ಆರ್‌ಬಿಐ ಅಧಿಕಾರಿಯನ್ನೂ ಕೂಡ ಇದುವರೆಗೆ ನ್ಯಾಯಾಂಗ ವಿಚಾರಣೆ ನಡೆಸಿಲ್ಲ. ಆರ್‌ಬಿಐ ಅಧಿಕಾರಿಗಳಿಂದ ಗಂಭೀರ ನಿಯಮ ಉಲ್ಲಂಘನೆ ನಡೆದಿದ್ದು, ನ್ಯಾಯಾಲಯ ಮೇಲ್ವಿಚಾರಣೆ ನಡೆಸಬೇಕು ಎಂದು ಸ್ವಾಮಿ ಮನವಿ ಮಾಡಿದ್ದಾರೆ.