ಮುಂಬೈ(ಮಹಾರಾಷ್ಟ್ರ): ಬೇಸಿಗೆಯಲ್ಲಿ ನೀರಿನ ಹಾಹಾಕಾರವನ್ನು ತಪ್ಪಿಸುವ ನಿಟ್ಟಿನಲ್ಲಿ ಸುಭಾಜಿತ್ ಮುಖರ್ಜಿ ಎನ್ನುವವರು ಮುಂಬೈನಲ್ಲಿ ವಿನೂತನ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇವರು ಮುಂಬೈನ ಹಲವಾರು ಶಾಲೆಗಳಲ್ಲಿ 'ಗ್ರೌಂಡ್ ವಾಟರ್ ಚಾರ್ಜರ್ಸ್' ಎಂಬ ಹೊಂಡಗಳನ್ನು ನಿರ್ಮಿಸಿ ಭೂಮಿಯಲ್ಲಿ ನೀರಿನ ಅಂಶವನ್ನು ಹೆಚ್ಚಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಮಕ್ಕಳಿಗೆ ಅರಿವು ಮೂಡಿಸುವ ಸಲುವಾಗಿ ವಿದ್ಯಾರ್ಥಿಗಳನ್ನು ಈ ಕೆಲಸದಲ್ಲಿ ಜೊತೆಗೂಡಿಸಿಕೊಂಡಿದ್ದಾರೆ. ಮಳೆಯ ನೀರು ವ್ಯರ್ಥವಾಗದೇ ಅದನ್ನು ಉಳಿಸುವ ನಿಟ್ಟಿನಲ್ಲಿ ಸುಮಾರು 50ಕ್ಕೂ ಹೆಚ್ಚು ಶಾಲೆಗಳಲ್ಲಿ ಈ ಕೆಲಸವನ್ನು ಮಾಡುವ ಗುರಿ ಹೊಂದಿದ್ದಾರೆ. ಜೊತೆಗೆ ಇದುವರೆಗೂ 33 ಶಾಲೆಗಳಲ್ಲಿ ಮಳೆ ನೀರನ್ನು ಶೇಖರಿಸುವ ಡ್ರಮ್ಗಳನ್ನು ಅಳವಡಿಸಿದ್ದಾರೆ.