ಹೈದರಾಬಾದ್: ಕೋವಿಡ್ 19 ಸೋಂಕು ಹೊಂದಿರುವ ರೋಗಿಗಳಿಗೆ, ಗುಣಮುಖರಾದ ರೋಗಿಗಳಿಂದ ಪಡೆದ ಕಾನ್ವಲ್ಸೆಂಟ್ ಪ್ಲಾಸ್ಮಾ ಅಳವಡಿಕೆ ಮಾಡಿದರೆ ರೋಗಿ ಗುಣಮುಖನಾಗುವ ಸಾಧ್ಯತೆ ಹೆಚ್ಚಳವಾಗುತ್ತದೆ ಎಂದು ನ್ಯೂಯಾರ್ಕ್ ಸಿಟಿ ಮೌಂಟ್ ಸಿನಾಯಿ ಆಸ್ಪತ್ರೆತಲ್ಲಿನ ಇಕಾನ್ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.
ಮೌಂಟ್ ಸಿನಾಯಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಮೇಲೆ ಈ ಅಧ್ಯಯನ ನಡೆಸಲಾಗಿದೆ. 39 ಕೋವಿಡ್ ರೋಗಿಗಳ ಹೋಲಿಕೆಯನ್ನು ಇದರಲ್ಲಿ ಮಾಡಲಾಗಿದೆ. 16 ದಿನಗಳ ಅವಧಿಯಲ್ಲಿ ಪ್ಲಾಸ್ಮಾ ಅಳವಡಿಕೆ ಮಾಡಿದ ರೋಗಿಗಳು ಮತ್ತು ಪ್ಲಾಸ್ಮಾ ಅಳವಡಿಕೆ ಮಾಡಿಲ್ಲದ ರೋಗಿಗಳ ಹೋಲಿಕೆ ಮಾಡಲಾಗಿದೆ. ಅಮೆರಿಕದಲ್ಲಿ ನ್ಯೂಯಾರ್ಕ್‌ಗೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ 19 ಬಾಧಿಇದೆ. ಹೀಗಾಗಿ ಮಾರ್ಚ್‌ನಲ್ಲಿ 16 ದಿನಗಳ ಅವಧಿಯಲ್ಲಿ ನಮ್ಮಲ್ಲಿ ವಿವಿಧ ರೀತಿಯ ಕೋವಿಡ್ 19 ರೋಗಿಗಳು ದಾಖಲಾಗಿದ್ದರು. ಇದರಿಂದಾಗಿ ನಾವು ಈ ಅಧ್ಯಯನವನ್ನು ನಡೆಸಿದೆವು ಎಂದು ಮೌಂಟ್ ಸಿನಾಯಿಯಲ್ಲಿನ ಇಕಾನ್ ಸ್ಕೂಲ್ ಆಫ್ ಮೆಡಿಸಿನ್‌ನ ಮೆಡಿಸಿನ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಮತ್ತು ಎಂಡಿ ಹಾಗೂ ಅಧ್ಯಯನದ ಲೇಖಕ ನಿಕೊಲೆ ಬೊವಿಯರ್ ಹೇಳಿದ್ದಾರೆ.
ಕಾನ್ವಲ್ಸೆಂಟ್ ಪ್ಲಾಸ್ಮಾ ಒಂದು ಪರಿಣಾಮಕಾರಿ ಚಿಕಿತ್ಸೆಯಾಗಬಲ್ಲದು ಎಂಬ ಸಾಕ್ಷಿಯನ್ನು ನಮ್ಮ ಆರಂಭಿಕ ವಿಶ್ಲೇಷಣೆ ನಮಗೆ ನೀಡಿದೆ. ಆದರೆ ಈ ಫಲಿತಾಂಶವನ್ನು ದೃಢೀಕರಿಸಲು ಇನ್ನಷ್ಟು ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ. ಅಲ್ಲದೆ, ಇದು ವಿವಿಧ ಹಿನ್ನೆಲೆಯ ಜನರಲ್ಲಿ ಪರಿಣಾಮಕಾರಿ ಎಂಬುದಾಗಿಯೂ ಸಾಬೀತಾಗಬೇಕಿದೆ ಎಂದು ಅವರು ಹೇಳಿದ್ದಾರೆ. ಈ ಅಧ್ಯಯನದಲ್ಲಿ, ಪ್ಲಾಸ್ಮಾ ಪಡೆದವರು ಮತ್ತು ನಿಯಂತ್ರಿತ ರೋಗಿಗಳನ್ನು ಮೊದಲ ದಿನದಿಂದಲೇ ಎಲ್ಲ ವಿಷಯದಲ್ಲೂ ಹೋಲಿಕೆ ಮಾಡಲಾಗಿತ್ತು. ಅಲ್ಲದೆ, ಇತರ ಭೌಗೋಳಿಕ ಮತ್ತು ಇತರ ರೋಗ ಲಕ್ಷಣಗಳನ್ನೂ ಪರಿಗಣಿಸಲಾಗಿತ್ತು.
ಈ ಪೈಕಿ ಶೇ. 69.2 ರಷ್ಟು ರೋಗಿಗಳು ಅಧಿಕ ಪ್ರಮಾಣದ ಆಮ್ಲಜನಕವನ್ನು ಪಡೆಯುತ್ತಿದದ್ದರು ಮತ್ತು 10.3 ಶೇ. ರೋಗಿಗಳು ಯಾಂತ್ರಿಕ ವೆಂಟಿಲೇಶನ್ ಬಳಸುತ್ತಿದ್ದರು. 14 ನೇ ದಿನದ ಹೊತ್ತಿಗೆ, ಚಿಕಿತ್ಸಾತ್ಮಕ ಸ್ಥಿತಿಯು ಶೇ. 18 ರಷ್ಟು ಪ್ಲಾಸ್ಮಾ ರೋಗಿಗಳಲ್ಲಿ ಮತ್ತು ಶೇ. 24.3 ರಷ್ಟು ನಿಯಂತ್ರಿತ ರೋಗಿಗಳಲ್ಲಿ ತೀವ್ರಗೊಂಡಿತ್ತು. ದಿನ ಒಂದು ಮತ್ತು ಏಳರ ಮಧ್ಯೆ, ಪ್ಲಾಸ್ಮಾ ಪಡೆದ ಗುಂಪಿಗೆ ಆಮ್ಲಜನಕ ಬೇಕು ಎಂಬುದರ ತೀವ್ರತೆ ಕಡಿಮೆಯಾಗಿದೆ. ಆದರೆ, ಇದು ಸಂಖ್ಯಾತ್ಮಕವಾಗಿ ಅಷ್ಟೇನೂ ಗಮನಾರ್ಹವಾದುದಲ್ಲ. ಮೇ 1 ರ ವೇಳೆಗೆ, ಪ್ಲಾಸ್ಮಾ ಸ್ವೀಕರಿಸಿದ ಶೇ. 12.8ರಷ್ಟು ಮತ್ತು 1:4 ರಷ್ಟು ಹೋಲಿಕೆ ಹೊಂದಿರುವ ನಿಯಂತ್ರಿತ ಶೇ. 24.4 ರಷ್ಟು ರೋಗಿಗಳು ಸಾವನ್ನಪ್ಪಿದ್ದಾರೆ. ಪ್ಲಾಸ್ಮಾ ಪಡೆದ ಶೇ. 71.8 ಮತ್ತು ನಿಯಂತ್ರಿತ ಶೇ. 66.7 ರಷ್ಟು ರೋಗಿಗಳು ಬಿಡುಗಡೆಗೊಂಡಿದ್ದಾರೆ.
ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ (ಎಫ್‌ಡಿಎ) ಏಕ ರೋಗಿ ತುರ್ತು ತನಿಖಾತ್ಮಕ ನವ ಔಷಧ ಪ್ರಕ್ರಿಯೆಯ ಅಡಿಯಲ್ಲಿ ರೂಪಿಸಿದ ಮಾನದಂಡಕ್ಕೆ ಅನುಗುಣವಾಗಿ ಕೋವಿಡ್ 19 ಕಾನ್ವಲ್ಸೆಂಟ್ ಪ್ಲಾಸ್ಮಾ ಅಳವಡಿಕೆಗೆ ಅರ್ಹ ರೋಗಿಗಳನ್ನು ಗುರುತಿಸಲಾಗುತ್ತದೆ. ಕೋವಿಡ್ ಹೊಂದಿರುವ ರೋಗಿಗಳಿಂದ ಪಡೆದ ಕಾನ್ವಲ್ಸೆಂಟ್ ಪ್ಲಾಸ್ಮಾವನ್ನು ಪ್ಲಾಸ್ಮಾ ಪಡೆದ ರೋಗಿಗಳಿಗೆ ಅಳವಡಿಸಲಾಗುತ್ತದೆ. ಎಲ್ಲ ರೋಗಿಗಳಿಗೆ ಎರಡು ಯೂನಿಟ್ ಕಾನ್ವಲ್ಸೆಂಟ್ ಪ್ಲಾಸ್ಮಾ ಅಳವಡಿಸಲಾಗುತ್ತದೆ. ಇದಕ್ಕೂ ಮುನ್ನ, ರಕ್ತದ ಮಾದರಿ ಹೊಂದುತ್ತದೆಯೇ ಎಂದೂ ಕಂಡುಕೊಳ್ಳಲಾಗುತ್ತದೆ. ಪ್ರಮುಖವಾಗಿ, ಆಸ್ಪತ್ರೆಯ ಎಲೆಕ್ಟ್ರಾನಿಕ್ ದಾಖಲೆಯ ಆಧಾರದಲ್ಲಿ ಹೊಂದಿಕೆಯಾಗುವ ರೋಗಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಹೋಲಿಎಕ ವಿಧಾನವನ್ನು ಮೌಂಟ್ ಸಿನಾಯಿ ಬಯೋಸ್ಟಾಟಿಸ್ಟಿಶಿಯನ್ಸ್ ವಿನ್ಯಾಸ ಮಾಡಿದ್ದಾರೆ. ಇದು ಮೂರು ಅಂಶಗಳಲ್ಲಿ ರೋಗಿ ಮಾಹಿತಿಯನ್ನು ಹೋಲಿಕೆ ಮಾಡುತ್ತದೆ.
ಮೂಲ ಜನಸಂಖ್ಯಾ ಮಾಹಿತಿ ಮತ್ತು ಇತರ ರೋಗ ಲಕ್ಷಣಗಳು, ವಯಸ್ಸು, ಲಿಂಗ, ಧೂಮಪಾನ ಸ್ಥಿತಿಗತಿ, ಬೊಜ್ಜು, ಡಯಾಬಿಟೀಸ್, ಸಿಒಪಿಡಿ ಅಥವಾ ನಿದ್ರೆ ಅಭಾವಮತ್ತು ಡಿ ಡಿಮ್ಮರ್ ಮತ್ತು ಸಿ ರಿಯಾಕ್ಟಿವ್ ಪ್ರೊಟೀನ್ ಇತ್ಯಾದಿ ಹಾಗೂ ಅಳವಡಿಕೆ ದಿನಾಂಕದ ದಿನ, ಹೆಚ್ಚುವರಿ ಆಮ್ಲಜನಕ ಅಗತ್ಯ, ಆಸ್ಪತ್ರೆ ವಾಸದ ಅವಧಿ, ಕನಿಷ್ಠ ಆಮ್ಲಜನಕ ಸ್ಯಾಚುರೇಶನ್, ಹೃದಯ ಬಡಿತದ ದರ, ಉಸಿರಾಟದ ದರ ಮತ್ತು ಸಿಸ್ಟಾಲಿಕ್ ಮತ್ತು ಡಯಾಸ್ಟಾಲಿಕ್ ಬಿಪಿ ಮತ್ತು ಅಳವಡಿಕೆ ದಿನದ ವರೆಗೆ ಟೈಮ್ ಸಿರೀಸ್ ಡೇಟಾ, ಹೈಡ್ರೋಕ್ಸಿಕ್ಲೋರೋಖಿನ್ ಅಥವಾ ಅಜಿಥ್ರೋಮೈಸಿನ್ ಸೇರಿದಂತೆ, ಇನ್‌ಟ್ಯುಬೇಶನ್ ಸ್ಟೇಟಸ್ ಮತ್ತು ಇನ್‌ಟ್ಯುಬೇಟ್ ಮಾಡಿದ್ದರೆ, ಇನ್‌ಟ್ಯುಬೇಶನ್ ಅವಧಿಯನ್ನು ಇದರಲ್ಲಿ ಪರಿಗಣಿಸಲಾಗುತ್ತದೆ.
ನಿಯಂತ್ರಿತ ರೋಗಿಗಳಿಗೆ ಅಳವಡಿಕೆ ದಿನವನ್ನು, ಸ್ವೀಕರಿಸುವವರು ಅಳವಡಿಕೆ ಮಾಡಿಕೊಂಡ ವಾಸದ ಅವಧಿಯನ್ನು ಆಧರಿಸಿ ವ್ಯಾಖ್ಯಾನಿಸಲಾಗುತ್ತದೆ. ಕಾನ್ವಲ್ಸೆಂಟ್ ಪ್ಲಾಸ್ಮಾ ಅಳವಡಿಕೆ ಅಥವಾ ಆಮ್ಲಜನಕ ನೀಡುವಿಕೆ ಮತ್ತು ಚೇತರಿಸಿಕೊಳ್ಳುವಿಕೆಯಲ್ಲಿನ ಸುಧಾರಣೆಯನ್ನು ಆಧರಿಸಿ, ಇದೇ ಅವಧಿಯಲ್ಲಿ ಮೌಂಟ್ ಸಿನಾಯಿ ಆಸ್ಪತ್ರೆಯ ಕೋವಿಡ್ 19 ದೃಢೀಕೃತ ರೋಗಿಗಳ ಪಟ್ಟಿಯನ್ನು ಬಳಸಿ ಹೋಲಿಕೆಯಾಗುವ ಅಂಶಗಳ ವಿಶ್ಲೇಷಣೆಯನ್ನು ಅಧ್ಯಯನ ತಂಡ ನಡೆಸಿದೆ. 2020 ಮಾರ್ಚ್ 24 ರಿಂದ ಏಪ್ರಿಲ್ 8ರ ವರೆಗಿನ ರೋಗಿಗಳ ಮೇಲೆ ಈ ಅಧ್ಯಯನ ನಡೆದಿದೆ.