ETV Bharat / bharat

ಇದು ನಾಯಕಿಯಾಗಿದ್ದ 'ನಗು' ಎಂಬಾಕೆ ಭಿಕ್ಷಾಟನೆಗಿಳಿದ ಅಳುವಿನ ಕಥೆ

ಇದು ನಗುವಿನ ರಾಣಿ ಹನ್ಸಿ ಪ್ರಹರಿ ಎಂಬ ಒಂದು ಕಾಲದ ಹೆಮ್ಮೆಯ ಮಹಿಳೆಯ ನೋವಿನ ಕಥೆ. ಸರಣಿ ಸಾಧನೆಗಳನ್ನು ಮಾಡಿ ಗುರುತಿಸಿಕೊಂಡಿದ್ದಾಕೆ ಭಿಕ್ಷಾ ಪಾತ್ರೆ ಹಿಡಿದು ಹರಿದ್ವಾರದ ರೈಲ್ವೆ ನಿಲ್ದಾಣ, ಬಸ್ ಸ್ಟಾಂಡ್​ ಮತ್ತು ಗಂಗಾ ತೀರದ ರಸ್ತೆಗಳಲ್ಲಿ ಭಿಕ್ಷೆ ಕೇಳುತ್ತಿದ್ದಾಳೆ ಎಂದರೆ ನಿಜಕ್ಕೂ ಮನ ಕಲಕುತ್ತದೆ.

Student of kumaun university begging on the streets of haridwar
ಇದು ನಾಯಕಿಯಾಗಿದ್ದ 'ನಗು' ಎಂಬಾಕೆ ಭಿಕ್ಷಾಟನೆಗಿಳಿದ ಅಳುವಿನ ಕಥೆ,,,
author img

By

Published : Oct 19, 2020, 11:09 AM IST

ಹರಿದ್ವಾರ: ಇದು ನಗುವಿನ ರಾಣಿ ಹನ್ಸಿ ಪ್ರಹರಿ ಎಂಬಾಕೆಯ ನೋವಿನ ಕಥೆ. ಸರಣಿ ಸಾಧನೆಗಳನ್ನು ಮಾಡಿ ಗುರುತಿಸಿಕೊಂಡಿದ್ದಾಕೆ ಭಿಕ್ಷಾ ಪಾತ್ರೆ ಹಿಡಿದು ಹರಿದ್ವಾರದ ರೈಲ್ವೆ ನಿಲ್ದಾಣ, ಬಸ್ ಸ್ಟಾಂಡ್​ ಮತ್ತು ಗಂಗಾ ತೀರದ ರಸ್ತೆಗಳಲ್ಲಿ ತತ್ತು ಅನ್ನಕ್ಕಾಗಿ ಪರದಾಡುತ್ತಿರುವ ಮನಕಲಕುವ ಕಥೆ.

ಹನ್ಸಿ(ಕನ್ನಡದಲ್ಲಿ ನಗು ಎಂದರ್ಥ), ಈಕೆ ಒಂದು ಕಾಲದಲ್ಲಿ ಕುಮಾವೂನ್ ವಿಶ್ವವಿದ್ಯಾಲಯದ ಹೆಮ್ಮೆಯಾಗಿದ್ದಾಕೆ. ಈ ಪ್ರತಿಷ್ಠಿತ ವಿದ್ಯಾಲಯದ ವಿದ್ಯಾರ್ಥಿ ಯೂನಿಯನ್​​ನ ಉಪಾಧ್ಯಕ್ಷೆಯಾಗಿದ್ದವಳು. ಒಂದಲ್ಲ ಎರಡು ಬಾರಿ ಇಂಗ್ಲಿಷ್ ಮತ್ತು ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದು ನಂತರ ಅದೇ ವಿಶ್ವವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸಿದವರು.

ರಾಂಖಿಲಾ ಎಂಬ ಗ್ರಾಮವು ಉತ್ತರಾಖಂಡ್​ನ ಅಲ್ಮೋರಾ ಜಿಲ್ಲೆಯ ಸೋಮೇಶ್ವರ ವಿಧಾನಸಭಾ ಕ್ಷೇತ್ರದ ಹವಾಲ್ಬಾಗ್ ಅಭಿವೃದ್ಧಿ ಬ್ಲಾಕ್ ಅಡಿಯಲ್ಲಿ ಬರುವ ಗೋವಿಂದಪುರದ ಬಳಿ ಬರುತ್ತದೆ. ಈ ಹಳ್ಳಿಯಲ್ಲಿ ಬೆಳೆದ ಹನ್ಸಿ 5 ಮಕ್ಕಳ ಪೈಕಿ ಹಿರಿಯ ಮಗಳು. ಹನ್ಸಿ ಇಡೀ ಹಳ್ಳಿಯಲ್ಲಿ ತನ್ನ ಅಧ್ಯಯನದ ಬಗ್ಗೆ ಚರ್ಚಿಸುತ್ತಿದ್ದಳು. ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಆಕೆಯ ತಂದೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಗಲು ರಾತ್ರಿ ದುಡಿಯುತ್ತಿದ್ದರು.

ಹನ್ಸಿ ಗ್ರಾಮದ ಒಂದು ಸಣ್ಣ ಶಾಲೆಯಿಂದ ಉತ್ತೀರ್ಣಳಾಗಿ ಪ್ರವೇಶಕ್ಕಾಗಿ ಕುಮಾವೂನ್ ವಿಶ್ವವಿದ್ಯಾಲಯವನ್ನು ತಲುಪಿದಳು. ಪ್ರವೇಶ ಪರೀಕ್ಷೆಯಲ್ಲಿಯೂ ಉತ್ತೀರ್ಣಳಾಗಿ ಆಕೆ ವಿಶ್ವವಿದ್ಯಾಲಯ ಸೇರಿದಳು. ಹನ್ಸಿ ಅಧ್ಯಯನ ಮತ್ತು ಇತರ ಚಟುವಟಿಕೆಗಳಲ್ಲಿ ತುಂಬಾ ವೇಗವಾಗಿದ್ದಳು. ಆಕೆ 1998-99 ಮತ್ತು 2000 ವರ್ಷಗಳಲ್ಲಿ ಕುಮಾವೂನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷಳಾಗಿ ಆಯ್ಕೆಯಾಗಿದ್ದಳು. ಇದರೊಂದಿಗೆ, ಕುಮಾವೂನ್ ವಿಶ್ವವಿದ್ಯಾಲಯದಿಂದ ಎರಡು ಬಾರಿ ಇಂಗ್ಲಿಷ್ ಮತ್ತು ರಾಜಕೀಯ ವಿಜ್ಞಾನದಲ್ಲಿ ಎಂಎ ಉತ್ತೀರ್ಣಳಾಗಿ ಆನಂತರ ಅದೇ ಕುಮಾವೂನ್ ವಿಶ್ವವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿ ಸುಮಾರು 4 ವರ್ಷಗಳ ಕಾಲ ಕೆಲಸ ಮಾಡಿದರು. ಇದರ ನಂತರ 2008ರವರೆಗೆ ಅನೇಕ ಖಾಸಗಿ ಉದ್ಯೋಗಗಳನ್ನು ಸಹ ಮಾಡಿದರು.

ಈಟಿವಿ ಭಾರತದೊಂಧಿಗೆ ಹನ್ಸಿ ಹಂಚಿಕೊಂಡರು ತನ್ನ ಜೀವನದ ಕಹಿ ಕಹಾನಿ:

ಆದರೆ, ಅವರ ಜೀವನದಲ್ಲಿ ಬಿರುಗಾಳಿ ಬೀರಿದ್ದು 2011ರ ನಂತರ. ಮದುವೆಯ ನಂತರ ವೈವಾಹಿಕ ಜೀವನದಲ್ಲಿ ಉಂಟಾದ ಪ್ರಕ್ಷುಬ್ಧತೆಯಿಂದಾಗಿ ಹನ್ಸಿ ಸ್ವಲ್ಪ ಸಮಯದವರೆಗೆ ಖಿನ್ನತೆ ಅನುಭವಿಸಿದರು. ಆನಂತರ ಕುಟುಂಬದಿಂದ ಹೊರ ಬಂದು ಹರಿದ್ವಾರ ತಲುಪಿದರು. ಅಂದಿನಿಂದ, ಅವರ ದೈಹಿಕ, ಮಾನಸಿಕ ಸ್ಥಿತಿಯು ಸಹ ಕುಗ್ಗಲಾರಂಭಿಸಿತು. ಹೀಗಾಗಿ ಎಲ್ಲಿಯೂ ಕೆಲಸ ಗಿಟ್ಟಿಸಿಕೊಳ್ಳಲಾದ ಆಕೆ ತನ್ನ ಮಕ್ಕಳಿಗಾಗಿ, ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡಬೇಕಾಯಿತು. ಆದರೆ, ಸರಿಯಾದ ಚಿಕಿತ್ಸೆ ಸಿಕ್ಕರೆ ಇಂದಿಗೂ ಕೆಲಸ ಮಾಡಲು ಸಿದ್ಧ ಎನ್ನುತ್ತಾರೆ ಹನ್ಸಿ.

ಅಷ್ಟೇ ಅಲ್ಲ, ಸಹಾಯ ಕೋರಿ ಅವರು ಸ್ವತಃ ಹಲವಾರು ಬಾರಿ ಮುಖ್ಯಮಂತ್ರಿಗಳಿಗೆ ಪತ್ರಗಳನ್ನು ಬರೆದಿದ್ದಾರೆ. ಸಚಿವಾಲಯಗಳಿಗೆ ಹೋಗಿ ಹಲವು ಬಾರಿ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದಾರೆ. ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದ ದಾಖಲೆಗಳು ಸನ್ಸಿಯ ಬಳಿ ಅಸ್ತಿತ್ವದಲ್ಲಿವೆಯಂತೆ. ಸರ್ಕಾರ ಅವರ ನೆರವಿಗೆ ಬಂದರೆ ಅವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬಹುದು. ಅಧಿಕಾರಿಯಾಗಲು ಬಯಸುವ ಮಗನ ಕನಸನ್ನು ನನಸು ಮಾಡಬಹುದು ಎಂದು ಅವರು ಹೇಳಿಕೊಂಡಿದ್ದಾರೆ.

ಈ ಸುದ್ದಿಯ ಮೂಲಕ ಈಟಿವಿ ಭಾರತವು ವಿದ್ಯಾವಂತೆಯೊಬ್ಬಳ ಭರವಸೆಯ ಜೀವನ ಬೀದಿಯಲ್ಲಿ ಭಿಕ್ಷೆ ಎತ್ತುವಂತಾಗಿದ್ದು, ಆಕೆಗೆ ಸರ್ಕಾರ ನೆರವಾಗಬೇಕೆಂಬುದನ್ನು ತಿಳಿಸಲು ಇಚ್ಛಿಸುತ್ತದೆ. ಸರ್ಕಾರದ ನೆರವು ಸಿಕ್ಕರೆ ಹನ್ಸಿ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಉತ್ತಮ ಜೀವನವನ್ನು ನೀಡಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.