ETV Bharat / bharat

ಡೇಟಾ ಕಳ್ಳತನ, ಹ್ಯಾಕಿಂಗ್ ತಡೆಗಟ್ಟಲು ಆ್ಯಪ್ ಅಭಿವೃದ್ಧಿಪಡಿಸಿದ ವಿದ್ಯಾರ್ಥಿನಿ - ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​​

ಬ್ಲ್ಯಾಕ್ ಚೈನ್ ತಂತ್ರಜ್ಞಾನವನ್ನು ಬಳಸಿಕೊಂಡು ಹ್ಯಾಕಿಂಗ್ ತಡೆಗಟ್ಟುವ ಕುರಿತು ಪ್ರೆಸೆಂಟೇಶನ್ ನೀಡುವ ಮೂಲಕ ವೈಷ್ಣವಿ ತನ್ನ ಹೆಸರನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​​ನಲ್ಲಿ ಸೇರಿಸಿದ್ದಾಳೆ. ಜೊತೆಗೆ ಡೇಟಾ ಕಳ್ಳತನವನ್ನು ತಡೆಗಟ್ಟಲು ವೈಷ್ಣವಿ ಅವರು ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದು, ಅದಕ್ಕೆ "ಕಾಯಿನ್" ಎಂದು ಹೆಸರಿಸಿದ್ದಾರೆ.

student-develops-app-to-check-data-theft

author img

By

Published : Dec 24, 2020, 5:24 PM IST

ಹೈದರಾಬಾದ್ (ತೆಲಂಗಾಣ): ಈಗಿನ ಡಿಜಿಟಲ್ ಯುಗದಲ್ಲಿ ಡೇಟಾ ಕಳ್ಳತನವನ್ನು ತಡೆಯುವುದು ಅತಿದೊಡ್ಡ ಸವಾಲಾಗಿದೆ. ಹ್ಯಾಕಿಂಗ್ ಸಮಸ್ಯೆಯನ್ನು ನಿವಾರಿಸಲು ಹಲವಾರು ದೊಡ್ಡ ಕಂಪನಿಗಳು ಫೈರ್​ವಾಲ್ಸ್ ಸ್ಥಾಪಿಸುವ ಮೂಲಕ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿವೆ.

ಹ್ಯಾಕಿಂಗ್ ತಡೆಗಟ್ಟಲು ವಿಜಯವಾಡ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿನಿ ವೈಷ್ಣವಿ, ಸೈಬರ್ ಭದ್ರತೆಯಲ್ಲಿ ತನ್ನ ಶಕ್ತಿ ಮತ್ತು ಸಾಮರ್ಥ್ಯವನ್ನು ತೋರಲು ನಿರ್ಧರಿಸಿದ್ದಾಳೆ.

ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಬ್ಲ್ಯಾಕ್ ಚೈನ್ ತಂತ್ರಜ್ಞಾನವನ್ನು ಬಳಸಿಕೊಂಡು ಹ್ಯಾಕಿಂಗ್ ತಡೆಗಟ್ಟುವ ಕುರಿತು ಪ್ರೆಸೆಂಟೇಶನ್ ನೀಡುವ ಮೂಲಕ ವೈಷ್ಣವಿ ತನ್ನ ಹೆಸರನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​​ನಲ್ಲಿ ಸೇರಿಸಿದ್ದಾಳೆ.

ಸಾಮಾಜಿಕ ಮಾಧ್ಯಮವು ಡಿಜಿಟಲ್ ಯುಗದ ಜನರ ದೈನಂದಿನ ಜೀವನದ ಭಾಗವಾಗಿದ್ದು, ಟ್ವಿಟರ್, ವಾಟ್ಸಾಪ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಡೇಟಾ ಕಳ್ಳತನ ಮತ್ತು ಹ್ಯಾಕಿಂಗ್​ ಅಪಾಯ ಇದ್ದೇ ಇದೆ.

ಈ ಡೇಟಾ ಕಳ್ಳತನ ಮತ್ತು ಹ್ಯಾಕಿಂಗ್ ತಡೆಗಟ್ಟಲು ವೈಷ್ಣವಿ ಆಳವಾದ ಅಧ್ಯಯನ ಮತ್ತು ಸಂಶೋಧನೆ ನಡೆಸಿ ನಂತರ ಗಿನ್ನಿಸ್ ಪುಸ್ತಕದಲ್ಲಿ ದಾಖಲೆ ಗಳಿಸಿದ್ದಾಳೆ.

ವಿಶ್ವ ಮೆಚ್ಚುಗೆ ಪಡೆದ ಸಂಶೋಧನೆ:

ಎಸ್‌ಆರ್‌ಎಂ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ವೈಷ್ಣವಿ, ಸೈಬರ್ ಸುರಕ್ಷತೆಯ ಬಗ್ಗೆ ಗಮನಹರಿಸಿ ಅದಕ್ಕೆ ಸಂಬಂಧಿತ ಅಂಶಗಳಲ್ಲಿ ಸಂಶೋಧನೆ ನಡೆಸಿದಳು.

ಎಂಜಿನಿಯರಿಂಗ್​ನ ಎರಡನೇ ವರ್ಷದಲ್ಲಿ ಬೆಂಗಳೂರಿನಲ್ಲಿ ನಡೆದ ಹ್ಯಾಕಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ, ಎರಡನೇ ಸ್ಥಾನ ಪಡೆದಿದ್ದಳು. ಇಂಟರ್ನ್‌ಶಿಪ್‌ಗಾಗಿ ಯುಎಸ್‌ಗೆ ತೆರಳಿ ಡೆನ್ವರ್‌ನಲ್ಲಿ ನಡೆದ ಹ್ಯಾಕಥಾನ್ ಸ್ಪರ್ಧೆಯಲ್ಲಿ ಕೂಡಾ ಎರಡನೇ ಸ್ಥಾನ ಗಳಿಸಿದ್ದಳು.

ಅವರು ಬ್ಲ್ಯಾಕ್ ಚೈನ್ ತಂತ್ರಜ್ಞಾನದ ಮೇಲೆ ಕೇಂದ್ರೀಕರಿಸಿದ ವೈಷ್ಣವಿ, ನಾಲ್ಕು ತಿಂಗಳ ಆಳವಾದ ಅಧ್ಯಯನ ನಡೆಸಿ, ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸಾಪ್​ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಈ ತಂತ್ರಜ್ಞಾನದ ಮೂಲಕ ಭದ್ರತೆಯನ್ನು ಹೆಚ್ಚಿಸಲು ನಿರ್ಧರಿಸಿದಳು.

ಅಕ್ಟೋಬರ್ 30ರಂದು ಸಿಂಗಾಪುರದಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪೇಪರ್ ಪ್ರೆಸೆಂಟೇಶನ್ ನೀಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಗಳಿಸಿದಳು.

ಡೇಟಾ ಕಳ್ಳತನ ತಡೆಗಟ್ಟಲು ಅಪ್ಲಿಕೇಶನ್:

ಡೇಟಾ ಕಳ್ಳತನವನ್ನು ತಡೆಗಟ್ಟಲು ವೈಷ್ಣವಿ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದು, ಅದಕ್ಕೆ "ಕಾಯಿನ್" ಎಂದು ಹೆಸರಿರಿಸಿದ್ದಾರೆ.

ಇಂಟರ್ನೆಟ್ ಬಳಕೆದಾರರು ತಮ್ಮ ಫೇಸ್‌ಬುಕ್ ಮತ್ತು ಟ್ವಿಟರ್‌ನ ಖಾತೆಗಳಿಂದ ಫೋಟೋಗಳನ್ನು ಅಳಿಸಿದರೂ, ಸರ್ವರ್‌ಗಳಲ್ಲಿ ಲಭ್ಯವಿರುವುದರಿಂದ ಅವುಗಳನ್ನು ಹ್ಯಾಕರ್‌ಗಳು ಹ್ಯಾಕ್ ಮಾಡಬಹುದಾಗಿದೆ. ಆದರೆ ತನ್ನ ಅಪ್ಲಿಕೇಶನ್ "ಕಾಯಿನ್" ಅನ್ನು ಮೊಬೈಲ್​ನಲ್ಲಿ ಇನಸ್ಟಾಲ್ ಮಾಡುವ ಮೂಲಕ ಈ ಡೇಟಾ ಕಳ್ಳತನವನ್ನು ತಡೆಯಬಹುದು ಎಂದು ವೈಷ್ಣವಿ ಹೇಳಿದ್ದಾಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.