ETV Bharat / bharat

ಮಾಲ್ಡೀವ್ಸ್‌ನಲ್ಲಿದ್ದ 700 ಭಾರತೀಯರು ನಾಳೆ ಭಾರತಕ್ಕೆ ಆಗಮನ - ಮಾಲ್ಡೀವ್ಸ್‌ನಲ್ಲಿದ್ದ 700 ಭಾರತೀಯರು

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ನೌಕಾಪಡೆಯ ‘ಆಪರೇಷನ್ ಸಮುದ್ರ ಸೇತು’ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಐಎನ್‌ಎಸ್ ಜಲಶ್ವಾ, 698 ಭಾರತೀಯ ಪ್ರಜೆಗಳೊಂದಿಗೆ ನಾಳೆ ಕೊಚ್ಚಿಗೆ ಬರಲಿದೆ.

operation-samudra-setu-700-stranded-indians-from-maldives-to-arrive-tomorrow
ಆಪರೇಷನ್ ಸಮುದ್ರ ಸೇತು: ಮಾಲ್ಡೀವ್ಸ್‌ನಲ್ಲಿದ್ದ 700 ಭಾರತೀಯರು ನಾಳೆ ಭಾರತಕ್ಕೆ ಆಗಮನ
author img

By

Published : May 9, 2020, 8:07 PM IST

ಕೊಚ್ಚಿ: ಮಾಲ್ಡೀವ್ಸ್‌ನಲ್ಲಿ ಸಿಲುಕಿರುವ ಭಾರತೀಯರೊಂದಿಗೆ ನಾಳೆ ನೌಕಾ ಹಡಗು ಭಾರತಕ್ಕೆ ಆಗಮಿಸಲಿದೆ. ಉನ್ನತ ಪೊಲೀಸ್ ಅಧಿಕಾರಿಯೊಬ್ಬರು 400 ಕ್ಕೂ ಹೆಚ್ಚು ಕೇರಳಿಗರು ಸೇರಿದಂತೆ ದೇಶದ ಇತರ ಭಾಗಗಳ ಜನರು ಸುರಕ್ಷಿತವಾಗಿರಲು ಎಲ್ಲಾ ವ್ಯವಸ್ಥೆಗಳು ಜಾರಿಯಲ್ಲಿವೆ ಎಂದು ತಿಳಿಸಿದ್ದಾರೆ.

ಆಪರೇಷನ್ ಸಮುದ್ರ ಸೇತು: ಮಾಲ್ಡೀವ್ಸ್‌ನಲ್ಲಿದ್ದ 700 ಭಾರತೀಯರು ನಾಳೆ ಭಾರತಕ್ಕೆ ಆಗಮನ

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ನೌಕಾಪಡೆಯ ‘ಆಪರೇಷನ್ ಸಮುದ್ರ ಸೇತು’ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಐಎನ್‌ಎಸ್ ಜಲಶ್ವಾ, 698 ಭಾರತೀಯ ಪ್ರಜೆಗಳೊಂದಿಗೆ ನಾಳೆ ಕೊಚ್ಚಿಗೆ ಬರಲಿದೆ. ಇದು ಭಾನುವಾರ ಇಲ್ಲಿಗೆ ತಲುಪುವ ನಿರೀಕ್ಷೆಯಿದೆ. ಲಾಕ್‌ಡೌನ್ ಸಮಯದಲ್ಲಿ ಭಾರತೀಯ ನೌಕಾಪಡೆಯ ಮೊದಲ ಬೃಹತ್ ಸ್ಥಳಾಂತರ ಇದಾಗಿದೆ.

ಇದರಲ್ಲಿ 431 ಜನರು ಕೇರಳ ಮೂಲದವರು ಎಂದು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ್ ಸಖಾರೆ ತಿಳಿಸಿದ್ದಾರೆ. ಉಳಿದ ಪ್ರಯಾಣಿಕರು ತಮಿಳುನಾಡು (132 ಜನರು) ಸೇರಿದಂತೆ ಗೋವಾ, ಹರಿಯಾಣ, ಅರುಣಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ, ಲಕ್ಷದ್ವೀಪ ರಾಜ್ಯಗಳ ಕೆಲವು ಜನರು ಸಹ ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಇವರೆಲ್ಲರನ್ನು 14 ದಿನಗಳ ಕಾಲ ಕ್ವಾರಂಟೈನ್‍ಗೆ ಕಳುಹಿಸಲಾಗುವುದು ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತರೂ ಆಗಿರುವ ಸಖಾರೆ ಹೇಳಿದ್ದಾರೆ.

"ಇತರ ರಾಜ್ಯಗಳ ಜನರು, ಎರ್ನಾಕುಲಂನ ಕ್ಯಾರೆಂಟೈನ್ ಸೌಲಭ್ಯಗಳಲ್ಲಿ 14 ದಿನಗಳ ಕಾಲ ಇರುತ್ತಾರೆ" ಎಂದು ಕಾರ್ಯಾಚರಣೆಯ ಉಸ್ತುವಾರಿ ಸಖಾರೆ ಹೇಳಿದರು. ಇತರ ರಾಜ್ಯಗಳಿಗೆ ಜನರನ್ನು ಕಳುಹಿಸುವ ಬಗ್ಗೆ, ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆಯ ನಂತರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ರೋಗ ಲಕ್ಷಣದ ಜನರ ಸುರಕ್ಷಿತ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಉನ್ನತ ಅಧಿಕಾರಿ, ಅಂತಹ ಪ್ರಯಾಣಿಕರನ್ನು ಮೊದಲು ಬೇರ್ಪಡಿಸಿ ಕೆಳಗಿಳಿಸಲಾಗುವುದು. ನಂತರ 50 ಪ್ರಯಾಣಿಕರ ಬ್ಯಾಚ್‌ಗಳಲ್ಲಿ ಇತರ ಪ್ರಯಾಣಿಕರು (ಜಿಲ್ಲಾವಾರು) ಇರುತ್ತಾರೆ. "ನಾವು ಮೊದಲೇ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಮಾಡುತ್ತೇವೆ. ನಂತರ ತಪಾಸಣೆಗಾಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ. ಅವರನ್ನು ಪ್ರತ್ಯೇಕಿಸಬೇಕೇ ಅಥವಾ ಕ್ವಾರಂಟೈನ್‍ಗೆ ಕಳುಹಿಸುವ ಬಗ್ಗೆ ಆಸ್ಪತ್ರೆ ನಿರ್ಧರಿಸುತ್ತದೆ "ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.