ಮೀರತ್(ಯುಪಿ): ಉತ್ತರಪ್ರದೇಶದ ಮೀರತ್ನಲ್ಲಿ ಅಮಾನವೀಯ ಘಟನೆವೊಂದು ನಡೆದಿದ್ದು, ವರಸೆಯಲ್ಲಿ ಸಹೋದರಿಯಾಗಬೇಕಾದ ಯುವತಿ ಮೇಲೆ ಕಳೆದ ಕೆಲ ವರ್ಷಗಳಿಂದ ಯುವಕನೊಬ್ಬ ನಿರಂತರವಾಗಿ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.
ಮೀರತ್ನ ಬ್ರಹ್ಮಪುರಿ ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, ಚಿಕ್ಕಪ್ಪನ ಮಗಳನ್ನೇ ಅಪಹರಿಸಿ ದೆಹಲಿಗೆ ಕರೆದೊಯ್ದ ಸಹೋದರ ಆಕೆಯ ಮೇಲೆ ನಿರಂತರವಾಗಿ ಅತ್ಯಚಾರವೆಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಇದೇ ವೇಳೆ ತನ್ನ ಗೆಳೆಯನೊಂದಿಗೆ ಆಕೆಯ ಮದುವೆ ಸಹ ಮಾಡಿಸಿದ್ದು, ದೆಹಲಿಯಲ್ಲಿದ್ದುಕೊಂಡೇ ಆಕೆಯ ಮೇಲೆ ತನ್ನ ಕೃತ್ಯವೆಸಗಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ. ಗರ್ಭಿಣಿಯಾಗಿದ್ದ ಯುವತಿ ಈಗಾಗಲೇ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಸಂತ್ರಸ್ತೆ ತಾಯಿ, ಈಗಾಗಲೇ ಮಗಳಿಗೆ ಮದುವೆ ಆಗಿದ್ದು, ನಾಲ್ವರು ಮಕ್ಕಳಿದ್ದಾರೆ. ಗಂಡ ಬಿಟ್ಟಿರುವ ಕಾರಣ ನಮ್ಮ ಮನೆಯಲ್ಲೇ ಇಟ್ಟುಕೊಂಡು ಸಾಕುತ್ತಿದ್ದೇವೆ. ಇದೀಗ ಅವಳಿಗೆ ಮೋಸ ಮಾಡಿ ಬೇರೆ ಕಡೆ ಕರೆದುಕೊಂಡು ಹೋಗಿ ಮೋಸ ಮಾಡಲಾಗಿದೆ ಎಂದು ತನ್ನ ಅಳಲು ತೊಡಿಕೊಂಡಿದ್ದಾಳೆ.