ಹೈದ್ರಾಬಾದ್ : ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನೆಗಾಗಿ ಅಂತರ್ರಾಷ್ಟ್ರೀಯ ಶೃಂಗಸಭೆಯೊಂದನ್ನು ದೇಶದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಇಲಾಖೆಯಿಂದ ಆಯೋಜಿಸಲಾಗುತ್ತಿದೆ.
ಆಗಸ್ಟ್ 2018ರಲ್ಲಿ ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ನಡೆದ ನಾಲ್ಕನೇ ಬಿಮ್‌ಸ್ಟೆಕ್ (BIMSTEC) ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ್ದ ಘೋಷಣೆ ಅನುಸರಣೆಯಾಗಿ ಈ ಎರಡು ದಿನಗಳ ಅಂತಾರಾಷ್ಟ್ರೀಯ ಶೃಂಗಸಭೆ ಆಯೋಜನೆಯಾಗುತ್ತಿದೆ. ನಾಲ್ಕನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮಾಡಲಾದ ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿ ಅವರು ಈ ಘೋಷಣೆಗಳನ್ನು ಮಾಡಿದ್ದರು.
* ಸದಸ್ಯ ರಾಷ್ಟ್ರಗಳಲ್ಲಿ ಆಳವಾದ ತಿಳುವಳಿಕೆ ಮತ್ತು ವಿಶ್ವಾಸವನ್ನು ಬೆಳೆಸುವ ಸಂಕಲ್ಪ ಹಾಗೂ ಬಿಮ್‌ಸ್ಟೆಕ್‌ನ ನೀತಿ ಜಾಲದ ವಿಚಾರವಾದಿಗಳೊಂದಿಗೆ ವಿವಿಧ ಹಂತಗಳಲ್ಲಿ ಸಂಪರ್ಕ ಹೊಂದಲು ಜನರನ್ನು ಉತ್ತೇಜನೆ.
* ಜನರಿಂದ ಜನರ ನಡುವೆ ಸಂಪರ್ಕಗಳ ವ್ಯಾಪ್ತಿಯನ್ನು ವಿಸ್ತರಿಸಲು ಸಂಸದರು, ವಿಶ್ವವಿದ್ಯಾಲಯಗಳು, ಶೈಕ್ಷಣಿಕ, ಸಂಶೋಧನಾ ಸಂಸ್ಥೆಗಳು, ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಮಾಧ್ಯಮ ಸಮುದಾಯಕ್ಕೆ ಸೂಕ್ತ ಬಿಮ್‌ಸ್ಟೆಕ್ ವೇದಿಕೆಗಳನ್ನು ಸ್ಥಾಪಿಸುವ ಸಾಧ್ಯತೆ ಅನ್ವೇಷಿಸಲು ಒಪ್ಪಿಕೊಳ್ಳುವುದು.
* "ಸ್ಟಾರ್ಟ್ ಅಪ್ ಇಂಡಿಯಾ ಯೋಜನೆ"ಯು ಉದ್ಯೋಗ ಮತ್ತು ಸಂಪತ್ತು ಸೃಷ್ಟಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಹೊಂದಿರುವ ಒಂದು ಉಪಕ್ರಮ.
* ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಅಭಿವೃದ್ಧಿ ಮತ್ತು ನಾವೀನ್ಯತೆ ಸಾಧಿಸುವುದು ಹಾಗೂ ಭಾರತದಲ್ಲಿ ಉದ್ಯೋಗ ದರ ಹೆಚ್ಚಿಸುವುದು ಸ್ಟಾರ್ಟ್ ಅಪ್ ಇಂಡಿಯಾದ ಗುರಿಯಾಗಿದೆ.
* 2016ನೇ ಸಾಲಿನಲ್ಲಿ ಸರ್ಕಾರ ಪ್ರಾರಂಭಿಸಿದ ಕೆಲಸ, ಹಣಕಾಸು ಬೆಂಬಲ, ಸರ್ಕಾರಿ ಟೆಂಡರ್, ನೆಟ್‌ವರ್ಕಿಂಗ್ ಅವಕಾಶಗಳನ್ನು ಸರಳೀಕರಿಸುವುದು ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯ ಪ್ರಯೋಜನಗಳಾಗಿವೆ.
* ದಕ್ಷಿಣ ಮತ್ತು ಆಗ್ನೇಯ ಏಷ್ಯಾ ಪ್ರದೇಶಗಳನ್ನು ಬೆಸೆದಿರುವ ಬಿಮ್‌ಸ್ಟೆಕ್ ಬಾಂಗ್ಲಾದೇಶ, ಭಾರತ, ನೇಪಾಳ, ಮ್ಯಾನ್ಮಾರ್, ಭೂತಾನ್, ಥೈಲ್ಯಾಂಡ್ ಮತ್ತು ಶ್ರೀಲಂಕಾವನ್ನು ಒಳಗೊಂಡಿದ್ದು, ಏಷ್ಯ-ಪೆಸಿಫಿಕ್ ಪ್ರದೇಶದ ಒಂದು ಮಹತ್ವದ ವ್ಯಾಪಾರ ಕೂಟವಾಗಿ ಬೆಳೆಯುತ್ತಿದೆ.
* ಆಸಿಯಾನ್ ಸದಸ್ಯರನ್ನು (ಥಾಯ್ಲೆಂಡ್ ಮತ್ತು ಮ್ಯಾನ್ಮಾರ್) ಸಹ ಬಿಮ್‌ಸ್ಟೆಕ್‌ನಲ್ಲಿ ಸೇರಿಸಲಾಗಿದೆ. ಹೆಚ್ಚಿನ ಆರ್ಥಿಕ ಸಹಕಾರಕ್ಕೆ ಅನುಕೂಲವಾಗುವಂತೆ ಪೂರಕತೆಗಳ ಜಾಲವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಬಿಮ್‌ಸ್ಟೆಕ್ ಹೊಂದಿದೆ.
* ಏಷ್ಯಾದ ಇತರ ಬಣಗಳಿಗೆ ಹೋಲಿಸಿದರೆ ಬಿಮ್‌ಸ್ಟೆಕ್‌ನ ಅನನ್ಯತೆ ಇರುವುದು ಬಹು-ವಲಯ ಮಾದರಿಯನ್ನು ಅನುಸರಿಸುವುದರಲ್ಲಿ. ಭಾರತದ ಪಾಲಿಗೆ ನಮ್ಮ ವಿದೇಶಾಂಗ ನೀತಿಯ ಮುಖ್ಯ ಆದ್ಯತೆಗಳಾದ ‘ನೆರೆಹೊರೆ ಮೊದಲು ನೀತಿ’ ಮತ್ತು ‘ಪೂರ್ವ ಪ್ರಾಧಾನ್ಯ ನೀತಿ’ಯನ್ನು ಪೂರೈಸುವ ಮಹತ್ವದ ನೈಸರ್ಗಿಕ ವೇದಿಕೆಯಾಗಿದೆ ಬಿಮ್‌ಸ್ಟೆಕ್.
* ಈ ಪ್ರದೇಶದಲ್ಲಿಯ ಚೀನಾದ ಹೂಡಿಕೆಗಳನ್ನು (ಉದಾ. ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್) ಎದುರಿಸಲು ತಾನು ಹೊಂದಿರುವ ಕಾರ್ಯಸೂಚಿಯನ್ನು ಪ್ರಸ್ತಾಪಿಸಲು ಭಾರತಕ್ಕೆ ಬಿಮ್‌ಸ್ಟೆಕ್ ಅವಕಾಶ ನೀಡುತ್ತದೆ ಹಾಗೂ ಈ ಮಾದರಿಯ ಬದಲಾಗಿ, ಅಂರಾರಾಷ್ಟ್ರೀಯ ಮಾನದಂಡಗಳ ಆಧಾರದ ಮೇಲೆ ಸಂಪರ್ಕ ಯೋಜನೆಗಳಿಗೆ ಉತ್ತಮ ಅಭ್ಯಾಸಗಳನ್ನು ಹೇಗೆ ಅನುಸರಿಸಬೇಕು ಎಂಬುದನ್ನು ಅದು ತೋರಿಸುತ್ತದೆ.
* ಸಾರ್ಕ್ (ಪ್ರಾದೇಶಿಕ ಸಹಕಾರಕ್ಕಾಗಿ ದಕ್ಷಿಣ ಏಷ್ಯ ಒಕ್ಕೂಟ) ತನ್ನ ಉದ್ದೇಶದಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಬಿಮ್‌ಸ್ಟೆಕ್ ಅನ್ನು ಅದಕ್ಕೆ ಪರ್ಯಾಯವಾಗಿ ನೋಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಭಾರತದ ಯುವ ಆರಂಭಿಕ ಆಕಾಂಕ್ಷಿಗಳು ಮತ್ತು ಬಿಮ್‌ಸ್ಟೆಕ್‌ನ ಇತರ ದೇಶಗಳು ಹಾಗೂ ನಮ್ಮ ಅಕ್ಕಪಕ್ಕದ ದೇಶಗಳಿಗೆ ನೆರೆಯ ಆರ್ಥಿಕತೆಗಳಲ್ಲಿ ಲಭ್ಯವಿರುವ ಅಂತರರಾಷ್ಟ್ರೀಯ ಅವಕಾಶಗಳನ್ನು ಮೊದಲು ಹೊಂದಲು ಪ್ರಸಕ್ತ ಅಂತಾರಾಷ್ಟ್ರೀಯ ಶೃಂಗಸಭೆಯಾದ “ಪ್ರಾರಂಭ್” ಸರಿಯಾದ ದಾರಿಯಲ್ಲಿದೆ.
ಭಾರತವು ತನ್ನ ಜನಸಂಖ್ಯೆಯ ಶೇ. 62.5 ಭಾಗ 15-59 ವರ್ಷ ವಯೋಮಾನದವರನ್ನು ಹೊಂದಿದ್ದು, ಈ ಪ್ರಮಾಣ ನಿರಂತರವಾಗಿ ಹೆಚ್ಚುತ್ತಲೇ ಹೋಗಲಿದೆ ಹಾಗೂ 2036ರ ವೇಳೆಗೆ ಅಂದಾಜು ಶೇ. 65ನ್ನು ತಲುಪುವ ಮೂಲಕ ಗರಿಷ್ಠ ಮಟ್ಟದಲ್ಲಿರುತ್ತದೆ. ಭಾರತದಲ್ಲಿ ಜನಸಂಖ್ಯೆಯಿಂದ ಆಗುವ ಲಾಭದ ಸಾಧ್ಯತೆಯನ್ನು ಈ ಜನಸಂಖ್ಯಾ ನಿಯತಾಂಕಗಳು ಸೂಚಿಸುತ್ತವೆ.
ಈ ಮಾಪನ ವ್ಯವಸ್ಥೆ 2005-06ರಲ್ಲಿ ಪ್ರಾರಂಭವಾಗಿದ್ದು, ಇದೇ ಸ್ಥಿತಿ 2055-56 ರವರೆಗೆ ಇರುತ್ತದೆ. ಆರ್ಥಿಕ ಸಮೀಕ್ಷೆ 2018-19ರ ಪ್ರಕಾರ, ಕೆಲಸದ ವಯಸ್ಸಿನ ಪಾಲು, ಅಂದರೆ. 20-59 ವರ್ಷದೊಳಗಿನ ಜನಸಂಖ್ಯೆ ಯಾವಾಗ ಶೇಕಡಾ 59 ತಲುಪುವುದೋ, ಅಂದರೆ, 2041ರ ವೇಳೆಗೆ ಭಾರತದ ಜನಸಂಖ್ಯಾ ಲಾಭಾಂಶ ಪ್ರಮಾಣವು ಗರಿಷ್ಠ ಮಟ್ಟ ತಲುಪುವ ನಿರೀಕ್ಷೆಯಿದೆ.
ಜಗತ್ತಿನ ಇತರೆಡೆ ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿದ್ದರೆ, ಭಾರತ ಮಾತ್ರ ಜಗತ್ತಿನ ಅತ್ಯಂತ ಕಿರಿಯ ವಯಸ್ಸಿನ ಜನಸಂಖ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಭಾರತದ ಪೂರ್ವ ಮತ್ತು ಈಶಾನ್ಯ ರಾಜ್ಯಗಳು, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ದೇಶಗಳು ಅಗ್ಗದ ಮಾನವ ಬಂಡವಾಳದ ಸಮೃದ್ಧಿ ನೀಡಿದರೆ, ಪಶ್ಚಿಮ ಭಾರತ, ಥಾಯ್ಲೆಂಡ್ ಮತ್ತು ಶ್ರೀಲಂಕಾ ದೇಶಗಳು ಬೃಹತ್ ಗ್ರಾಹಕರ ನೆಲೆಯನ್ನು ಹೊಂದಿರುವ ಉತ್ಪನ್ನ ಮಾರುಕಟ್ಟೆಯನ್ನು ನೀಡುತ್ತವೆ.
ಕಡಿಮೆ ಕಾರ್ಮಿಕ ವೆಚ್ಚವು ಬಾಂಗ್ಲಾದೇಶದ ಆರ್ಥಿಕತೆಯ ಪ್ರಮುಖ ಚಾಲಕ ಶಕ್ತಿಯಾಗಿ ಮುಂದುವರೆದಿರುವ ಜೊತೆಗೇ, ಬಳಕೆಯ ದರ ಕೂಡಾ ಹೆಚ್ಚುವ ಮೂಲಕ ನಗರೀಕರಣ ವಿಸ್ತರಿಸುತ್ತಿದೆ ಹಾಗೂ ಉತ್ಪಾದನೆ ಮತ್ತು ಕೃಷಿಯ ಮೇಲಿನ ಅವಲಂಬನೆಯೂ ಹೆಚ್ಚುತ್ತಿದೆ. ಇತ್ತೀಚಿನ ವರ್ಷಗಳಲ್ಲಿ, 6,00,000 ಸ್ವತಂತ್ರ ಐಟಿ ಉದ್ಯೋಗಿಗಳನ್ನು ಹೊಂದುವ ಮೂಲಕ ಬಾಂಗ್ಲಾದೇಶವು ಅತಿದೊಡ್ಡ ಸ್ವತಂತ್ರ ಸಮುದಾಯವಾಗಿ ಹೊರಹೊಮ್ಮಿತು.
ಈ ದೇಶದಲ್ಲಿ ಈಗ ಯುವ ಜನತೆಯ ಸಂಖ್ಯೆಯೇ ಹೆಚ್ಚು. ಬಿಮ್‌ಸ್ಟೆಕ್ ದೇಶಗಳು ಒಂದಾಗುವ ಮೂಲಕ ಅವಲಂಬನೆ ಅನುಪಾತ ಕೂಡಾ ಕಡಿಮೆಯಾಗಿದೆ. ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುಎನ್‌ಎಫ್‌ಪಿಎ) ಪ್ರಕಾರ, ಒಂದು ವೇಳೆ ಉತ್ತಮ ಸಾಮಾಜಿಕ ಸೂಚಕಗಳು ಇದ್ದಲ್ಲಿ, ಜನಸಂಖ್ಯಾ ರಚನೆಯಲ್ಲಿನ ಈ ಬದಲಾವಣೆಯು, ಅಂದರೆ, ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ ಮತ್ತು ಯೋಗ್ಯ ಉದ್ಯೋಗವನ್ನು ಒದಗಿಸಿದರೆ, ಅದು ತ್ವರಿತ ಬೆಳವಣಿಗೆಯ ಸಾಧ್ಯತೆಯನ್ನು ಸೃಷ್ಟಿಸುತ್ತದೆ.
ಆದ್ದರಿಂದ ಪ್ರಸಕ್ತ ಶೃಂಗಸಭೆಯು ಯುವ ಉದ್ಯಮಿಗಳು ಮತ್ತು ಉದ್ಯಮಿಗಳಿಗೆ ಅಂತಾರಾಷ್ಟ್ರೀಯ ಬಾಂಧವ್ಯಗಳು ಹಾಗೂ ಸಂಪರ್ಕವನ್ನು ಸ್ಥಾಪಿಸಲು ಅವಕಾಶ ಒದಗಿಸುತ್ತದೆ, ಸ್ಟಾರ್ಟ್ ಅಪ್‌ಗಳಲ್ಲಿ ಅಂತಾರಾಷ್ಟ್ರೀಯ ಸಹಯೋಗ ಸ್ಥಾಪನೆಗೆ ಇದು ದಾರಿ ಮಾಡಿಕೊಡುತ್ತದೆ. ಅಂತಾರಾಷ್ಟ್ರೀಯ ಸ್ಟಾರ್ಟ್ ಅಪ್ ಸಹಯೋಗಗಳ ಮೂಲಕ ಪರಸ್ಪರ ಅಭಿವೃದ್ಧಿಗಾಗಿ ದೇಶಗಳ ನಡುವೆ ಮಾನವ ಮತ್ತು ಬಂಡವಾಳ ಸಂಪನ್ಮೂಲಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಹಂಚಿಕೊಳ್ಳಲು ಅಂತರರಾಷ್ಟ್ರೀಯ ಶೃಂಗಸಭೆಯು ಸಹಾಯ ಮಾಡುತ್ತದೆ.
ಎರಡನೆಯದಾಗಿ, ಕೋವಿಡ್ ನಂತರದ ಯುಗದಲ್ಲಿ ವ್ಯಾಪಾರ ಯೋಜನೆಗಳಲ್ಲಿ ಇರುವ ಹಾಗೆ, ವ್ಯಾಪಾರ ಮಾರ್ಗಗಳು ಮತ್ತು ಪೂರೈಕೆ ಸರಪಳಿಗಳನ್ನು ಪುನಃ ರಚಿಸಲಾಗುತ್ತಿದೆ. ಪುನಃಶ್ಚೇತನ ಹಾಗೂ ವಿಶ್ವಾಸಾರ್ಹ ಪೂರೈಕೆ ಜಾಲಗಳನ್ನು ಹೆಚ್ಚಿಸಲು ಬಹುರಾಷ್ಟ್ರೀಯ ಉದ್ಯಮಗಳು ತಮ್ಮ ಉತ್ಪಾದನಾ ನೆಲೆಯನ್ನು ವೈವಿಧ್ಯಗೊಳಿಸುತ್ತಿದ್ದು, ಹಲವಾರು ಪೂರೈಕೆ ಸರಪಳಿಗಳಲ್ಲಿ ಪರ್ಯಾಯ ಉತ್ಪಾದನಾ ಸ್ಥಳಗಳಿಗೆ ಹೆಚ್ಚಿನ ಬೇಡಿಕೆ ಇದೆ.
ಭಾರತವು ಈ ದಿಕ್ಕಿನಲ್ಲಿ ಅವಕಾಶದ ಸಾಧ್ಯತೆಯನ್ನು ಹೊಂದಿದೆ. ಏಕೆಂದರೆ, ಸದ್ಯ ಚೀನಾ ಇರುವ ಜಾಗದಲ್ಲಿ ನಮ್ಮ ದೇಶವನ್ನು ಇಂತಹ ಅವಕಾಶಗಳ ಪರ್ಯಾಯ ತಾಣವಾಗಿ ನೋಡಲಾಗುತ್ತಿದೆ. ಪ್ರಸಕ್ತ ಅಂತಾರಾಷ್ಟ್ರೀಯ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಬೆಳೆಯುತ್ತಿರುವ ಪೂರೈಕೆ ಸರಪಳಿ ಮತ್ತು ಸರಕು ಕ್ಷೇತ್ರದಲ್ಲಿ ಹೊಸ ಉದ್ಯಮಗಳು ವಿಕಸನಗೊಳ್ಳುವ ನಿರೀಕ್ಷೆಯಿದೆ.
ಸುಲಭ ವ್ಯವಹಾರ ಸೂಚ್ಯಂಕದಲ್ಲಿ ಭಾರತ ಈಗ ಸ್ಥಾನ ಪಡೆದಿದ್ದು, ಅದು ವಿದೇಶಿ ಹೂಡಿಕೆಯ ಸ್ಥಿರ ಹರಿವನ್ನು ಪಡೆಯುತ್ತಿದೆ. ಕೋವಿಡ್-19ರ ನಂತರ, ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತನ್ನನ್ನು ಸಂಯೋಜಿಸುವತ್ತ ದೇಶ ಗಮನ ಹರಿಸಿದೆ. ಇದರಿಂದಾಗಿ ಸ್ಟಾರ್ಟ್ ಅಪ್ ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಸಹಯೋಗಕ್ಕಾಗಿ ಹೊಸ ಅವಕಾಶವನ್ನು ಸಹ ಇದು ಒದಗಿಸಿದೆ.
ಇಂದಿನ ದಿನಗಳಲ್ಲಿ ಸಂಪರ್ಕ ಎಂಬುದು ಕೇವಲ ರಸ್ತೆಗಳು ಮತ್ತು ರೈಲ್ವೆ ಮಾರ್ಗಗಳು ಮಾತ್ರವಷ್ಟೇ ಅಲ್ಲ, ಮುಖ್ಯವಾಗಿ ಡಿಜಿಟಲ್ ಸಂಪರ್ಕವನ್ನು ಸಹ ಇದು ಅರ್ಥೈಸುತ್ತದೆ. ನಮ್ಮ ಜನರಿಗೆ ಮತ್ತು ಉದ್ಯಮಕ್ಕೆ ಹೆಚ್ಚಿನ ಪ್ರವೇಶ, ಹೆಚ್ಚು ಕೈಗೆಟುಕುವಂತಹ ಹಾಗೂ ಹೆಚ್ಚಿನ ವೇಗದ ಇಂಟರ್ನೆಟ್ ಮತ್ತು ಮೊಬೈಲ್ ಸಂವಹನಗಳನ್ನು ಒದಗಿಸಲು ನಮ್ಮ ಡಿಜಿಟಲ್ ನೆಟ್‌ವರ್ಕ್‌ಗಳನ್ನು ಮತ್ತಷ್ಟು ಸಂಯೋಜಿಸುವತ್ತ ನಾವು ಸಾಗಬೇಕಾಗಿದೆ.
ಡಿಜಿಟಲ್ ತಂತ್ರಜ್ಞಾನದಿಂದ ಸಾಧ್ಯವಾಗುತ್ತಿರುವ ವಿಸ್ತಾರವಾದ ದಾಪುಗಾಲು ದೇಶಾದ್ಯಂತ ಸಂವಹನಗಳ ಸ್ವರೂಪವನ್ನು ವೇಗವಾಗಿ ಪರಿವರ್ತಿಸುತ್ತಿದ್ದು ಸೈಬರ್ ಸುರಕ್ಷತೆ, ದತ್ತಾಂಶ ಸಂರಕ್ಷಣೆ, ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವಿಕೆ ಮತ್ತು ತಂತ್ರಜ್ಞಾನದ ಬಳಕೆಯಂತಹ ಸಹಕಾರದ ಹೊಸ ಕ್ಷೇತ್ರಗಳನ್ನು ಪ್ರಧಾನವಾಗಿ ಬಿಂಬಿಸುತ್ತಿದೆ. ಈ ದಿಕ್ಕಿನಲ್ಲಿ ಬೌದ್ಧಿಕ ಆಸ್ತಿ ಕೂಡ ಹೊಸ ಸಾಹಸಗಳಿಗೆ ದಾರಿಯನ್ನು ಸುಗಮವಾಗಿಸಲಿದ್ದು, “ಪ್ರಾರಂಭ್” ಸಮಾವೇಶವು ಈ ದಿಕ್ಕಿನಲ್ಲಿ ಹೊಸ ಉದ್ಯಮಗಳಿಗೆ ದಾರಿ ಮಾಡಿಕೊಡಲಿದೆ. ಡಿಜಿಟಲ್ ಇಂಡಿಯಾ ಅಭಿಯಾನವು ಈ ದಿಕ್ಕಿನಲ್ಲಿ ಮುಂದಿನ ಹೆಜ್ಜೆ ಎನಿಸಿದೆ.
ಭಾರತವು ಜೀವಂತಿಕೆಯುಳ್ಳ ಸ್ಟಾರ್ಟ್ ಅಪ್ ಸಂಸ್ಕೃತಿಯನ್ನು ಹೊಂದಿರುವುದು ಈಗಾಗಲೇ ಸಾಬೀತಾಗಿದ್ದು, ಹಲವಾರು ಯುವ ಕಂಪನಿಗಳು ಮೌಲ್ಯಮಾಪನದಲ್ಲಿ ಕಷ್ಟಸಾಧ್ಯ (ಯುನಿಕಾರ್ನ್) ಸ್ಥಾನಮಾನವನ್ನು ಸಾಧಿಸುತ್ತಿವೆ. ತಮ್ಮ ಅನುಭವವನ್ನು ಇತರ ದೇಶಗಳು ಮತ್ತು ಬಿಮ್‌ಸ್ಟೆಕ್‌ನೊಂದಿಗೆ ಹಂಚಿಕೊಳ್ಳಲು ಅವುಗಳಿಗೆ ಇದು ವೇದಿಕೆಯನ್ನು ಒದಗಿಸುತ್ತಿದ್ದು, ಯುವ ಮನಸ್ಸುಗಳ ಸಾಮರ್ಥ್ಯವನ್ನು ಸಂಗ್ರಹವಾಗಿ ಬಳಸಿಕೊಳ್ಳಲಿದೆ.
ಸ್ಟಾರ್ಟ್ ಅಪ್ ಚಟುವಟಿಕೆಗಳಿಗೆ ನಮ್ಮ ಪ್ರದೇಶವನ್ನು ಆಕರ್ಷಕ ತಾಣವಾಗಿ ಪ್ರಸ್ತುತಪಡಿಸಲು, ಪ್ರಸಕ್ತ ಅಂತಾರಾಷ್ಟ್ರೀಯ ಶೃಂಗಸಭೆ “ಪ್ರಾರಂಭ್” ಸೂಕ್ತ ಮತ್ತು ಕಾರ್ಯಾಚರಣೆಯ ವಾತಾವರಣವನ್ನು ಒದಗಿಸಲಿದೆ.