ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಆಗಸ್ಟ್ 4ರವರೆಗೆ 30 ಕೋಟಿ ರೂ ದೇಣಿಗೆ ಬಂದಿದೆ. ಇದರ ಜತೆಗೆ ಭಾರತದಲ್ಲಿ ನೆಲೆಸಿರುವ ಮೊರಾರಿ ಬಾಪು ಸಂಸ್ಥೆಯ ವತಿಯಿಂದ ಹಾಗು ಭಾರತೀಯ ನಿವಾಸಿಗಳಿಂದ 11 ಕೋಟಿ ರೂ ಹಣ ಬಂದಿದೆ ಎಂದು ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ್ ದೇವ ಗಿರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಮ ಮಂದಿರ ನಿರ್ಮಾಣಕ್ಕಾಗಿ 24 ಕೆ.ಜಿ ಬೆಳ್ಳಿ ಇಟ್ಟಿಗೆ ದೇಣಿಗೆ ನೀಡಿದ ಜೈನ ಸಮುದಾಯ!
ಇನ್ನು, ವಿದೇಶಗಳಲ್ಲಿ ವಾಸವಾಗಿರುವ ಅನಿವಾಸಿ ಭಾರತೀಯರಿಂದಲೂ 7 ಕೋಟಿ ರೂ ದೇಣಿಗೆ ಬಂದಿದ್ದು, ಇಲ್ಲಿಯವರೆಗೆ ಆ ಹಣವನ್ನು ನಾವು ಸೇರಿಸಿಕೊಂಡಿಲ್ಲ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಪ್ರಮಾಣ ಪತ್ರ ಸಿಗುವವರೆಗೂ ಆ ಹಣ ಮುಟ್ಟುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಇದರ ಜತೆಗೆ ಭಕ್ತರಿಂದ ಬೆಳ್ಳಿ, ಚಿನ್ನ, ಸ್ಥಿರಾಸ್ತಿ ರೂಪದಲ್ಲೂ ಸಾಕಷ್ಟು ಕೊಡುಗೆ ಬಂದಿದೆ. ಕೇಂದ್ರ ಸರ್ಕಾರ ಟ್ರಸ್ಟ್ಗೆ ಸಾಂಕೇತಿಕವಾಗಿ 1 ರೂಪಾಯಿ ದೇಣಿಗೆ ನೀಡಿದೆ. ಮಹಾರಾಷ್ಟ್ರದ ಶಿವಸೇನೆ 1 ಕೋಟಿ ರೂ ನೀಡಿದೆ ಎಂದು ತಿಳಿಸಿದರು.