ನವದೆಹಲಿ : ಸ್ಪುಟಿನಿಕ್ ವಿ ಕೋವಿಡ್-19 ಲಸಿಕೆಯ 3ನೇ ಹಂತದ ಪ್ರಯೋಗ ನಡೆಯಲಿದೆ. ಸುಮಾರು 100 ಆರೋಗ್ಯವಂತ ಸ್ವಯಂಸೇವಕರ ಮೇಲೆ ಪ್ರಯೋಗ ಕೈಗೊಳ್ಳಲಾಗುವುದು.
ಪ್ರಯೋಗದ ನೇತೃತ್ವವನ್ನು ಕೋಲ್ಕತ್ತಾದ ಕ್ಲಿನಿಮಡ್ ಲೈಫ್ ಸೈನ್ಸಸ್ ಸಹಯೋಗದೊಂದಿಗೆ ಕೋಲ್ಕತ್ತಾದ ಪೀರ್ಲೆಸ್ ಆಸ್ಪತ್ರೆ, ಕನ್ಸ್‌ಲ್ಟೆಂಟ್ ಕ್ಲಿನಿಕಲ್ ಫಾರ್ಮಕಾಲಜಿಸ್ಟ್ ಮತ್ತು ನಿರ್ದೇಶಕ ಡಾ. ಶುಭ್ರೋ ಜ್ಯೋತಿ ಭೌಮಿಕ್ ವಹಿಸಲಿದ್ದಾರೆ. ಹಾಗೂ ಈ ಪ್ರಯೋಗವನ್ನು ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ಲಿಮಿಟೆಡ್ ಪ್ರಾಯೋಜಿಸಿದೆ.
ಆಸ್ಪತ್ರೆಯ ನೈತಿಕ ಸಮಿತಿಯಿಂದ ಅನುಮೋದಿಸಲ್ಪಟ್ಟಿದ್ದು, ಪೀರ್‌ಲೆಸ್ ಆಸ್ಪತ್ರೆಯಲ್ಲಿ ಸ್ಪುಟ್ನಿಕ್ ವಿ ಲಸಿಕೆಯ ಪ್ರಯೋಗ ನಡೆಯಲಿದೆ. ಪ್ರಧಾನ ತನಿಖಾಧಿಕಾರಿಯಾಗಿ ಡಾ. ಸುಭ್ರಾಜ್ಯೋತಿ ಭೌಮಿಕ್ ನಿರ್ವಹಿಸಲಿದ್ದಾರೆ. ಈ ತಿಂಗಳಿನಿಂದ ಪ್ರಯೋಗಗಳನ್ನು ನಡೆಸಲು ಅನುಮತಿ ಪಡೆದ ಏಕೈಕ ಆಸ್ಪತ್ರೆ ಇದಾಗಿದೆ.