ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಒಂದಿಲ್ಲೊಂದು ಹೊಸ ಚಾಲೆಂಜ್ ಹುಟ್ಟಿಕೊಳ್ಳುತ್ತಿರುತ್ತವೆ. ಅದರಂತೆಯೇ ಇತ್ತೀಚೆಗಷ್ಟೆ ಬಾಟಲ್ ಕ್ಯಾಪ್ ಚಾಲೆಂಜ್ ಎನ್ನುವ ಹೊಸ ಚಾಲೆಂಜ್ ಸದ್ದು ಮಾಡುತ್ತಿದ್ದು, ಅದಕ್ಕೆ ಬಾಲಿವುಡ್ ಹಾಗೂ ಸ್ಯಾಂಡಲ್‍ವುಡ್ ನಟ, ನಟಿಯರು ಫಿದಾ ಆಗಿದ್ದಾರೆ. ಇದರ ಮಧ್ಯೆ ಕೇಂಧ್ರ ಕ್ರೀಡಾ ಸಚಿವರು ಈ ಚಾಲೆಂಜ್ನಲ್ಲಿ ಭಾಗಿಯಾಗಿ ಯಶಸ್ವಿಯಾದ್ದಾರೆ.
ಕೇಂದ್ರ ಕ್ರೀಡಾ ಸಚಿವರಾಗಿರುವ ಕಿರಣ್ ರಿಜಿಜು ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕಾರ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದು, ಅದರ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ. ಇದರ ಜೊತೆಗೆ ತಾವು ಫಿಟ್ ಎಂದು ತೋರಿಸಿಕೊಟ್ಟಿದ್ದಾರೆ.
- " class="align-text-top noRightClick twitterSection" data="
">
ಇದರ ಜತೆಗೆ ಡ್ರಗ್ಸ್ಗೆ ಗುಡ್ಬೈ ಹೇಳಿ, ಫಿಟ್ ಇಂಡಿಯಾ ಕ್ಯಾಂಪೇನ್ಗೆ ಸಿದ್ಧರಾಗಿ ಎಂದು ಅಡಿ ಬರಹ ಬರೆದುಕೊಂಡಿರುವ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ. ನಿನ್ನೆ ಈ ವಿಡಿಯೋ ಶೇರ್ ಮಾಡಿದ್ದು, ಈಗಾಗಲೇ 57,000 ಜನರು ಇದರ ವೀಕ್ಷಣೆ ಮಾಡಿದ್ದಾರೆ.
ಕಳೆದ ವರ್ಷ ಕೇಂದ್ರದ ಮಾಜಿ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಫಿಟ್ನೆಸ್ ಕಾಯ್ದುಕೊಳ್ಳುವ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿರುವ 'ಹಮ್ ಫಿಟ್ ತೊ ಇಂಡಿಯಾ ಫಿಟ್' ಸವಾಲಿಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತು.