ರಾಮ್ಬನ್: ಹೆದ್ದಾರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿಶೇಷ ಪೊಲೀಸ್ ಅಧಿಕಾರಿ ಮೇಲೆ ಹರಿಯಾಣ ಮೂಲದ ಚಾಲಕನೊಬ್ಬ ಟ್ರಕ್ ಹತ್ತಿಸಿರುವ ಘಟನೆ ರಾಮ್ಬನ್ ಜಿಲ್ಲೆಯ ಬನಿಹಾಲ್ನಡೆದಿದೆ.
ಮಂಗಳವಾರ ರಾತ್ರಿ ಗ್ರಾಮದ ಜಮ್ಮು-ಶ್ರೀನಗರ ಹೈವೆಯಲ್ಲಿ ವಿಶೇಷ ಟ್ರಾಫಿಕ್ ಪೊಲೀಸ್ ಅಧಿಕಾರಿ ಪರ್ವೇಜ್ ಅಹ್ಮದ್ ಮಲಿಕ್ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಕಾಶ್ಮೀರ್ನತ್ತ ಹೊರಡುತ್ತಿದ್ದ ಟ್ರಕ್ ಚಾಲಕ ಪರ್ವೇಜ್ ಅಹ್ಮದ್ ಮೇಲೆ ಹತ್ತಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಟ್ರಕ್ ನಿಲ್ಲಿಸದೇ ಎಸ್ಕೇಪ್ ಆಗಲು ಆರೋಪಿ ಚಾಲಕ ಯತ್ನಿಸಿದ್ದಾನೆ. ಆದ್ರೆ ಆರೋಪಿಯನ್ನು ಚೇಸ್ ಮಾಡಿ ಬಂಧಿಸಲಾಗಿದೆ. ಆರೋಪಿ ಮೇಲೆ ಪ್ರಕರಣ ದಾಖಲಾಗಿದ್ದು, ವಾಹನವನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿ ಪರ್ವೇಜ್ ಅಹ್ಮದ್ ಮಲಿಕ್ ಹೆಂಡ್ತಿ ಮತ್ತು ಐದು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಬುಧವಾರ ಬೆಳಗ್ಗೆ ಪರ್ವೇಜ್ ಅಹ್ಮದ್ರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.