ETV Bharat / bharat

ಶ್ರೀನಗರ: ಎರಡು AK - 47 ರೈಫಲ್​​ ಜೊತೆಗೆ ನಾಪತ್ತೆಯಾದ ವಿಶೇಷ ಪೊಲೀಸ್​ ಅಧಿಕಾರಿ

author img

By

Published : Oct 14, 2020, 1:49 PM IST

ಎರಡು ದಿನಗಳ ಹಿಂದೆ ಕಾನ್​ಸ್ಟೆಬಲ್​ ಒಬ್ಬರು ತನ್ನ ಸೇವಾ ರೈಫಲ್​ ​ಜೊತೆಗೆ ಕ್ಯಾಂಪ್​ನಿಂದ ಪರಾರಿಯಾದ ಬೆನ್ನೆಲೆ ವಿಶೇಷ ಪೊಲೀಸ್​ ಅಧಿಕಾರಿಯೊಬ್ಬರು ಎರಡು ಎಕೆ - 47 ರೈಫಲ್​​​​ಗಳು ಜೊತೆಗೆ ನಾಪತ್ತೆಯಾಗಿದ್ದಾರೆ.

SPO goes missing with 2 AK-47 rifles from Kashmir police camp
ವಿಶೇಷ ಪೊಲೀಸ್​ ಅಧಿಕಾರಿ ನಾಪತ್ತೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಚಾದೂರಾ ಪ್ರದೇಶದಲ್ಲಿ ವಿಶೇಷ ಪೊಲೀಸ್​ ಅಧಿಕಾರಿಯೊಬ್ಬರು (ಎಸ್‌ಪಿಒ) ಎರಡು ಎಕೆ-47 ರೈಫಲ್​​​​ಗಳು ಮತ್ತು ಮೂರು ಮ್ಯಾಗಜೈನ್ಸ್​​ನೊಂದಿಗೆ ಪೊಲೀಸ್​ ಶಿಬಿರದಿಂದ ನಾಪತ್ತೆಯಾಗಿದ್ದಾರೆ.

ಸಶಸ್ತ್ರ ಸೀಮಾ ಬಾಲ್ ಕಾನ್​​ಸ್ಟೆಬಲ್​​ ಅಲ್ತಾಫ್ ಹುಸೇನ್ ಸೇವಾ ರೈಫಲ್​ ಜೊತೆಗೆ ಇದೇ ಜಿಲ್ಲೆಯ ಮತ್ತೊಂದು ಶಿಬಿರದಿಂದ ಕಾಣೆಯಾಗಿದ್ದರು ಎಂದು ವರದಿಯಾದ ಎರಡು ದಿನಗಳ ನಂತರ ಈ ಘಟನೆ ನಡೆದಿದೆ. ಕಾಣೆಯಾದ ಎಸ್‌ಪಿಒ ಪತ್ತೆಹಚ್ಚಲು ಮ್ಯಾನ್‌ಹಂಟ್ ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಉಗ್ರಗಾಮಿತ್ವದ ವಿರುದ್ಧ ಹೋರಾಡಲು ಮತ್ತು ಉಗ್ರರ ನೇಮಕಾತಿ ಪೂಲ್‌ಗಳನ್ನು ಖಾಲಿ ಮಾಡಲು ಎಸ್‌ಪಿಒಗಳು ನಿಗದಿತ ಮಾಸಿಕ ಸಂಭಾವನೆಯಲ್ಲಿ ತೊಡಗಿದ್ದಾರೆ. ಈ ಎಸ್‌ಪಿಒಗಳಲ್ಲಿ ಹೆಚ್ಚಿನವರು ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವಲ್ಲಿ ತರಬೇತಿ ಹೊಂದಿಲ್ಲ. ಎಸ್‌ಎಸ್‌ಬಿಯ 14ನೇ ಬೆಟಾಲಿಯನ್‌ನ ಕಮಾಂಡೆಂಟ್ ಬುಡ್ಗಾಮ್‌ನ ಚಾದೂರಾ ಪೊಲೀಸ್ ಠಾಣೆಗೆ ವರದಿ ಸಲ್ಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.