ETV Bharat / bharat

ಲಂಕಾ ಜನರಿಗೆ ಸರಿ ಎನಿಸುವ ಸಂವಿಧಾನ ಬೇಕು: 'ಈಟಿವಿ ಭಾರತ'ಕ್ಕೆ ಮಹಿಂದಾ ರಾಜಪಕ್ಸೆ ವಿಶೇಷ ಸಂದರ್ಶನ - Rajapakse latest news

ಶ್ರೀಲಂಕಾಕ್ಕೆ ಬೇಕಾಗಿರುವುದು ದೇಶಕ್ಕೆ ಮತ್ತು ಜನರ ನಿಜವಾದ ಆಕಾಂಕ್ಷೆಗಳಿಗೆ ಸರಿಹೊಂದುವಂತಹ ಹೊಸ ಸಂವಿಧಾನವಾಗಿದೆ, ಹೊರತು ಬಾಹ್ಯ ಆಟಗಾರರ ಆಕಾಂಕ್ಷೆಗಳನ್ನು ಈಡೇರಿಸಬಾರದು ಎಂದು ಪಿಎಂ ರಾಜಪಕ್ಸೆ ಈಟಿವಿ ಭಾರತದ ಜೊತೆ ಕೆಲವು ಮಹತ್ವದ ವಿಚಾರವನ್ನು ಹಂಚಿಕೊಂಡಿದ್ದಾರೆ.

special interview with sri lanka PM Rajapakse
ಮಹಿಂದಾ ರಾಜಪಕ್ಸೆ
author img

By

Published : Aug 10, 2020, 10:17 PM IST

ದ್ವೀಪ ರಾಷ್ಟ್ರಕ್ಕೆ ಹೊಸ ಸಂವಿಧಾನದ ಅಗತ್ಯವಿದೆ, ಅದು ನಮ್ಮ ದೇಶದ ಜನರ ಆಕಾಂಕ್ಷೆಗಳನ್ನು ಈಡೇರಿಸುವಂತಿರಬೇಕೇ ಹೊರತು ‘ಬಾಹ್ಯ ಆಟಗಾರರಿಗೆ’ ಅನುಕೂಲವಾಗುವಂತಿರಬಾರದು ಎಂದು ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ಬಳಿಕ ಈಟಿವಿ ಭಾರತ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ಕೋವಿಡ್ 19 ಸಾಂಕ್ರಾಮಿಕ ವೈರಸ್‌ ಹಬ್ಬುತ್ತಿರುವ ಆತಂಕದ ಮಧ್ಯೆ ಕಳೆದ ವಾರ ನಡೆದ ಸಂಸತ್ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ರಾಜಪಕ್ಸೆ ಅವರು ಕೊಲಂಬೊದ ಕೆಲಾನಿಯಾ ಬೌದ್ಧ ದೇವಾಲಯದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಅವರ ಕಿರಿಯ ಸಹೋದರ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಮೂಲಕ ಪ್ರಮಾಣವಚನ ಸ್ವೀಕರಿಸಿದರು.

2019 ರ ನವೆಂಬರ್‌ನಲ್ಲಿ ಗೋಟಬಯಾ ಸುಮಾರು 52 ಪ್ರತಿಶತದಷ್ಟು ಮತಗಳನ್ನು ಗಳಿಸಿ ಜಯ ಸಾಧಿಸಿದ ಒಂಭತ್ತು ತಿಂಗಳ ನಂತರ, ಆಡಳಿತಾರೂಢ ಎಸ್‌ಎಲ್‌ಪಿಪಿ (ಶ್ರೀಲಂಕಾ ಪೊಡುಜಾನಾ ಪಾರ್ಟಿ) ಪಕ್ಷದಿಂದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ವಾಯುವ್ಯ ಜಿಲ್ಲೆ ಕುರುನಗಲದಿಂದ ಮಹಿಂದಾ ರಾಜಪಕ್ಸೆ ಸ್ಫರ್ಧಿಸಿದ್ದರು. ಈ ಚುನಾವಣೆಯಲ್ಲಿ ರಾಜಪಕ್ಸೆ ಅವರ ಪಕ್ಷವು 225 ಸಂಸತ್‌ ಸ್ಥಾನಗಳ ಪೈಕಿ 145 ಸ್ಥಾನಗಳನ್ನ ಗೆದ್ದು ಮತ್ತೆ ಅಧಿಕಾರಕ್ಕೆ ಬಂದಿದೆ. ಆದರೆ, ಅವರ ಚುನಾವಣಾ ಪ್ರಣಾಳಿಕೆಯ ಪ್ರಮುಖ ಆಶ್ವಾಸನೆಯಾದ ಸಂಸತ್ತಿನ 19 ನೇ ತಿದ್ದುಪಡಿಯನ್ನು ರದ್ದುಗೊಳಿಸಲು ಅಥವಾ ಮಾರ್ಪಡಿಸಲು 225 ಸದಸ್ಯರ ಸಂಸತ್ತಿನಲ್ಲಿ 150 ಸ್ಥಾನಗಳ ಅಗತ್ಯವಿದ್ದು, ರಾಜಪಕ್ಸೆಗೆ ಐದು ಸ್ಥಾನಗಳ ಕೊರತೆ ಇದೆ.

ಈಗ ನೀವು ಪಡೆದಿರುವ ಸ್ಥಾನಗಳಿಂದಾಗಿ 19 ನೇ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳುವುದು ಸುಲಭವಾಗಿದೆಯೇ ಎಂದು ಈಟಿವಿ ಭಾರತದ ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಅವರ ಪ್ರಶ್ನೆಗೆ ಉತ್ತರಿಸಿದ ಮಹಿಂದಾ ರಾಜಪಕ್ಸೆ, “19 ನೇ ತಿದ್ದುಪಡಿಯಿಂದ ಸರ್ಕಾರವು ಸುಗಮವಾಗಿ ಮತ್ತು ಉತ್ಪಾದಕವಾಗಿ ಕಾರ್ಯನಿರ್ವಹಿಸಲು ಅಸಾಧ್ಯವಾಗಿದೆ. ಶ್ರೀಲಂಕಾದ ಜನರು ಚುನಾವಣೆಯಲ್ಲಿ ಹಿಂದಿನ ಆಡಳಿತವನ್ನು ಅಗಾಧವಾಗಿ ತಿರಸ್ಕರಿಸಿದ ಪ್ರಮುಖ ಕಾರಣಗಳಲ್ಲಿ ಇದೂ ಒಂದು. ” ಎಂದು ರಾಜಪಕ್ಸೆ ತಿಳಿಸಿದ್ದಾರೆ.

2015 ರಲ್ಲಿ ಹತ್ತು ವರ್ಷಗಳ ಆಳ್ವಿಕೆಯ ನಂತರ ಮಹಿಂದಾ ಚುನಾವಣೆಯಲ್ಲಿ ಸೋತ ಬಳಿಕ UNP(ಯುನೈಟೆಡ್ ನ್ಯಾಷನಲ್ ಪಾರ್ಟಿ) ಸರ್ಕಾರದಲ್ಲಿ ಪ್ರಧಾನ ಮಂತ್ರಿಯಾಗಿ ರಣೀಲ್ ವಿಕ್ರಮಸಿಂಘೆ ಮತ್ತು ಮೈತ್ರಪಾಲಿ ಸಿರಿಸೇನಾ ರಾಷ್ಟ್ರಪತಿಯಾದಾಗ 19 ನೇ ಸಾಂವಿಧಾನಿಕ ತಿದ್ದುಪಡಿಯನ್ನು ಜಾರಿಗೆ ತರಲಾಯಿತು. ಈ ತಿದ್ದುಪಡಿಯು ಅಧ್ಯಕ್ಷೀಯ ಅಧಿಕಾರವನ್ನು ಮೊಟಕುಗೊಳಿಸಿತು ಮತ್ತು ‘ಸುಧಾರಣಾವಾದಿ ಸರ್ಕಾರ’ ಹೇಳಿದಂತೆ ಅಂತಿಮವಾಗಿ ಸಂಸತ್ತಿನ ಆಡಳಿತದತ್ತ ಸಾಗುವ ಉದ್ದೇಶದಿಂದ ಪ್ರಧಾನಿ ಮತ್ತು ಸಂಸತ್ತಿನೊಂದಿಗೆ ಆ ಅಧಿಕಾರಗಳನ್ನು ಹೆಚ್ಚು ಸಮನಾಗಿ ವಿತರಿಸಿತು.

ಆದರೆ ಈಟಿವಿ ಭಾರತಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪಿಎಂ ರಾಜಪಕ್ಸೆ, ಈ ತಿದ್ದುಪಡಿಯು ‘ಬಾಹ್ಯ ಆಟಗಾರರಿಗೆ’ ಅನುಕೂಲ ಮಾಡಕೊಟ್ಟಿದೆ ಎಂದು ಟೀಕಿಸಿದ್ದಾರೆ. “ಶ್ರೀಲಂಕಾಕ್ಕೆ ಬೇಕಾಗಿರುವುದು ದೇಶಕ್ಕೆ ಮತ್ತು ಜನರ ನಿಜವಾದ ಆಕಾಂಕ್ಷೆಗಳಿಗೆ ಸರಿಹೊಂದುವಂತಹ ಹೊಸ ಸಂವಿಧಾನವಾಗಿದೆ, ಹೊರತು ಬಾಹ್ಯ ಆಟಗಾರರ ಆಕಾಂಕ್ಷೆಗಳನ್ನು ಈಡೇರಿಸಬಾರದು. ಸಮಾಜದ ಹಲವು ಕ್ಷೇತ್ರಗಳೊಂದಿಗೆ ಹೆಚ್ಚು ಹೆಚ್ಚು ಚರ್ಚೆ ನಡೆಸಿದ ನಂತರ ಇದನ್ನು ಸಿದ್ಧ ಮಾಡಲು ನಾವು ಆಶಿಸುತ್ತೇವೆ ”ಎಂದು ಪಿಎಂ ರಾಜಪಕ್ಸೆ ಹೇಳಿದ್ದಾರೆ

ಈ ಚುನಾವಣೆಯಲ್ಲಿ ಕೇವಲ 3 ಪ್ರತಿಶತದಷ್ಟು ಮತಗಳನ್ನು ಪಡೆದು ಸಿರಿಸೇನಾ ಮತ್ತು ವಿಕ್ರಮಸಿಂಘೆ ತೀವ್ರ ಅವಮಾನಕ್ಕೊಳಗಾಗಿದ್ದಾರೆ. ಇನ್ನೂ ಯುಎನ್‌ಪಿಯಿಂದ ಸಿಡಿದು ಹೊರಬಂದ ಎಸ್‌ಜೆಬಿ (ಸಮಗಿ ಜನ ಬಾಲವೇಗಯಾ) ಪಕ್ಷದ ಸಜಿತ್ ಪ್ರೇಮದಾಸ 54 ಸ್ಥಾನಗಳೊಂದಿಗೆ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದ್ದಾರೆ. ಮತ್ತೆ ಶ್ರೀಲಂಕಾ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮಹಿಂದಾ ಅವರು 19ನೇ ತಿದ್ದುಪಡಿ ಹಿಂಪಡೆಯುವ ಮೂಲಕ ಗೋತಬಯಾ ನಿಯಂತ್ರಿಸುತ್ತಿರುವ ಅಧ್ಯಕ್ಷ ಸ್ಥಾನಕ್ಕೆ ಅಧಿಕಾರ ವರ್ಗಾವಣೆಯನ್ನು ಖಚಿತಪಡಿಸಲು ಬಯಸುತ್ತಾರೆಯೇ ಅಥವಾ ಇದು ಮುಂಬರುವ ದಿನಗಳಲ್ಲಿ ಇಬ್ಬರು ಸಹೋದರರ ನಡುವೆ ಜಗಳಕ್ಕೆ ಕಾರಣವಾಗಬಹುದೇ? ಆ ಮೂಲಕ ಆಡಳಿತದಲ್ಲಿ ಅಸ್ಥಿರತೆ ಉಂಟಾಗುತ್ತದೆಯೇ ಎಂಬ ಸಂದೇಹಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಕೊಲಂಬೊ ಬಂದರಿನಲ್ಲಿ ಪ್ರಸ್ತಾಪಿತ ಈಸ್ಟರ್ನ್ ಕಂಟೇನರ್ ಟರ್ಮಿನಲ್ (ಇಸಿಟಿ) ಯೋಜನೆಯ ಭವಿಷ್ಯ ಮತ್ತು ಅದನ್ನು ನಿರ್ಮಿಸಲು ಭಾರತ ಮತ್ತು ಜಪಾನೀಸ್ ಸಹಭಾಗಿತ್ವದ ಬಗ್ಗೆ ಕೇಳಿದಾಗ, ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಪ್ರಧಾನಿ ರಾಜಪಕ್ಸ, ಈ ಬಗ್ಗೆ ಇನ್ನೂ ಕ್ಯಾಬಿನೆಟ್‌ ನಿರ್ಧಾರ ಕYಗೊಳ್ಳಬೇಕಾಗಿರುವುದರಿಂದ ಈ ಬಗ್ಗೆ ಪ್ರತಿಕ್ರಿಯಿಸುವುದು ʼಸ್ವಲ್ಪ ಅಪ್ರಬುದ್ಧʼ ವಾಗುತ್ತದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.