ETV Bharat / bharat

ವಿಶೇಷ ಲೇಖನ: ಮಂಕಾಗುತ್ತಿದೆ ಆಫ್ಘನ್ ದಿಗಂತದ ಕೊನೆಯಲ್ಲಿ ಇಣುಕುತ್ತಿದ್ದ ಬೆಳಕು - ಮಂಕಾಗುತ್ತಿದೆ ಆಫ್ಘನ್ ದಿಗಂತದ ಕೊನೆಯಲ್ಲಿ ಇಣುಕುತ್ತಿದ್ದ ಬೆಳಕು

ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆ ದೃಷ್ಟಿಯಿಂದ ಭವಿಷ್ಯದಲ್ಲಿ ದೀರ್ಘಕಾಲೀನ ಪರಿಣಾಮ ಬೀರಬಹುದಾದ ಮಹತ್ವದ ಘಟ್ಟವಾಗಿ, ಅಮೆರಿಕ ಮತ್ತು ಅಫ್ಘಾನಿಸ್ತಾನದ ತಾಲಿಬಾನ್ ಶನಿವಾರ ( ಫೆಬ್ರವರಿ 29 ) ಕತಾರ್‌ನ ದೋಹಾದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ. ಇದರ ಪರಿಣಾಮ ಸಕಾರಾತ್ಮಕವಾಗಿಯೇ ಇರಲಿ ಅಥವಾ ಋಣಾತ್ಮಕವಾಗಿಯೇ ಇರಲಿ ಅದು ಸದ್ಯಕ್ಕೆ, ಅಸ್ಪಷ್ಟವೂ, ಗೊಂದಲಮಯವೂ ಆಗಿ ಉಳಿದಿದ್ದು ವಿಶೇಷವಾಗಿ ಭಾರತದ ಮೇಲೆ ಪರಿಣಾಮ ಬೀರಲಿದೆ.

US, Taliban sign peace deal
ಅಮೆರಿಕ ಮತ್ತು ಆಫ್ಘಾನಿಸ್ತಾನದ ತಾಲಿಬಾನ್ ಶಾಂತಿ ಒಪ್ಪಂದ
author img

By

Published : Mar 3, 2020, 8:18 AM IST

ಭಾರತದ ಮೇಲೆ ಅಮೆರಿಕ- ತಾಲಿಬಾನ್ ಶಾಂತಿ ಒಪ್ಪಂದ ಬೀರುವ ಪರಿಣಾಮಗಳು ಕಡಿಮೆ ಇಲ್ಲ

ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆ ದೃಷ್ಟಿಯಿಂದ ಭವಿಷ್ಯದಲ್ಲಿ ದೀರ್ಘಕಾಲೀನ ಪರಿಣಾಮ ಬೀರಬಹುದಾದ ಮಹತ್ವದ ಘಟ್ಟವಾಗಿ, ಅಮೆರಿಕ ಮತ್ತು ಆಫ್ಘಾನಿಸ್ತಾನದ ತಾಲಿಬಾನ್ ಶನಿವಾರ ( ಫೆಬ್ರವರಿ 29 ) ಕತಾರ್‌ನ ದೋಹಾದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ. ಇದರ ಪರಿಣಾಮ ಸಕಾರಾತ್ಮಕವಾಗಿಯೇ ಇರಲಿ ಅಥವಾ ಋಣಾತ್ಮಕವಾಗಿಯೇ ಇರಲಿ ಅದು ಸದ್ಯಕ್ಕೆ, ಅಸ್ಪಷ್ಟವೂ, ಗೊಂದಲಮಯವೂ ಆಗಿ ಉಳಿದಿದ್ದು ವಿಶೇಷವಾಗಿ ಭಾರತದ ಮೇಲೆ ಪರಿಣಾಮ ಬೀರಲಿದೆ.

9/11 ರ ಘಟನೆ ತರುವಾಯ ಸುಮಾರು ಎರಡು ದಶಕಗಳ ಕಾಲ ಅಫ್ಘಾನಿಸ್ತಾನವನ್ನು ಹರಿದು ತಿಂದ ಹಿಂಸೆ ಮತ್ತು ಭಯೋತ್ಪಾದನೆಗೆ ಇತಿಶ್ರೀ ಹಾಡಲು ಈ ಹೊಸ ಒಪ್ಪಂದ ಹೆಜ್ಜೆ ಇರಿಸುತ್ತದೆ. ಅಮೆರಿಕ ನೇತೃತ್ವದ ವಿದೇಶಿ ಸೈನಿಕರನ್ನು ಯುದ್ಧ- ಸಂತ್ರಸ್ತ ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಳ್ಳಲು ಒಪ್ಪಂದ ದಾರಿ ಮಾಡಿಕೊಡುತ್ತದೆ. ಆದರೂ, ಈ ಒಪ್ಪಂದ ಹುರಿಗೊಂಡ ವಿಧಾನ ಮಾತ್ರ ಸಮಂಜಸವಾಗಿ ಇಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಮಿತಿಯೊಂದಿಗೆ ನಂಟು ಹೊಂದಿದ ಇದು ಪ್ರಸ್ತುತ ಅಮೆರಿಕದ ಹಿತಾಸಕ್ತಿಗೆ ಆದ್ಯತೆ ನೀಡುತ್ತದೆ ಎಂಬುದಂತೂ ದೃಗ್ಗೋಚರ.

ಈ ಒಪ್ಪಂದದ ಮುನ್ನುಡಿಯೇ ಒಂದು ಪಾಠದಂತೆ ಇದ್ದು, ಒಪ್ಪಂದದ ಪ್ರಕ್ರಿಯೆಯಲ್ಲಿ ಅಡಗಿ ಕುಳಿತಿರುವ ರಾಜಕೀಯ ದೌರ್ಬಲ್ಯವನ್ನು ಸೂಚಿಸುತ್ತದೆ. ಏಕೆಂದರೆ ತಾನು ಸ್ವತಃ ಔಪಚಾರಿಕವಾಗಿ ಗುರುತಿಸದೇ ಇರುವ ‘ಆಫ್ಘಾನ್​- ತಾಲಿಬಾನ್’ ಎಂಬ ಒಂದು ಘಟಕದೊಂದಿಗೆ ಅಮೆರಿಕ ಒಪ್ಪಂದ ಮಾಡಿಕೊಂಡಿದೆ. ಆದ್ದರಿಂದ ಅಧಿಕೃತ ದಾಖಲೆ ಹೇಳುವಂತೆ ಇದು “ಅಮೆರಿಕ ಒಂದು ದೇಶ ಎಂದು ಗುರುತಿಸದೇ ಇರುವ, ತಾಲಿಬಾನ್ ಎಂದು ಕರೆಯಲಾಗುವ ಇಸ್ಲಾಮಿಕ್ ಎಮಿರೇಟ್ ಅಫ್ಘಾನಿಸ್ತಾನ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದ ನಡುವೆ ಅಫ್ಘಾನಿಸ್ತಾನಕ್ಕೆ ಶಾಂತಿ ತರುವ ಉದ್ದೇಶದಿಂದ 2020ರ ಫೆಬ್ರವರಿ 29ರಂದು ನಡೆದ ಒಪ್ಪಂದ ಆಗಿದೆ.

ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಸುರಕ್ಷತೆಗೆ ಧಕ್ಕೆ ತರುವ ತಾಲಿಬಾನಿನ ಯಾವುದೇ ಗುಂಪು ಅಥವಾ ವ್ಯಕ್ತಿ ಆಫ್ಘಾನಿಸ್ತಾನದ ನೆಲ ಬಳಸುವುದನ್ನು ತಡೆಯಲಾಗುವುದು’ ಎಂಬುದು ಶಾಂತಿ ಒಪ್ಪಂದದ ತಿರುಳು. ಇದಕ್ಕೆ ಪ್ರತಿಯಾಗಿ ಅಮೆರಿಕ ಖಾತ್ರಿ ಪಡಿಸುವಂತಹ, ಕಾರ್ಯವಿಧಾನಗಳನ್ನು ಜಾರಿ ಮಾಡುತ್ತದೆ ಮತ್ತು ಅಫ್ಘಾನಿಸ್ತಾನದಿಂದ ಎಲ್ಲಾ ವಿದೇಶಿ ಪಡೆಗಳನ್ನು ಹಿಂತೆಗೆದುಕೊಳ್ಳಲು ಸಮಯ ನಿಗದಿ ಮಾಡುತ್ತದೆ.

ಸಂಕೀರ್ಣ ಮತ್ತು ಸುದೀರ್ಘ ಎನಿಸಿದ ಈ ಸಂಧಾನ ಪ್ರಕ್ರಿಯೆಯಲ್ಲಿ, ಅಮೆರಿಕ ಕಡೆಗೂ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಅಫ್ಘಾನಿಸ್ತಾನ ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಳ್ಳದೆ ತಾಲಿಬಾನ್ ನಾಯಕತ್ವಕ್ಕೆ ಮುಖಾಮುಖಿ ಆಗಬೇಕಾಯಿತು. ಆದ್ದರಿಂದ ಈ ಒಪ್ಪಂದವು ನಂತರ ಅಧಿಕಾರಕ್ಕೆ ಬಂದ ಅಧ್ಯಕ್ಷ ಆಶ್ರಫ್ ಘನಿ ನೇತೃತ್ವದ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು ಒಳಗೊಂಡಿಲ್ಲ. ಆದರೂ ಈ ನಿರ್ಧಾರದ ವಿರುದ್ಧ ಘನಿ ಅವರ ರಾಜಕೀಯ ಪ್ರತಿಸ್ಪರ್ಧಿಯಾಗಿದ್ದ ಡಾ. ಅಬ್ದುಲ್ಲಾ ಅಬ್ದುಲ್ಲಾ ಧ್ವನಿ ಎತ್ತಿದ್ದಾರೆ.

2001 ರ ಸೆಪ್ಟೆಂಬರ್ 11ರಂದು ನಡೆದ ಪ್ರಕ್ಷುಬ್ಧ ಘಟನಾವಳಿಗಳ ನಂತರ ಭಾರತ ತಾಲಿಬಾನ್ ಜೊತೆ ಗುರುತಿಸಿಕೊಳ್ಳಲು ಹಿಂಜರಿಯುತ್ತಿರುವುದನ್ನು ಸ್ಮರಿಸಬಹುದಾಗಿದ್ದು ಬದಲಿಗೆ ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆ ಬಲಪಡಿಸಲು ಬೆಂಬಲ ನೀಡಿದೆ. ಇದಕ್ಕೂ ಮೊದಲು ತಾಲಿಬಾನ್ 1999 ರ ಡಿಸೆಂಬರ್‌ನಲ್ಲಿ ಭಾರತೀಯ ನಾಗರಿಕ ವಿಮಾನವನ್ನು ಅಪಹರಣ ಮಾಡಿತ್ತು ಮತ್ತು ಕೆಲವು ಭಯೋತ್ಪಾದಕರ ಬಿಡುಗಡೆಗೆ ಒತ್ತಡ ಹೇರಿತ್ತು. ಭಾರತ ತನ್ನ ಎದೆಯಾಳದಲ್ಲಿ ತಾಲಿಬಾನನ್ನು ವಿರೋಧಿಸಲು ಈ ವಿದ್ಯಮಾನ ಪ್ರಮುಖ ಕಾರಣ ಆಗಿದೆ.

ಇದಲ್ಲದೆ, 1990 ರ ದಶಕದ ಮಧ್ಯಭಾಗದಲ್ಲಿ ತಾಲಿಬಾನ್ ಪ್ರಾಮುಖ್ಯತೆ ಪಡೆದ ಸಮಯದಿಂದಲೂ ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನದ ಸೇನಾ ಪ್ರಧಾನ ಕಚೇರಿ ಈ ಗುಂಪಿಗೆ ನೀರೆರೆಯುತ್ತ ಬಂದಿದೆ. ಇದು ಭಾರತ- ಅಫ್ಘಾನಿಸ್ತಾನ ನೀತಿಯನ್ನು ಸಂಕೀರ್ಣಗೊಳಿಸಿದ್ದು, ಪಾಕಿಸ್ತಾನದ ಅಂಶವನ್ನು ಬೆರೆಸಿದೆ. ಶೀತಲ ಸಮರದ ವೇಳೆ ಈ ಪ್ರದೇಶದಲ್ಲಿ ರೂಪು ಪಡೆದ ಬಿಕ್ಕಟ್ಟು ಅಮೆರಿಕದ ಕಾರ್ಯತಂತ್ರದ ಭಾಗವಾಗಿ ಉಲ್ಬಣಗೊಂಡಿದೆ. ಆ ಕಾಲದಲ್ಲಿ ಅಮೆರಿಕ- ಯುಎಸ್ಎಸ್ಆರ್ ಜಿದ್ದಾಜಿದ್ದಿಯಿಂದಾಗಿ ಸೋವಿಯತ್ ರಷ್ಯಾ ಅಫ್ಘಾನಿಸ್ತಾನವನ್ನು ಆಕ್ರಮಣ ಮಾಡಿತು. ಪರಿಣಾಮ 1980 ರ ದಶಕದಲ್ಲಿ ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಅಧಿಕಾರದಲ್ಲಿ ಇದ್ದಾಗ ಆಫ್ಘನ್ ಮುಜಾಹಿದ್ದೀನ್ ತಲೆ ಎತ್ತಿತು.

1980ರಿಂದ ಇತ್ತೀಚೆಗೆ ಪ್ರಮುಖ ದೇಶಗಳು ಮತ್ತು ಅವುಗಳ ಪ್ರಾದೇಶಿಕ ಮಿತ್ರರಾಷ್ಟ್ರಗಳು ಅಥವಾ ಪಾಲುದಾರ ದೇಶಗಳ ನಡುವಿನ ಹಲವು ಹಂತದ ಹಗ್ಗ ಜಗ್ಗಾಟಗಳಿಗೆ ಅಫ್ಘಾನಿಸ್ತಾನದ ಜನ ಭಾರಿ ಬೆಲೆ ತೆತ್ತಿದ್ದಾರೆ. ಅಮೆರಿಕ- ಸೋವಿಯತ್ ಸಂಘರ್ಷ ಮುಗಿದಿದ್ದು, ಇರಾನ್- ಸೌದಿ ಧಾರ್ಮಿಕವಾಗಿ ವಿಭಜನೆಯಾಗಿದ್ದು, ಜಿಹಾದಿ ಉತ್ಸಾಹಕ್ಕೆ ಪಾಕಿಸ್ತಾನ ನೀರೆರೆದಿದ್ದು ಮತ್ತು ಈಗ ದಕ್ಷಿಣ ಏಷ್ಯಾದ ಭೌಗೋಳಿಕ-ರಾಜಕೀಯ ಗಮನವನ್ನು ಇನ್ನಿಲ್ಲದಂತೆ ಸೆಳೆದಿರುವ ಬಿ ಆರ್ ಐ ನಲ್ಲಿ (ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್) ಚೀನಾ ಹೂಡಿಕೆ ಮಾಡಿದ್ದು ಇವೆಲ್ಲವುಗಳಿಂದಾಗಿ ತಾಲಿಬಾನ್ ಕುರಿತಂತೆ ಭಾರತ ತನ್ನದೇ ಆದ ಹಿತಾಸಕ್ತಿ ಬೆಳೆಸಿಕೊಳ್ಳಲು ಕಾರಣ ಆಗಿದೆ.

ಫೆಬ್ರವರಿ 29 ರ ಶಾಂತಿ ಒಪ್ಪಂದಕ್ಕೆ ದೆಹಲಿ ಎಚ್ಚರದ ಪ್ರತಿಕ್ರಿಯೆ ನೀಡಿದ್ದು ಅದು ಹೀಗೆ ಇದೆ: "ಅಫ್ಘಾನಿಸ್ತಾನದಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆ ತರುವ ಎಲ್ಲ ಅವಕಾಶಗಳಿಗೆ ಬೆಂಬಲ ನೀಡುವುದು ಭಾರತದ ಸ್ಥಿರ ನೀತಿ ಆಗಿದೆ; ಹಿಂಸಾಚಾರ ಕೊನೆಗೊಳಿಸಿ; ಅಂತಾರಾಷ್ಟ್ರೀಯ ಭಯೋತ್ಪಾದನೆ ಜೊತೆಗಗಿನ ನಂಟು ಕಡಿತಗೊಳಿಸಿ ಮತ್ತು ಶಾಶ್ವತ ರಾಜಕೀಯ ಸಂಧಾನಕ್ಕೆ ಕಾರಣ ಆಗುವ ಮತ್ತು ಅಫ್ಘಾನಿಸ್ತಾನವೇ ನೇತೃತ್ವ ವಹಿಸಿದ, ಅಫ್ಘಾನಿಸ್ತಾನದ ಒಡೆತನ ಇರುವ ಹಾಗೂ ಅಫ್ಘಾನಿಸ್ತಾನದ ನಿಯಂತ್ರಣ ಹೊಂದಿದ ಪ್ರಕ್ರಿಯೆಗೆ ಭಾರತ ಬೆಂಬಲ ನೀಡಲಿದೆ’ ಎಂದು ಹೇಳಿದೆ. ಮುಂದುವರಿದು ಅದು "ಅಫ್ಘಾನಿಸ್ತಾನ ಸಮಾಜದ ಎಲ್ಲಾ ವರ್ಗಗಳ ಹಿತಾಸಕ್ತಿ ಕಾಪಾಡುವ ಶಾಂತಿಯುತ, ಪ್ರಜಾಸತ್ತಾತ್ಮಕ ಮತ್ತು ಸಮೃದ್ಧ ಭವಿಷ್ಯ ಸಾಕಾರಗೊಳಿಸಲು ನೆರೆಯ ದೇಶವಾಗಿ ಭಾರತವು, ಆಫ್ಘಾನಿಸ್ತಾನ ಸರ್ಕಾರ ಮತ್ತು ಅಲ್ಲಿನ ಜನರಿಗೆ ಎಲ್ಲಾ ರೀತಿಯ ಬೆಂಬಲ ನೀಡುತ್ತಲೇ ಇರುತ್ತದೆ." ಎಂದು ಉಲ್ಲೇಖಿಸಿದೆ. ಹೀಗೆ ಅಫ್ಘಾನಿಸ್ತಾನ ಸರ್ಕಾರಕ್ಕೆ ದೆಹಲಿ ಒತ್ತು ನೀಡಿರುವುದು ಸಂದರ್ಭೋಚಿತವಾಗಿ ಇದೆ.

ಫೆಬ್ರವರಿ 29 ರ ಒಪ್ಪಂದ ತಾಲಿಬಾನ್‌ ಬೇಡಿಕೆಗಳಿಗೆ ಅನುಗುಣವಾಗಿ ಇದ್ದು ಅಫ್ಘಾನಿಸ್ತಾನ ಸರ್ಕಾರವನ್ನು ನಿರ್ಲಕ್ಷಿಸಿದೆ. ಈ ಒಪ್ಪಂದಕ್ಕೂ, ಕಾಬೂಲ್ ಸರ್ಕಾರಕ್ಕೂ ಅಷ್ಟಾಗಿ ಸಂಬಂಧ ಇಲ್ಲ. 18 ವರ್ಷಗಳ ಕಾಲ ತನ್ನ ವಿರುದ್ಧ ಯುದ್ಧ ನಡೆಸಿದ, ಅಮೂಲ್ಯ ಜೀವಗಳನ್ನು ಮತ್ತು ಸಂಪತ್ತನ್ನು ಬಲಿಪಡೆದ ತಾಲಿಬಾನ್ ಜೊತೆಗೆ ಅಮೆರಿಕ ಒಡಂಬಡಿಕೆ ಮಾಡಿಕೊಂಡಿದೆ.

ತಾಲಿಬಾನ್ ಮತ್ತು ಅಮೆರಿಕಕ್ಕೆ ಅನುಕೂಲಕರವಾಗಿ ಇರುವ ಈ ಒಪ್ಪಂದ ಅಮೆರಿಕ ಮತ್ತು ಅದರ ‘ಮಿತ್ರರಾಷ್ಟ್ರಗಳ’ ಮೇಲೆ ದಾಳಿ ಮಾಡುವುದಿಲ್ಲ ಎನ್ನುತ್ತಿದ್ದು ಭಾರತಕ್ಕೆ ಇದು ಅನ್ವಯ ಆಗುವ ಸೂತ್ರದಂತೆ ತೋರುತ್ತಿಲ್ಲ. ಹೀಗಾಗಿ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿಯೇ ಇರುವ ಈ ಅಂಶಗಳು ಭಾರತದ ವಿರುದ್ಧದ ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಸಾಧ್ಯತೆಗಳು ಹೆಚ್ಚಾಗಿ ಇವೆ ಮತ್ತು ಇಲ್ಲಿ ಪಾಕಿಸ್ತಾನ-ತಾಲಿಬಾನಿನ ಸಾಂಪ್ರದಾಯಿಕ ನಂಟು ಕಳವಳಕ್ಕೆ ಕಾರಣ ಆಗಿದೆ.

ದಾಖಲೆಗೆ ಸಹಿ ಹಾಕಿದ ಮೊದಲ ದಿನವೇ ಫೆಬ್ರವರಿ 29 ರ ಒಪ್ಪಂದದ ದೌರ್ಬಲ್ಯ ಗೋಚರಿಸಿದೆ. ಒಪ್ಪಂದದಲ್ಲಿ ಉಲ್ಲೇಖಿಸಿರುವಂತೆ ವಾಷಿಂಗ್ಟನ್ ಬಯಸಿದ ರೀತಿಯಲ್ಲಿ ಖೈದಿಗಳ ವಿನಿಮಯ ಮಾಡುವುದು ಸಾಧ್ಯ ಇಲ್ಲ ಎಂಬ ಸೂಚನೆಯನ್ನು ಅಧ್ಯಕ್ಷ ಘನಿ ಈಗಾಗಲೇ ನೀಡಿದ್ದಾರೆ.

ಈ ಬೆಳವಣಿಗೆಗಳಿಂದಾಗಿ ದೆಹಲಿ ಹೆಚ್ಚು ಗಂಭೀರವಾಗಿ ಇರಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಕಾರಣ,,ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಪುನರುತ್ಥಾನದಿಂದ ಐ ಎಸ್ ಐ ಎಸ್ (ಇಸ್ಲಾಮಿಕ್ ಸ್ಟೇಟ್) ನಂತಹ ಗುಂಪುಗಳಿಗೆ ಮತ್ತು ಅಲ್-ಖೈದಾದ ಪಳೆಯುಳಿಕೆಗಳನ್ನು ಮರು ಜೋಡಿಸಲು ಹೆಚ್ಚಿನ ಅವಕಾಶ ಹಾಗೂ ಬೆಂಬಲ ಒದಗಿಸುತ್ತದೆ. ಇಂತಹ ಸಂದರ್ಭದಲ್ಲಿಯೇ, ಫೆಬ್ರವರಿ ಅಂತ್ಯದ ಹೊತ್ತಿಗೆ ರಾಜಕೀಯ ಮತ್ತು ಕೋಮುದ್ವೇಷದಿಂದಾಗಿ ದೆಹಲಿಯಲ್ಲಿ ನಡೆದ ಹಿಂಸಾಚಾರ 45 ಜನರನ್ನು ಬಲಿ ಪಡೆದಿದ್ದು ಅದು ಮುಸ್ಲಿಂ ನಾಗರಿಕರನ್ನು ಗುರಿಯಾಗಿ ಇರಿಸಿಕೊಂಡಿರುವುದನ್ನು ಇಸ್ಲಾಮಿಕ್ ಸ್ಟೇಟ್ ಗಮನಿಸಿದೆ.

ಈಶಾನ್ಯ ದೆಹಲಿಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಜನರು ಕ್ರೂರವಾಗಿ ಥಳಿಸಿದ ಭಯಾನಕ ಚಿತ್ರವನ್ನು ಐಸಿಸ್‌ನ ಸೈಬರ್ ವಿಂಗ್ ಬಳಸಿದ್ದು, ಇಂತಹ ಕಿರುಕುಳದ ವಿರುದ್ಧ ವಿಲಾಯತ್ ಅಲ್-ಹಿಂದ್ ಪ್ರತೀಕಾರಕ್ಕೆ ಮುಂದಾಗಬೇಕು ಎಂದು ಕರೆ ನೀಡಿದೆ. ಇಲ್ಲಿಯವರೆಗೆ ಐ ಎಸ್ ಐ ಎಸ್ ಭಾರತದಿಂದ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳುವಲ್ಲಿ ಅಷ್ಟೇನೂ ಯಶ ಕಂಡಿರದೆ ಇದ್ದರೂ ಭಾರತದ ಆಂತರಿಕ ಭದ್ರತೆ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ.

ಫೆಬ್ರವರಿ 29ರ ಅಮೆರಿಕ - ತಾಲಿಬಾನ್ ಶಾಂತಿ ಒಪ್ಪಂದ ದುರ್ಬಲವಾಗಿದ್ದು ಅದರ ಉದ್ದೇಶ ಸೀಮಿತ ವ್ಯಾಪ್ತಿಯದ್ದಾಗಿದೆ. ಆದರೆ ಅದರ ದೀರ್ಘಾವಧಿಯ ಪರಿಣಾಮ ಅನೇಕರಿಗೆ ಸಕಾರಾತ್ಮಕವಾಗಿ ತೋರುತ್ತಿಲ್ಲ ಮತ್ತು ಶಾಂತಿ ಸ್ಥಾಪನೆಗೆ ಅನುಕೂಲಕರವಾಗಿ ಇರುವಂತೆ ಕಾಣುತ್ತಿಲ್ಲ. ಆಫ್ಘನ್ ದಿಗಂತದ ಕೊನೆಯಲ್ಲಿ ಇಣುಕುತ್ತಿದ್ದ ಬೆಳಕು ಅಯ್ಯೋ, ಮಸುಕಾಗುತ್ತಿದೆ.

ಸಿ ಉದಯ್ ಭಾಸ್ಕರ್ ( ನೌಕಾಪಡೆಯ ನಿವೃತ್ತ ಅಧಿಕಾರಿ )

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.