ನವದೆಹಲಿ: ದೇಶಾದ್ಯಂತ ಲಾಕ್ಡೌನ್ನಿಂದಾಗಿ ಬಡವರು ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಕಡಿಮೆ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ನೀಡುವ ಯೋಜನೆ ಜಾರಿಗೊಳಿಸಿದೆ. ಈ ನಿರ್ಧಾರಕ್ಕೆ ಸೋನಿಯಾ ಗಾಂಧಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಕೂಡ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಸೋನಿಯಾ ಗಾಂಧಿ ಇದೀಗ ಮತ್ತೊಮ್ಮೆ ಪತ್ರ ಬರೆದು, ಲಾಕ್ಡೌನ್ ವೇಳೆ ದೇಶದ ಯಾವುದೇ ಪ್ರಜೆ ಹಸಿವಿನಿಂದ ತೊಂದರೆಗೆ ಸಿಲುಕಬಾರದು ಎಂದಿದ್ದಾರೆ.
ಕಡಿಮೆ ಬೆಲೆಯಲ್ಲಿ ನೀಡುವ ರೇಷನ್ ಅನ್ನು ಮುಂದಿನ ಸೆಪ್ಟೆಂಬರ್ವರೆಗೂ ವಿಸ್ತರಿಸಬೇಕು. ದೇಶದಲ್ಲಿ ಲಕ್ಷಾಂತರ ಜನರು ಆಹಾರ ತೊಂದರೆಯಿಂದ ಬಳಲುತ್ತಿದ್ದಾರೆ. ಅವರಿಗೆ ಯಾವ ರೀತಿಯಲ್ಲೂ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಹಿರಿಯ ಕಾಂಗ್ರೆಸ್ ನಾಯಕಿ ಸಲಹೆ ನೀಡಿದ್ದಾರೆ.