ETV Bharat / bharat

ತಂದೆಯ ಮೇಲೆ ಹಲ್ಲೆ ಮಾಡಿ, ತನ್ನ ಕತ್ತನ್ನೂ ಸೀಳಿಕೊಂಡ ಪಬ್​ಜಿ ವ್ಯಸನಿ!

ಪಬ್​ಜಿ ವ್ಯಸನ ದೇಶದಲ್ಲಿ ತೀವ್ರವಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಅಪರಾಧ ಪ್ರಕರಣಗಳು ದಾಖಲಾಗುತ್ತಿರುತ್ತವೆ. ಅಂಥದ್ದೇ ಒಂದು ಅಪರಾಧ ಪ್ರಕರಣ ಈಗ ಮೀರತ್​ನಲ್ಲಿ ನಡೆದಿದೆ.

representational image
ಪ್ರಾತಿನಿಧಿಕ ಚಿತ್ರ
author img

By

Published : Oct 19, 2020, 12:33 PM IST

ಮೀರತ್ (ಉತ್ತರ ಪ್ರದೇಶ): ಚೀನಾ ಮೂಲದ ಮೊಬೈಲ್ ಗೇಮ್ ಪಬ್​ಜಿ ಆಡಬಾರದು ಎಂದು ಹೇಳಿದ್ದಕ್ಕೆ ತಂದೆಯ ಕುತ್ತಿಗೆ ಮೇಲೆ ಹಲ್ಲೆ ಮಾಡಿ ನಂತರ ತನ್ನ ಕುತ್ತಿಗೆ ಸೀಳಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ.

ಖಾರ್ಖೋಡಾ ಪಟ್ಟಣದ ಜಮ್ನಾಗರದಲ್ಲಿ ಘಟನೆ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಆಮೀರ್ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ತಂದೆ ಹಾಗೂ ಮಗನನ್ನು ಮೀರತ್ ವೈದ್ಯಕೀಯ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಇಬ್ಬರ ಸ್ಥಿತಿಯೂ ಗಂಭೀರವಾಗಿದೆ.

ಪಬ್​ಜಿ ಗೇಮಿಂಗ್ ಆ್ಯಪ್​ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದ ಕಾರಣಕ್ಕೆ ತಂದೆ ಇರ್ಫಾನ್ ಮಗನನ್ನು ಪ್ರಶ್ನಿಸಿದ್ದನು. ಈ ವೇಳೆ ತಂದೆಯ ಮಾತುಗಳಿಂದ ಬೇಸರಗೊಂಡ ಆಮೀರ್ ಚಾಕುವಿನಿಂದ ಹಲ್ಲೆ ಮಾಡಿ ತನ್ನ ಕುತ್ತಿಗೆಯನ್ನೂ ಸೀಳಿಕೊಂಡಿದ್ದಾನೆ ಎಂದು ಸರ್ಕಲ್ ಇನ್ಸ್​ಪೆಕ್ಟರ್ ದೇವೇಶ್ ಸಿಂಗ್ ಹೇಳಿದ್ದಾರೆ.

ಆರೋಪಿ ಮಾದಕ ವ್ಯಸನಿಯಾಗಿದ್ದು, ಮಾದಕ ವ್ಯಸಕ್ಕೂ ಚಿಕಿತ್ಸೆ ಪಡೆಯುತ್ತಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ ಎಂದು ಇನ್ಸ್​​ಪೆಕ್ಟರ್ ಅರವಿಂದ ಮೋಹನ್ ಶರ್ಮಾ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.