ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ (ಎಲ್ಒಸಿ)ಯಲ್ಲಿ ಪಾಕಿಸ್ತಾನ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಬುಧವಾರ ಓರ್ವ ಭಾರತೀಯ ಸೈನಿಕ ಹುತಾತ್ಮ ಆಗಿರುವುದಾಗಿ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಸ್ಥಾನದ ಜೋಧ್ಪುರ್ ನಿವಾಸಿ ಸಿಪಾಯಿ ಲಕ್ಷ್ಮಣ್ ಗುಂಡಿನ ದಾಳಿಯಿಂದ ಹುತಾತ್ಮನಾಗಿರುವ ಸೈನಿಕ. ಈ ವರ್ಷದಲ್ಲಿ ಪಾಕಿಸ್ತಾನದ ಸೈನಿಕರು ನಡೆಸಿದ ಕದನ ವಿರಾಮ ಉಲ್ಲಂಘನೆಯಲ್ಲಿ ಹುತಾತ್ಮನಾದ ನಾಲ್ಕನೇ ಸೈನಿಕ ಇವರಾಗಿದ್ದಾರೆ.
ಪಾಕಿಸ್ತಾನ ಸೇನೆಯು ರಾಜೌರಿಯ ಸುಂದರಬಾನಿ ಸೆಕ್ಟರ್‌ನಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಶತ್ರುಗಳ ಗುಂಡಿನ ದಾಳಿಗೆ ನಮ್ಮ ಸೈನ್ಯವು ಬಲವಾಗಿ ಪ್ರತಿಕ್ರಿಯಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಸಿಪಾಯಿ ಲಕ್ಷ್ಮಣ್ ಓರ್ವ ಧೈರ್ಯಶಾಲಿ ಮತ್ತು ಪ್ರಾಮಾಣಿಕ ಸೈನಿಕ. ಅವರ ತ್ಯಾಗ ಮತ್ತು ಕರ್ತವ್ಯ ನಿಷ್ಠೆಗಾಗಿ ರಾಷ್ಟ್ರವು ಯಾವಾಗಲೂ ಅವರಿಗೆ ಋಣಿಯಾಗಿರುತ್ತದೆ" ಎಂದು ಅವರು ಸಂತಾಪ ಸೂಚಿಸಿದರು.
ಈ ಹಿಂದೆ ಜನವರಿಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದವರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಸೇನಾ ಸಿಬ್ಬಂದಿ ಬಲಿಯಾಗಿದ್ದರು.
ಇದನ್ನೂ ಓದಿ...ನಾಡಿಗೆಲ್ಲ ಮಾದರಿ ಈ ನಾರಿಯ ಮನೋಬಲ.. 22 ವರ್ಷಗಳಿಂದ ಸೈಕಲ್‌ನಲ್ಲಿ ತಿರುಗಿ ಹಾಲು ಮಾರಾಟ..