ETV Bharat / bharat

ಲಾಭದಾಯಕ ಕೃಷಿಗಾಗಿ ರೈತರಿಗೆ ಸೋಲಾರ್ ಶೇರಿಂಗ್: ಏನಿದು? ಇಲ್ಲಿದೆ ಮಾಹಿತಿ.. - solar sharing for profitable farming

ದೇಶದಲ್ಲಿ ಉತ್ಪತ್ತಿಯಾಗುವ ಶೇ 15ರಷ್ಟು ಸೌರವಿದ್ಯುತ್ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಉತ್ಪಾದನೆ ಆಗುತ್ತದೆ. ಒಂದೇ ಪ್ರದೇಶದಲ್ಲಿ ಸೌರಶಕ್ತಿ ಮತ್ತು ಕೃಷಿ ಎರಡನ್ನೂ ಅಭಿವೃದ್ಧಿಪಡಿಸಿದರೆ ಅದು ರೈತರಿಗೆ ವರದಾನವಾಗಿ ಪರಿಣಮಿಸುತ್ತದೆ.

farming
ಲಾಭದಾಯಕ ಕೃಷಿಗಾಗಿ ಸೋಲಾರ್ ಶೇರಿಂಗ್
author img

By

Published : Oct 13, 2020, 10:44 AM IST

ಹೈದರಾಬಾದ್​: ಕೃಷಿಯೊಟ್ಟಿಗೆ ಕೃಷಿಭೂಮಿಯನ್ನು ಸೌರಶಕ್ತಿಗಾಗಿ ಬಳಸುವುದರಿಂದ, ರೈತರು ಹೆಚ್ಚಿನ ಲಾಭ ಪಡೆಯಬಹುದು. ಇದು ಹಲವಾರು ದೇಶಗಳಲ್ಲಿ ಯಶಸ್ವಿಯಾಗಿದೆ. ಅಗ್ರಿವೋಲ್ಟೈಕ್ಸ್ ಅಥವಾ ಅಗ್ರೊಫೋಟೋವೋಲ್ಟೈಕ್ಸ್ ಅಥವಾ ಸೌರ ಹಂಚಿಕೆ ಎಂದು ಕರೆಯಲಾಗುವ ಈ ಪ್ರಕ್ರಿಯೆಯನ್ನು ಎನ್​ಎಸ್​‌ಇಎಫ್​ಐ ಅಭಿವೃದ್ಧಿಪಡಿಸುತ್ತಿದೆ. ಯೋಜನೆಯ ಅಂತಿಮ ಪ್ರಸ್ತಾವನೆಯನ್ನು ಎರಡು ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ.

ರಾಷ್ಟ್ರೀಯ ಸೌರಶಕ್ತಿ ಒಕ್ಕೂಟದ (ಎನ್​ಎಸ್​‌ಇಎಫ್​ಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಬ್ರಹ್ಮಣ್ಯಂ ಪುಲಿಪಾಕ ಅವರು ಸಂದರ್ಶನವೊಂದರಲ್ಲಿ ಸೌರಶಕ್ತಿಯ ಪರಿಣಾಮಕಾರಿ ಬಳಕೆ ಬಗ್ಗೆ ಮಾತನಾಡಿದ್ದಾರೆ.

ವಿಶಿಷ್ಟ ಲಕ್ಷಣಗಳು:

ದೇಶದಲ್ಲಿ ಉತ್ಪತ್ತಿಯಾಗುವ ಶೇ. 15ರಷ್ಟು ಸೌರವಿದ್ಯುತ್ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಉತ್ಪಾದನೆ ಆಗುತ್ತದೆ. ಒಂದೇ ಪ್ರದೇಶದಲ್ಲಿ ಸೌರಶಕ್ತಿ ಮತ್ತು ಕೃಷಿ ಎರಡನ್ನೂ ಅಭಿವೃದ್ಧಿಪಡಿಸಿದರೆ ಅದು ರೈತರಿಗೆ ವರದಾನವಾಗಿ ಪರಿಣಮಿಸುತ್ತದೆ. ರೈತರು ಈ ನಿಟ್ಟಿನಲ್ಲಿ ಸಾಗಲು ರಾಜ್ಯ ಸರ್ಕಾರಗಳು ರೈತರಿಗೆ ಪ್ರೋತ್ಸಾಹ ನೀಡುವ ಅಗತ್ಯ ಇದೆ.

ಕೃಷಿ ಬೆಳೆಗಳು:

ಅಲೋವೆರಾ, ನಿಂಬೆಹುಲ್ಲು, ಪರಿಮಳಯುಕ್ತ ಸಸ್ಯಗಳು, ಔಷಧೀಯ ಗಿಡಮೂಲಿಕೆಗಳು, ಎಲೆಗಳಿರುವ ಸೊಪ್ಪುಗಳು ಹಾಗೂ ಹಣ್ಣುಗಳನ್ನು ಸೌರ ಫಲಕಗಳ ಅಡಿಯಲ್ಲಿ ಬೆಳೆಸಬಹುದು. ಫಲಕಗಳ ಛಾವಣಿಯನ್ನು ಎತ್ತರದಲ್ಲಿ ನಿರ್ಮಿಸುವ ಮೂಲಕ ಸಾಸಿವೆಯಂತಹ ಬೆಳೆಗಳನ್ನು ಕೂಡ ಅದರಡಿ ಬೆಳೆಯಬಹುದು. ಚೀನಾ, ಜರ್ಮನಿ, ಫ್ರಾನ್ಸ್ ಮತ್ತು ಇಟಲಿ ದೇಶಗಳು ಈ ಬಗೆಯ ಫಲಕಗಳ ಅಡಿ ಹೂಕೋಸು, ಎಲೆಕೋಸು ಹಾಗೂ ದ್ರಾಕ್ಷಿಯನ್ನು ಬೆಳೆಯುತ್ತಿವೆ. ಇಂತಹ ಜಮೀನುಗಳನ್ನು ಬಾಡಿಗೆಗೆ ಅಥವಾ ಗುತ್ತಿಗೆಗೆ ಕೂಡ ನೀಡಬಹುದು.

ಸೌರ ಹಂಚಿಕೆ ಎಂದರೇನು?:

ಇಲ್ಲಿಯವರೆಗೆ, ಕೃಷಿಯೇತರ ಭೂಮಿಯಲ್ಲಿ ಮಾತ್ರ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿತ್ತು. ಸೌರ ಫಲಕಗಳು ಸಾಮಾನ್ಯವಾಗಿ 1 ರಿಂದ 1.5 ಇಂಚು ಅಡಿ ಎತ್ತರ ಇರುತ್ತಿದ್ದವು. ಆಗ್ರೋಫೋಟೊವೋಲ್ಟೈಕ್ಸ್​​ನಲ್ಲಿ, ವಿದ್ಯುತ್ ಉತ್ಪಾದಿಸಲು ಫಲಕಗಳನ್ನು 3 ರಿಂದ 4 ಅಡಿ ಎತ್ತರದಲ್ಲಿ ಸ್ಥಾಪಿಸಲಾಗುತ್ತದೆ. ಜಮೀನಿನಲ್ಲಿ ಮೊದಲಿನಂತೆಯೇ ಕೃಷಿ ಮಾಡಬಹುದು. ಈ ಬಗೆಯ ಫಲಕಗಳ ಅಳವಡಿಕೆ ರೈತರಿಗೆ ಲಾಭದಾಯಕವಾಗಿರುತ್ತದೆ. ಹೆಚ್ಚುವರಿ ವಿದ್ಯುತ್ ಅನ್ನು ಪವರ್ ಗ್ರಿಡ್‌ಗೆ ಸರಬರಾಜು ಮಾಡಿ ಸ್ವಲ್ಪ ಆದಾಯವನ್ನು ಕೂಡ ಗಳಿಸಬಹುದು. ಸೌರಶಕ್ತಿ ಎಂಬುದು ಪರಿಸರ ಸ್ನೇಹಿ ಆಯ್ಕೆಯಾಗಿರುವುದು ಕೂಡ ಮತ್ತೊಂದು ಲಾಭ. ಅಲ್ಲದೆ, ಸಾಂಪ್ರದಾಯಿಕ ವಿಧಾನಗಳಿಗಿಂತಲೂ ಸೌರ ವಿದ್ಯುತ್ ಉತ್ಪಾದನೆ ಅಗ್ಗವಾದುದು. ಫಲಕಗಳನ್ನು ಸ್ವಚ್ಛಗೊಳಿಸಲು ಬಳಸುವ ನೀರನ್ನೇ ಅದರಡಿ ಇರುವ ಬೆಳೆಗಳಿಗೂ ಹಾಯಿಸಬಹುದು.

2022 ರ ವೇಳೆಗೆ 25,750 ಮೆಗಾವ್ಯಾಟ್ ನಷ್ಟು ಸೌರ ಮತ್ತು ಇತರ ನವೀಕರಿಸಬಹುದಾದ ಶಕ್ತಿಗಳ ಉತ್ಪಾದನೆಗಾಗಿ ಕೇಂದ್ರ ಸರ್ಕಾರ ಕಿಸಾನ್ ಉರ್ಜಾ ಸುರಕ್ಷಾ ಏವಂ ಉತ್ತಾನ್ ಮಹಾಭಿಯಾನ್ (ಪಿಎಂ ಕುಸುಮ್) ಎಂಬ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಭಾಗವಾಗಿ 20 ಲಕ್ಷ ಆಫ್ - ಗ್ರಿಡ್ ಮತ್ತು 15 ಲಕ್ಷ ಆನ್ - ಗ್ರಿಡ್ ಪಂಪ್‌ಗಳನ್ನು ಅಳವಡಿಸಲಾಗುತ್ತಿದೆ. ಸೌರಶಕ್ತಿಯ ಮೂಲಕ 2022 ರ ವೇಳೆಗೆ 100 ಗಿಗಾ ವ್ಯಾಟ್ ಮತ್ತು 2030 ರ ವೇಳೆಗೆ 350 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಕೇಂದ್ರ ಸರ್ಕಾರದ್ದಾಗಿದೆ. ಕೃಷಿ ಭೂಮಿಯನ್ನು ವಿದ್ಯುತ್ ಉತ್ಪಾದನೆಗೆ ಬಳಸಿದರೆ ಇದನ್ನು ಉತ್ತಮ ರೀತಿಯಲ್ಲಿ ಸಾಧಿಸಬಹುದು. 4 ಎಕರೆ ಭೂಮಿಯಲ್ಲಿ 1 ಮೆಗಾವ್ಯಾಟ್ ಸೌರಶಕ್ತಿ ಉತ್ಪಾದನೆ ಮಾಡಬಹುದು. 1 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ, 4,000 ಎಕರೆ ಭೂಮಿ ಅಗತ್ಯ ಇದೆ.

ಸಂಶೋಧನೆ ಮತ್ತು ಅನುಷ್ಠಾನ:

ಜರ್ಮನಿಯ ಸಹಯೋಗದೊಂದಿಗೆ ಎನ್​ಎಸ್​​ಇಎಫ್​ಐ ಕೃಷಿ ವಿಜ್ಞಾನದ ಬಗ್ಗೆ ಸಂಶೋಧನೆ ನಡೆಸಿದೆ. ಶೇ 1 ರಷ್ಟು ಕೃಷಿ ಭೂಮಿಯನ್ನು ಬಳಸುವುದರ ಮೂಲಕ, ನಾವು 350 ಗಿಗಾ ವ್ಯಾಟ್ ಸೌರಶಕ್ತಿಯನ್ನು ಉತ್ಪಾದಿಸಬಹುದು. ಯೋಜನೆಯ ಅನುಷ್ಠಾನಕ್ಕಾಗಿ ಪರಿಣಾಮಕಾರಿ ಮಾರ್ಗಸೂಚಿಗಳನ್ನು ರೂಪಿಸುವ ಕೆಲಸದಲ್ಲಿ ನಿರತವಾಗಿದೆ ಸಂಸ್ಥೆ. ಈ ಪ್ರಯೋಗಕ್ಕಾಗಿ ಎನ್​ಎಸ್​​ಇಎಫ್​ಐ ಈಗಾಗಲೇ ಒಂದೆರಡು ಸ್ಥಳಗಳಲ್ಲಿ ಪ್ರಯೋಗವನ್ನು ಕೂಡ ಮಾಡಿದೆ. ಜೋಧ್‌ಪುರದ ಕೇಂದ್ರ ಶುಷ್ಕ ವಲಯ ಸಂಶೋಧನಾ ಸಂಸ್ಥೆ, ಅಗ್ರಿವೋಲ್ಟೈಕ್ಸ್ ಬಳಕೆ ಮಾಡಿ ಬದನೆಕಾಯಿ, ಪಡವಲಕಾಯಿ, ಬೆಂಡೆಕಾಯಿ ಹಾಗೂ ಅಲೋವೆರಾ ಬೆಳೆಗಳನ್ನು ಬೆಳೆದಿದೆ. ಕೆಲವು ಖಾಸಗಿ ಕಂಪನಿಗಳು ಸಹ ಈ ನಿಟ್ಟಿನಲ್ಲಿ ಸಾಗುತ್ತಿವೆ. ಮಹೀಂದ್ರಾ ಸಮೂಹ ತೆಲಂಗಾಣದ ತಾಂಡೂರಿನಲ್ಲಿ ಅಂತಹ ಒಂದು ಕೃಷಿ- ವಿದ್ಯುತ್ ಉತ್ಪಾದನಾ ಘಟಕವನ್ನು ನಿರ್ವಹಣೆ ಮಾಡುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.