ETV Bharat / bharat

ಕೊರೊನಾ ತಪ್ಪು ಸಂದೇಶ ಹತ್ತಿಕ್ಕಲು ಸಾಮಾಜಿಕ ಮಾಧ್ಯಮ ಕಂಪನಿಗಳ ಕ್ರಮ..

ತಪ್ಪು ಸಂದೇಶ ಹರಡುವುದನ್ನು ತಡೆಯುವಲ್ಲಿ ವೈಫಲ್ಯತೆ ತೋರುವ ಕಾರಣಕ್ಕೆ ಸಾಮಾಜಿಕ ಮಾಧ್ಯಮ ಕಂಪನಿಗಳ ಮೇಲೆ ಸದಾ ಗಮನ ಇರುತ್ತದೆ. ಆದರೆ, ಈ ಸಲ ವೈಫಲ್ಯತೆಯೇ ಪ್ರಮುಖ ವಿಷಯವಾಗಿಲ್ಲ. ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗ ಈ ಕಂಪನಿಗಳ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆಯಷ್ಟೇ ಅಲ್ಲ, ತಮ್ಮ ಹಿಂದಿನ ತಪ್ಪುಗಳನ್ನು ತಿದ್ದುಕೊಳ್ಳುವ ಅವಕಾಶವನ್ನೂ ಅವಕ್ಕೆ ಕೊಟ್ಟಿದೆ.

author img

By

Published : Apr 5, 2020, 12:18 PM IST

Social media companies are taking steps
ಸಾಮಾಜಿಕ ಮಾಧ್ಯಮ ಕಂಪನಿಗಳ ಕ್ರಮ

ಹೈದರಾಬಾದ್:‌ ನಾವು ಮನುಷ್ಯರೆಲ್ಲ ಸಾಮಾಜಿಕ ಜೀವಿಗಳು. ನಾವು ಮನುಷ್ಯರ ಸಂಪರ್ಕಕ್ಕೆ ಹಂಬಲಿಸುತ್ತೇವೆ, ಅದು ನಮ್ಮ ಸ್ವಭಾವದಲ್ಲಿಯೇ ಇದೆ. ಅನಾದಿ ಕಾಲದಿಂದಲೂ ಚಿಕ್ಕದಿರಲಿ ದೊಡ್ಡದಿರಲಿ, ಮನುಷ್ಯ ಸದಾ ಬದುಕಿದ್ದೇ ಗುಂಪುಗಳಲ್ಲಿ. ಆದರೆ, ಕಾಲ ಬದಲಾಯಿತು. ಈಗ ನಾವು ಅದೆಂತಹ ಸಮಯದಲ್ಲಿ ಬದುಕುತ್ತಿದ್ದೇವೆಂದರೆ, ನಾವು ಉಳಿದುಕೊಂಡು ಬರಲು ಹಾಗೂ ವಿಕಾಸವಾಗಲು ಯಾವ ಮಾನವ ಸಂಸರ್ಗ ಆದಿಮಾನವನಿಗೆ ನೆರವಾಗಿತ್ತೋ, ಇವತ್ತು ಅದೇ ಮಾನವರ ಸಂಸರ್ಗ ನಮ್ಮನ್ನು ಭೀಕರ ಅಂತ್ಯದತ್ತ ಕೊಂಡೊಯ್ಯುತ್ತಿದೆ.

ನವ ಕೊರೊನಾ ವೈರಸ್‌ ನಮ್ಮೆಲ್ಲ ವಾಸ್ತವಗಳನ್ನು ಬದಲಿಸಿಬಿಟ್ಟಿದೆ. ಮಾನವನ ಹೆಮ್ಮೆಯನ್ನು ಹೊಸಗಿ ಹಾಕಿರುವ ಪ್ರಕೃತಿ ನಿಯಂತ್ರಣ ತನ್ನ ಕೈಲಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಒಂದು ವೇಳೆ ಪ್ರಕೃತಿಮಾತೆ ಬಯಸಿದಲ್ಲಿ, ನಮ್ಮ ಶಕ್ತಿಗಳು ಎಂದು ನಾವು ಭಾವಿಸಿಕೊಂಡಿರುವ ಆ ಎಲ್ಲಾ ತಾಕತ್ತುಗಳ ಹೊರತಾಗಿಯೂ ನಮ್ಮನ್ನು ಮಂಡಿಯೂರಿ ಕೂಡುವಂತೆ ಆಕೆ ಮಾಡಬಲ್ಲಳು.

ನಮ್ಮೆಲ್ಲ ಶಕ್ತಿಗಳ ಪೈಕಿ, ಮನುಷ್ಯರು ಸದಾ ಹೆಮ್ಮೆಪಡುವಂತಹ ಸಾಮರ್ಥ್ಯವೆಂದರೆ, ನಾವು ಕಾಯ್ದುಕೊಂಡು ಬಂದಿರುವ ಬಲವಾದ ಸಾಮಾಜಿಕ ಬಂಧನಗಳು. ನಮ್ಮ ಸೋದರತ್ವದ ಬಗ್ಗೆ ನಾವು ಸದಾ ಹೆಮ್ಮೆಪಡುತ್ತಿದ್ದೆವು. ಆದರೆ, ಕೋವಿಡ್-19 ಬರುವ ಮೂಲಕ ಅದು ಕೂಡ ನಮ್ಮಿಂದ ದೂರವಾಗುವಂತೆ ಆಗಿದೆ. ಅದಾಗ್ಯೂ, ಸಮಾನ ಮನಸ್ಕರ ಜೊತೆಯನ್ನು ಬಯಸುವ ನಮ್ಮ ಸ್ವಭಾವ ಇನ್ನೂ ಬಲವಾಗಿಯೇ ಇದೆ. ಹೀಗಾಗಿ, ಇಡೀ ಜಗತ್ತು ಸ್ಥಗಿತವಾಗಿರುವಾಗಲೂ, ಆತ್ಮೀಯ ಸಂವಹನ ನಿಂತುಹೋಗಿರುವಾಗಲೂ, “ಸಾಮಾಜಿಕ (ದೈಹಿಕ) ಅಂತರ”ವನ್ನು ರೂಢಿಸಿಕೊಳ್ಳುತ್ತಿರುವಾಗಲೂ, ನಾವು ವಾಸ್ತವ ಜಗತ್ತನ್ನು ಅಪ್ಪಿಕೊಳ್ಳಲು ಪ್ರಾರಂಭಿಸಿದ್ದೇವೆ.

ದೈಹಿಕವಾಗಿ ಸಂವಹನ ನಡೆಸುವುದು ಸಾಧ್ಯವಿಲ್ಲದಿರುವುದರಿಂದ, ಜನ ಸಾಮಾಜಿಕ ತಾಣಗಳನ್ನು ಇನ್ನಷ್ಟು ಉತ್ಸಾಹದಿಂದ ಬಳಸತೊಡಗಿದ್ದಾರೆ. ಸಾಮಾಜಿಕ ತಾಣಗಳು ಜನರನ್ನು ಜೋಡಿಸುವ ಸಾಧನಗಳಾಗಿದ್ದವಷ್ಟೇ ಅಲ್ಲ, ಪ್ರಮುಖ ತಾಣಗಳು ಮಾಹಿತಿಯನ್ನು ಜನರಿಗೆ ತಲುಪಿಸುವ ಪ್ರಮುಖ ಮೂಲಗಳೂ ಆಗಿದ್ದವು. ಈಗ ಇಂತಹ ಸಂಕಷ್ಟ ಕಾಲದಲ್ಲಿ, ಜನರ ನಿರ್ಧರಿಸುವ ಪ್ರಕ್ರಿಯೆಯ ಮೇಲೆಯೂ ಅವು ಕ್ರಮೇಣ ಪ್ರಭಾವ ಬೀರುವಂತಾಗಿದೆ. ಸಾಮಾಜಿಕ ತಾಣಗಳ ಮೂಲಕ ಮಾಹಿತಿ ಹರಿವು ನಿಜಕ್ಕೂ ವರವಾಗಿದ್ದರೂ ಸಹ ತಪ್ಪು ಮಾಹಿತಿಯ ಹರಿವು ಆತಂಕ ತರುವಂತಹ ಸಂಗತಿಯಾಗಿ ಪರಿಣಮಿಸಿದೆ. ಕೋವಿಡ್-‌19 ಕುರಿತ ನಿಖರ ಮತ್ತು ಕಲಸುಮೇಲೋಗರ ಮಾಹಿತಿ ವಿಧಗಳೆರಡರ ಉಕ್ಕುವಿಕೆ ಎಂಬ “ಸಾಂಕ್ರಾಮಿಕ ಮಾಹಿತಿ”ಯು ಅಸಲಿ ಸೋಂಕು ನಿಗ್ರಹ ಪ್ರಯತ್ನಕ್ಕೆ ಎಲ್ಲಿ ಅಡ್ಡಿಯಾಗುತ್ತದೋ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಕಳವಳ ವ್ಯಕ್ತಪಡಿಸಿದೆ.

ತಪ್ಪು ಸಂದೇಶ ಹರಡುವುದನ್ನು ತಡೆಯುವಲ್ಲಿ ವೈಫಲ್ಯತೆ ತೋರುವ ಕಾರಣಕ್ಕೆ ಸಾಮಾಜಿಕ ಮಾಧ್ಯಮ ಕಂಪನಿಗಳ ಮೇಲೆ ಸದಾ ಗಮನ ಇರುತ್ತದೆ. ಆದರೆ, ಈ ಸಲ ವೈಫಲ್ಯತೆಯೇ ಪ್ರಮುಖ ವಿಷಯವಾಗಿಲ್ಲ. ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗ ಈ ಕಂಪನಿಗಳ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆಯಷ್ಟೇ ಅಲ್ಲ, ತಮ್ಮ ಹಿಂದಿನ ತಪ್ಪುಗಳನ್ನು ತಿದ್ದುಕೊಳ್ಳುವ ಅವಕಾಶವನ್ನೂ ಅವಕ್ಕೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಸಂದರ್ಭಕ್ಕೆ ಸೂಕ್ತವಾಗುವ ರೀತಿ ಪುಟಿದೇಳುವ ಪ್ರಯತ್ನಗಳನ್ನು ಈ ಸಾಮಾಜಿಕ ಮಾಧ್ಯಮ ದೈತ್ಯರು ನಡೆಸಿದ್ದಾರೆ.

ಕೇಂಬ್ರಿಡ್ಜ್‌ ಅನಲಿಟಿಕಾ ಹಗರಣದ ನಂತರ ಸಾಮಾಜಿಕ ತಾಣಗಳು ಕೋಟ್ಯಂತರ ಜನರ ವಿಶ್ವಾಸವನ್ನು ಕಳೆದುಕೊಂಡಿವೆ. ತಪ್ಪು ಮಾಹಿತಿ ಹರಡುವಿಕೆಯ ಪ್ರಾರಂಭದಲ್ಲಿಯೇ ಅದರ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿದ್ದ ಫೇಸ್‌ಬುಕ್‌, ಬಲವಾದ ಹೋರಾಟವನ್ನು ವ್ಯವಸ್ಥಿತವಾಗಿ ನಡೆಸುತ್ತ ಬಂದಿತು. ಇತರ ಸಾಮಾಜಿಕ ತಾಣ ದೈತ್ಯಗಳಾದ ಟ್ವಿಟರ್‌ ಮತ್ತು ಯುಟ್ಯೂಬ್‌ಗಳು ಸಹ ತಪ್ಪು ಮಾಹಿತಿ ಹತ್ತಿಕ್ಕಲು ಸೂಕ್ತ ಕ್ರಮಗಳನ್ನು ಕೈಗೊಂಡವಾದರೂ, ಪ್ರತಿಯೊಬ್ಬರೂ ಮಾಡಲೇಬೇಕಿರುವ ಕೆಲಸ ಇನ್ನೂ ಸಾಕಷ್ಟು ಬಾಕಿ ಉಳಿದಿದೆ.

ಮಾಹಿತಿ ಪ್ರವಾಹ ನಿಭಾಯಿಸುವುದು : ಯಾವುದೇ ವಿಷಯವಿರಲಿ, ಸಾಮಾಜಿಕ ಮಾಧ್ಯಮ ಕಂಪನಿಗಳು ಅದನ್ನು ಮೇಲೇರಿಸಬಲ್ಲವು. ಕೆಳಗೆ ತಳ್ಳಬಲ್ಲವು ಅಥವಾ ಇಡೀಯಾಗಿ ನಿರ್ಬಂಧಿಸಬಲ್ಲವು. ಫೇಸ್‌ಬುಕ್‌ ಪ್ರಕಾರ, ಸರಾಸರಿ ಬಳಕೆದಾರರು ತಮ್ಮ ನ್ಯೂಸ್‌ ಫೀಡ್‌ನ ವಿಷಯಗಳಲ್ಲಿ ಕೇವಲ ಶೇ.10ರಷ್ಟು ಮಾತ್ರ ನೋಡುತ್ತಾರೆ ಹಾಗೂ ಸುದ್ದಿ ಕಾಣಿಸಿಕೊಳ್ಳುವ ಕ್ರಮವನ್ನು ಬದಲಿಸುವ ಮೂಲಕ ಬಳಕೆದಾರರು ಏನು ನೋಡಬೇಕು ಎಂಬುದನ್ನು ಫ್ಲ್ಯಾಟ್‌ಫಾರ್ಮ್‌ಗಳು ನಿರ್ಧರಿಸುತ್ತವೆ. ಇದರರ್ಥ.. ಪೋಸ್ಟ್‌ ಒಂದನ್ನು ಮೇಲೆತ್ತುವುದು ಮತ್ತು ಕೆಳಗೆ ತಳ್ಳುವುದು, ಅವನ್ನು ಇಡೀಯಾಗಿ ನಿರ್ಬಂಧಿಸುವಷ್ಟೇ ಅವಶ್ಯಕ. ಆದರೆ, ಯಾವುದೇ ಪೋಸ್ಟ್‌ನ ನಿರ್ಬಂಧಿಸುವುದೂ ಅಷ್ಟೇ ಕಷ್ಟಕರ ಎಂಬುದು ಸಾಬೀತಾಗಿದೆ. ಏಕೆಂದರೆ, ಅದು ವಾಕ್‌ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿಗೆ ವಿರುದ್ಧವಾಗುವುದರಿಂದ.

ಫೇಸ್‌ಬುಕ್‌ನಂತಹ ಕಂಪನಿಯು ಮೂರನೇ ಪಕ್ಷಗಾರರ ವಾಸ್ತವಾಂಶ ಪರೀಕ್ಷಕರು ಹಾಗೂ ಆರೋಗ್ಯ ಅಧಿಕಾರಿಗಳು ಗುರುತಿಸುವ ಸಮಸ್ಯಾತ್ಮಕ ಮಾಹಿತಿ ಆಧರಿಸಿ ಈ ಮಾನದಂಡಗಳಲ್ಲಿ ವಿಫಲವಾಗುವ ಪೋಸ್ಟ್‌ಗಳನ್ನು ತೆಗದುಹಾಕುತ್ತದೆ. ಅದೇ ರೀತಿ ತನ್ನ ಸೋದರ ವೇದಿಕೆಯಾದ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹ್ಯಾಶ್‌ಟ್ಯಾಗ್‌ ಮೂಲಕ ಹರಡುವ ತಪ್ಪು ಮಾಹಿತಿ ನಿರ್ಬಂಧಿಸುತ್ತದೆ ಅಥವಾ ಮಿತಿಗೊಳಿಸುತ್ತದೆ.

ಇನ್ನೊಂದೆಡೆ ಟ್ವಿಟರ್‌ ಮತ್ತು ಯುಟ್ಯೂಬ್‌ಗಳು, ತಮ್ಮ ಪ್ರಯತ್ನವನ್ನು ನಿರಂತರವಾಗಿ ನಡೆಸುತ್ತ ಬಂದಿವೆ. ಕಳಂಕ ತರುವಂತಹ ನಡವಳಿಕೆಗಳ ವಿರುದ್ಧ ರಕ್ಷಣೆ ಹೊಂದಲು ಕ್ರಮಗಳನ್ನು ಕೈಗೊಂಡಿರುವುದಾಗಿ ಟ್ವಿಟರ್‌ ಹೇಳಿದೆ. ನಂಬಿಕೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ವಿಭಾಗಗಳ ಟ್ವಿಟರ್‌ನ ಉಪಾಧ್ಯಕ್ಷ ಡೆಲ್‌ ಹಾರ್ವೆ ಪ್ರಕಾರ, ತಪ್ಪು ಮಾಹಿತಿ ಅಥವಾ ತಿರುಚುವಿಕೆಯಂತಹ ಯಾವುದೇ ಪ್ರಯತ್ನವನ್ನು ಕಿತ್ತು ಹಾಕಲಾಗುತ್ತದೆ. ಸೋಂಕನ್ನು ತಡೆಹಿಡಿದಿದ್ದಾಗಿ ಹೇಳಿಕೊಳ್ಳುವಂತಹ ವಿಡಿಯೋಗಳನ್ನು ಯುಟ್ಯೂಬ್‌ ತೆಗೆದುಹಾಕಿದೆ. ಅದಾಗ್ಯೂ, ಈ ಎರಡೂ ಕಂಪನಿಗಳು ಸದೃಢ ವಾಸ್ತವಾಂಶ ಪರಿಶೀಲನೆ ಆಧರಿತ ಪಾರದರ್ಶಕ ನಿರ್ಬಂಧಕ ಮಾನದಂಡಗಳನ್ನು ಹೊಂದಿಲ್ಲ.

ಎಲ್ಲಾ ಮೂರೂ ವೇದಿಕೆಗಳು ಸಮಸ್ಯಾತ್ಮಕ ವಿಷಯವನ್ನು ತಗ್ಗಿಸಿ, ಅಧಿಕೃತ ಮೂಲಗಳನ್ನು ಆಧರಿಸಿದ ವಿಷಯಕ್ಕೆ ಉತ್ತೇಜನ ನೀಡುತ್ತಿವೆ. ಆದರೆ, ವಾಸ್ತವಾಂಶಗಳನ್ನು ನಿರಂತರವಾಗಿ ಪರಿಶೀಲನೆಗೆ ಒಳಪಡಿಸುವ ಮಾನದಂಡಗಳು ಇಲ್ಲದಿರುವುದು ದೋಷಪೂರಿತ ವಲಯಗಳಿಗೆ ಕಾರಣವಾಗಿದೆ. ಮುಖ್ಯವಾಗಿ ಟ್ವಿಟರ್‌ನಲ್ಲಿ ಅಂತಹ ಕಡೆ ತಪ್ಪು ಮಾಹಿತಿ ನುಸುಳುವ ಸಾಧ್ಯತೆಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.