ETV Bharat / bharat

ಸಾಮಾಜಿಕ ಅಂತರವೇ ಈ ಬುಡಕಟ್ಟು ಜನಾಂಗದ ಜೀವನಶೈಲಿ !

author img

By

Published : Apr 14, 2020, 11:28 PM IST

ಸಾಮಾಜಿಕ ಅಂತರ ಕಾಪಾಡುವುದನ್ನು ತಮ್ಮ ನಿತ್ಯದ ಜೀವನದಲ್ಲೇ ಅಳವಡಿಸಿಕೊಂಡಿರುವ ಬುಡಕಟ್ಟು ಜನಾಂಗವೊಂದು ಭಾರತದಲ್ಲಿದೆ. ನೂರಾರು ವರ್ಷಗಳಿಂದ ಇವರು ಹೀಗೆಯೇ ಬದುಕುತ್ತಿದೆ. ಅಣ್ಣ ತಮ್ಮಂದಿರಾಗಿರಲಿ, ಬಂಧು - ಬಳಗವೇ ಆಗಿರಲಿ ದೂರವಿದ್ದಷ್ಟೂ ಸ್ನೇಹ, ಪ್ರೀತಿ ಜಾಸ್ತಿ ಎಂಬ ನಂಬಿಕೆಯೇ ಇದಕ್ಕೆ ಕಾರಣವಂತೆ.

tradition-of-tribals
tradition-of-tribals

ಪ್ರತಾಪಗಢ (ರಾಜಸ್ಥಾನ): ಕೊರೊನಾ ಸೋಂಕು ಹರಡಲಾರಂಭಿಸಿದ ನಂತರವಷ್ಟೇ ನಾವೆಲ್ಲ ಸಾಮಾಜಿಕ ಅಂತರ ಪಾಲಿಸಲಾರಂಭಿಸಿದ್ದು. ಆದರೆ ಸಾಮಾಜಿಕ ಅಂತರ ಕಾಪಾಡುವುದನ್ನು ತಮ್ಮ ನಿತ್ಯದ ಜೀವನದಲ್ಲೇ ಅಳವಡಿಸಿಕೊಂಡಿರುವ ಬುಡಕಟ್ಟು ಜನಾಂಗವೊಂದು ಭಾರತದಲ್ಲಿದೆ. ನೂರಾರು ವರ್ಷಗಳಿಂದ ಇವರು ಹೀಗೆಯೇ ಬದುಕುತ್ತಿದ್ದಾರೆ.

ಪ್ರತಾಪಗಢ ಜಿಲ್ಲೆಯ ಪೀಪಲಖೂಂಟ್ ಉಪವಿಭಾಗದ ಘಂಟಾಲಿಯಲ್ಲಿ ಸಾಲು ಸಾಲಾಗಿ ಆದಿವಾಸಿ ಜನಾಂಗದವರ ಗುಡಿಸಲುಗಳಿವೆ. ಕಳೆದ ಹಲವಾರು ದಶಕಗಳಿಂದ ಈ ಜನಾಂಗದವರು ಸಾಮಾಜಿಕ ಅಂತರ ಕಾಯ್ದುಕೊಂಡೇ ಬದುಕುತ್ತಿದ್ದಾರೆ ಎಂಬುದು ಇಲ್ಲಿಗೆ ಹೋದವರಿಗೆ ಅರ್ಥವಾಗುತ್ತದೆ. ಇವರು ಒಂದು ಗುಡಿಸಲು ಪಕ್ಕದಲ್ಲೇ ಇನ್ನೊಂದು ಗುಡಿಸಲು ನಿರ್ಮಿಸುವುದೇ ಇಲ್ಲ. ಒಂದು ಕುಟುಂಬದಲ್ಲಿ ಮೂವರು ಅಣ್ಣ ತಮ್ಮಂದಿರಿದ್ದರೆ ಎಲ್ಲರೂ ಪ್ರತ್ಯೇಕ ಗುಡಿಸಲುಗಳಲ್ಲೇ ವಾಸಿಸುತ್ತಾರೆ. ಗುಡಿಸಲುಗಳ ಮಧ್ಯೆ ಸಾಕಷ್ಟು ದೂರವಿರುವಂತೆಯೂ ನೋಡಿಕೊಳ್ಳುತ್ತಾರೆ. ಅಣ್ಣ ತಮ್ಮಂದಿರಾಗಿರಲಿ, ಬಂಧು-ಬಳಗವೇ ಆಗಿರಲಿ ದೂರವಿದ್ದಷ್ಟೂ ಸ್ನೇಹ, ಪ್ರೀತಿ ಜಾಸ್ತಿ ಎಂಬ ನಂಬಿಕೆಯೇ ಇದಕ್ಕೆ ಕಾರಣವಂತೆ.

ಕೈ ಮಿಲಾಯಿಸಲು ಹಿಂದೇಟು: ಇಲ್ಲಿನ ಆದಿವಾಸಿಗಳು ಯಾರೊಂದಿಗೂ ಕೈ ಮಿಲಾಯಿಸಿ ಮಾತನಾಡುವುದಿಲ್ಲ. ಅದರ ಬದಲು ಜೈ ಜೌಹಾರ್, ಜೈ ಮಾಲಿಕ್, ಜೈ ಗುರು ಎಂದು ಹೇಳಿ ದೂರದಿಂದಲೇ ನಮಸ್ಕರಿಸುತ್ತಾರೆ. ಅತಿಥಿಗಳು ಬಂದರೆ ಕೂರಲು ಮನೆಯ ಹೊರಗೆ ಚಿಕ್ಕ ಪ್ರಾಂಗಣ ನಿರ್ಮಿಸಲಾಗಿರುತ್ತದೆ. ಅತಿಥಿಗಳು ನೇರವಾಗಿ ಮನೆಯ ಒಳಗೆ ಹೋಗುವಂತಿಲ್ಲ.

ದೂರವಿದ್ದಷ್ಟೂ ಅಪಾಯ ಕಡಿಮೆ: ಮನೆಗಳು ದೂರವಿದ್ದು, ಎಲ್ಲರೂ ಪ್ರತ್ಯೇಕವಾಗಿ ವಾಸಿಸುವುದರಿಂದ ಒಬ್ಬರಿಗೆ ಬಂದ ರೋಗ ಇನ್ನೊಬ್ಬರಿಗೆ ಬರಲಾರದು. ಹೀಗಾಗಿ ಸಾವಿನ ಪ್ರಮಾಣವನ್ನೂ ಕಡಿಮೆ ಮಾಡಬಹುದು ಎಂಬುದು ಇವರ ತರ್ಕವಾಗಿದೆ.

ನೃತ್ಯ ಮಾಡುವಾಗಲೂ ಸಾಮಾಜಿಕ ಅಂತರ: ತಮ್ಮದೇ ಆದ ಬುಡಕಟ್ಟು ಶೈಲಿಯ ನೃತ್ಯ ಮಾಡುವಾಗಲೂ ಒಬ್ಬರಿಂದೊಬ್ಬರು ದೂರವಿದ್ದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಇವರ ವೈಶಿಷ್ಯವಾಗಿದೆ.

ಸಭೆಗಳಲ್ಲೂ ದೂರ ದೂರ: ಆದಿವಾಸಿ ಜನರ ಸಭೆ ನಡೆದಾಗ ಎಲ್ಲರೂ ಕನಿಷ್ಠ ಒಂದೊಂದು ಮೀಟರ್​ ಅಂತರದಲ್ಲಿ ಕುಳಿತುಕೊಳ್ಳುತ್ತಾರೆ.

ಮೊದಲ ದೇವರು ಪ್ರಕೃತಿ ಮಾತೆ: ಇಲ್ಲಿನ ಆದಿವಾಸಿಗಳು ದೇವರ ಪೂಜೆಗೂ ಮುನ್ನ ಪ್ರಕೃತಿ ಮಾತೆಯ ಪೂಜೆ ನೆರವೇರಿಸುತ್ತಾರೆ. ವಿನಾಶಗಳಿಂದ ತಮ್ಮನ್ನು ರಕ್ಷಿಸುವಂತೆ ಇವರು ಮೊದಲಿಗೆ ಪ್ರಕೃತಿ ಮಾತೆಯನ್ನೇ ಬೇಡಿಕೊಳ್ಳುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.