ETV Bharat / bharat

ರಾಹುಲ್​, ಪ್ರಿಯಾಂಕಾ ಹಥ್ರಾಸ್​ ಭೇಟಿ ರಾಜಕೀಯ ಪ್ರೇರಿತ: ಸ್ಮೃತಿ ಇರಾನಿ ವಾಗ್ದಾಳಿ - ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ

ರಾಹುಲ್​ ಗಾಂಧಿ ಹಥ್ರಾಸ್​ ಭೇಟಿ ಕೇವಲ ರಾಜಕೀಯ ಪ್ರೇರಿತವಾಗಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ.

Smriti Irani talk
Smriti Irani talk
author img

By

Published : Oct 3, 2020, 5:22 PM IST

ನವದೆಹಲಿ: ಉತ್ತರ ಪ್ರದೇಶದ ಹಥ್ರಾಸ್​ನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣ ರಾಜಕೀಯ ಬಣ್ಣ ಪಡೆದುಕೊಂಡಿದೆ. ಸಂತ್ರಸ್ತೆ ಕುಟುಂಬ ಭೇಟಿ ಮಾಡಲು ಮುಂದಾಗಿರುವ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಿರುದ್ಧ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ.

ಸ್ಮೃತಿ ಇರಾನಿ ವಾಗ್ದಾಳಿ

ಸಂತ್ರಸ್ತೆ ಕುಟುಂಬ ಭೇಟಿ ಮಾಡಲು ಮುಂದಾಗಿರುವ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ನಿರ್ಧಾರ ರಾಜಕೀಯ ಪ್ರೇರಿತ. ಸಂತ್ರಸ್ತೆ ಕುಟುಂಬಕ್ಕೆ ನ್ಯಾಯಾ ಒದಗಿಸುವ ಉದ್ದೇಶ ಅವರಲ್ಲಿ ಇಲ್ಲ ಎಂದಿದ್ದಾರೆ.ಕಾಂಗ್ರೆಸ್​​ ತಂತ್ರಗಳ ಬಗ್ಗೆ ದೇಶದ ಜನರಿಗೆ ಗೊತ್ತಾಗಿದೆ. ಹೀಗಾಗಿ 2019ರಲ್ಲಿ ಭಾರತೀಯ ಜನತಾ ಪಾರ್ಟಿ ಐತಿಹಾಸಿಕ ಗೆಲುವು ದಾಖಲು ಮಾಡಿದೆ. ಈ ಭೇಟಿ ಕೇವಲ ರಾಜಕೀಯ ಪ್ರೇರಿತ ಎಂಬುದು ಜನರಿಗೆ ಈಗಾಗಲೇ ಗೊತ್ತಾಗಿದೆ ಎಂದಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಹಥ್ರಾಸ್​ಗೆ ಭೇಟಿ ನೀಡಲು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಮುಂದಾಗಿದ್ದರು. ಈ ವೇಳೆ ಅವರನ್ನ ಪೊಲೀಸರು ತಡೆ ಹಿಡಿದಿದ್ದರು. ಇಂದು ಅವರು ಮತ್ತೊಮ್ಮೆ ಪ್ರಯಾಣ ಬೆಳೆಸಿದ್ದು, ರಾಹುಲ್​,ಪ್ರಿಯಾಂಕಾ ಸೇರಿ ಕೇವಲ ಐವರಿಗೆ ಅನುಮತಿ ನೀಡಲಾಗಿದೆ.

ಕಳೆದ ಎರಡು ವಾರಗಳ ಹಿಂದೆ ಉತ್ತರ ಪ್ರದೇಶದ ಹಥ್ರಾಸ್​​ನಲ್ಲಿ ದಲಿತ ಯುವತಿ ಮೇಲೆ ಅತ್ಯಾಚಾರ ನಡೆದಿತ್ತು. ಆಕೆಯ ಪರಿಸ್ಥಿತಿ ಗಂಭೀರಗೊಂಡಿದ್ದ ಕಾರಣ ದೆಹಲಿಯ ಸಫ್ತರ್​ಜಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೆಪ್ಟೆಂಬರ್​ 29ರಂದು ಯುವತಿ ಸಾವನ್ನಪ್ಪಿದ್ದಳು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.