ನವದೆಹಲಿ: ಭಾರತೀಯ ಸೇನೆಯ ಬಲಿದಾನದ ಸಂಕೇತವಿರುವ ಗ್ಲೌಸ್ ತೊಟ್ಟು ಐಸಿಸಿ ಕೆಂಗಣ್ಣಿಗೆ ಗುರಿಯಾಗಿರುವ ಕ್ರಿಕೆಟಿಗ ಎಂ ಎಸ್ ಧೋನಿ ಪರವಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹ ಧ್ವನಿ ಎತ್ತಿದ್ದಾರೆ.
ಕೇಂದ್ರ ಮಹಿಳಾ ಮತ್ತು ಕಲ್ಯಾಣ ಸಚಿವೆ ಸ್ಮೃತಿ ಇರಾನಿ, ತಮ್ಮ ಇನ್ಸ್ಟಗ್ರಾಂ ಖಾತೆಯಲ್ಲಿ ಧೋನಿ ಬೆಂಬಲಿಸುವ ಪೋಸ್ಟ್ವೊಂದನ್ನು ಮಾಡಿದ್ದಾರೆ. ಈ ಪೋಸ್ಟ್ನಲ್ಲಿ ಬಲಿದಾನದ ಸಂಕೇತವಿದ್ದು, ಜತೆಗೆ "You'll never see us cause we don't exist, you'll never hear about us cause it never happened, we don't exist so that you can. Men apart, every man an emperor," ಎಂದು ಬರೆದಿದ್ದಾರೆ.
- " class="align-text-top noRightClick twitterSection" data="
">
ನೀನು ನಮ್ಮನ್ನು ನೋಡಿಲಿಲ್ಲವಾದರೆ ನಾವು ಇಲ್ಲವೆಂದಾಯ್ತೇ, ನೀನು ನಮ್ಮ ಮಾತು ಕೇಳಿಲಿಲ್ಲವಾದರೆ ಅದು ನಡೆಯುವುದೇ ಇಲ್ಲವೇ, ನಾವು ಇಲ್ಲದೇ ಇದ್ದಾಗ ಮಾತ್ರ ನೀನು ಏನು ಬೇಕಾದರೂ ಮಾಡಬಹುದು. ಮನುಷ್ಯ ಸಂಕುಲದಲ್ಲಿ ಎಲ್ಲರೂ ಚಕ್ರವರ್ತಿಗಳೇ ಎಂಬರ್ಥದಲ್ಲಿ ಅವರು ಬರೆದಿದ್ದಾರೆ.
ಇಂಗ್ಲೆಂಡ್ನಲ್ಲಿ ನಡೆದ ವಿಶ್ವಕಪ್ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಧೋನಿ ಭಾರತೀಯ ಸೇನೆಯ ಬಲಿದಾನದ ಸಂಕೇತವಿರುವ ಗ್ಲೌಸ್ ಧರಿಸಿದ್ದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್ ನಿಮಯಕ್ಕೆ ವಿರುದ್ಧ ಎಂದ ಐಸಿಸಿ, ಮೊದಲು ಆ ಸಂಕೇತವನ್ನು ತೆಗೆದುಹಾಕುವಂತೆ ಬಿಸಿಸಿಐಗೆ ತಿಳಿಸಿತ್ತು. ಇದಾದ ಬಳಿಕ ಹಲವು ಗಣ್ಯರು, ಅಭಿಮಾನಿಗಳು ಧೋನಿ ಪರ ನಿಂತು ಆ ಸಂಕೇತ ತೆಗೆಯಬೇಡಿ ಎಂದು ಬೆಂಬಲಿಸುತ್ತಿದ್ದಾರೆ.