ಮುಂಬೈ: ಮಹಾರಾಷ್ಟ್ರದಲ್ಲಿ ವರುಣ ರುದ್ರನರ್ತನದಿಂದ ಜನರ ಬದುಕು ಅಕ್ಷರಶಃ ಬೀದಿಗೆ ಬಂದಿದೆ. ಭೀಕರ ಮಳೆಯಿಂದ ನದಿಗಳು ಉಕ್ಕಿ ಹರಿದು, ರಸ್ತೆಗಳೂ ನದಿಯಂತಾಗಿವೆ. ಎಲ್ಲೆಡೆ ಭಯಾನಕ ದೃಶ್ಯಗಳೇ ಕಂಡು ಬರುತ್ತಿರುವಾಗ, ಅಪರೂಪದ ದೃಶ್ಯವೊಂದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ದಹನು -ನಾಸಿಕ್ ಹೈವೇಯ ಕಾಸಾ ಎಂಬಲ್ಲಿರುವ ಸೂರ್ಯ ನದಿಯ ಹಳೆಯ ಸೇತುವೆ ಬಳಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಉಕ್ಕಿ ಹರಿಯುತ್ತಿರುವ ನದಿ ನೀರಿನ ನಡುವೆಯೂ ಸೇತುವೆ ಮೇಲೆ ಐದು ಹಸುಗಳು ಸಾಗುತ್ತಿರುವಾಗ, ನಾಲ್ಕು ಹಸುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇದೆನ್ನೆಲ್ಲ ನೋಡಿದ ಮತ್ತೊಂದು, ಪ್ರಾಣಾಪಾಯ ತರುವ ಆ ಸಂದಿಗ್ಧ ಸನ್ನಿವೇಶದಲ್ಲಿ ಬುದ್ಧಿ ಉಪಯೋಗಿಸಿ ಪಾರಾದ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿರುವಂತೆ, ಉಕ್ಕೇರಿ ಹರಿಯುತ್ತಿದ್ದ ನದಿ ನೀರಿನಲ್ಲಿ ಸೇತುವೆ ಮೇಲೆ ಐದು ಹಸುಗಳ ಸಾಗುತ್ತಿರುತ್ತವೆ. ಹೆಚ್ಚು ನೀರು ಹರಿಯುತ್ತಿರುವತ್ತ ಗೊತ್ತಿಲ್ಲದೇ ಹೋಗುವ ನಾಲ್ಕು ಹಸುಗಳು ಒಂದಾದ ಮೇಲೆ ಒಂದು ನೀರಿನಲ್ಲಿ ಕೊಚ್ಚಿಹೋಗುತ್ತವೆ. ತನ್ನ ಹಿಂದಿನ ಹಾಗೂ ಮುಂದಿನ ಹಸುಗಳು ನೀರಿನಲ್ಲಿ ಕೊಚ್ಚಿಹೋಗಿದ್ದನ್ನು ಗಮನಿಸಿ, ತಾನೂ ಮುಂದೆ ಹೋದರೆ ಸಾವು ಖಚಿತ ಎಂದು ಅರಿತು, ಹಿಂದಕ್ಕೆ ಓಡಿದೆ. ಸಮಯಪ್ರಜ್ಞೆ ಮೆರೆದು ತನ್ನ ಪ್ರಾಣವನ್ನು ಆ ಸಂದರ್ಭಕ್ಕೆ ಉಳಿಸಿಕೊಂಡ ಹಸು ಆ ಮೇಲೇನಾಯ್ತು, ಗೊತ್ತಿಲ್ಲ.