ETV Bharat / bharat

ಮದುವೆಗೆಂದು ಬಂದ ಬಾಲಕಿಯ ಬರ್ಬರ ಹತ್ಯೆ - Six years old girl brutally murdered in Chitoor

ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಸಂಬಂಧಿಕರ ಮದುವೆಗೆಂದು ಬಂದ ಬಾಲಕಿಯೋರ್ವಳು ಬರ್ಬರವಾಗಿ ಹತ್ಯೆಯಾಗಿದ್ದಾಳೆ.

ಸಾಂದರ್ಭಿಕ ಚಿತ್ರ
author img

By

Published : Nov 9, 2019, 2:36 PM IST

ಚಿತ್ತೂರು(ಆಂಧ್ರಪ್ರದೇಶ): ಆರು ವರ್ಷ ಬಾಲಕಿಯೋರ್ವಳು ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಆಂಧ್ರ ಪ್ರದೇಶದ ಕುರಬಾಲ ಕೋಟಾ ಪ್ರದೇಶದಲ್ಲಿ ನಡೆದಿದೆ.

ಈ ಬಾಲಕಿಯು ಗುಟ್ಟಪಾಲ್ಯಮ್​​ ಗ್ರಾಮದವಳಾಗಿದ್ದು, ಸಂಬಧಿಕರ ಮದುವೆಗೆಂದು ಕುರಬಾಲಕ್ಕೆ ಕುಟುಂಬದೊಂದಿಗೆ ಬಂದಿದ್ದಳು. ಗುರುವಾರ ರಾತ್ರಿ ವೇಳೆ ಈಕೆ ನಾಪತ್ತೆಯಾಗಿದ್ದು, ಶುಕ್ರವಾರ ಬೆಳಿಗನ ಜಾವ ಕಲ್ಯಾಣ ಮಂಟಪದ ಬಳಿಯ ಪೊದೆಯೊಂದರ ಮಧ್ಯೆ ಬಾಲಕಿಯ ಶವ ಪತ್ತೆಯಾಗಿದೆ.

ಇನ್ನು ಈ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಕಲ್ಯಾಣ ಮಂಟಪದ ಸಿಸಿಟಿವಿ ಫೂಟೇಜ್​ ಪರಿಶೀಲನೆ ನಡೆಸಿದ್ದಾರೆ. ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.

ಇನ್ನು ಈ ಕುರಿತು ಸೆಕ್ಷೆನ್​ 302ರಡಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Intro:Body:

film

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.