ತಮಿಳುನಾಡು: ತಿನಿಸು ಎಂದುಕೊಂಡು ಜಿಲೆಟಿನ್ ಕಡ್ಡಿ ತಿಂದು ಆರು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ನಡೆದಿದೆ.
ತಿರುಚಿರಾಪಳ್ಳಿ ನಿವಾಸಿ ಭೂಪತಿ ಎಂಬವರ ಪುತ್ರ ಮೃತ ಬಾಲಕ. ಭೂಪತಿಯವರ ಸಹೋದರ ಮೀನುಗಾರಿಕೆಗೆಂದು ಮೂರು ಸ್ಫೋಟಕ ಜಿಲೆಟಿನ್ ಕಡ್ಡಿಗಳನ್ನು ಮನೆಗೆ ತಂದಿದ್ದರು. ಇದರಲ್ಲಿ ಎರಡು ಕಡ್ಡಿಗಳನ್ನು ಬಳಕೆ ಮಾಡಲಾಗಿದ್ದು, ಒಂದು ಹಾಗೆಯೇ ಉಳಿದಿತ್ತು. ಇದನ್ನು ನೋಡಿದ ಬಾಲಕ ತಿನ್ನುವ ವಸ್ತು ಎಂದುಕೊಂಡು ಸೇವಿಸಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.